ಕನ್ನಡ ಭಾಷೆ ಉಳಿಸಲು ಹೋರಾಟದ ಅಗತ್ಯವಿಲ್ಲ: ಡಿ ಮಂಜುನಾಥ್

ಕನ್ನಡ ಭಾಷೆ ಉಳಿಸಲು ಹೋರಾಟದ ಅಗತ್ಯವಿಲ್ಲ: ಡಿ ಮಂಜುನಾಥ್

ಶಿಕಾರಿಪುರ: ನಾವು ಕನ್ನಡ ಉಳಿಸಲು ದೊಡ್ಡ ದೊಡ್ಡ ಹೋರಾಟಗಳನ್ನು ಮಾಡುವ ಅಗತ್ಯವಿಲ್ಲ ಬದಲಾಗಿ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಕನ್ನಡ ಭಾಷೆಯನ್ನೇ ನಿರಂತರ ಮಾತನಾಡುವ ಮೂಲಕ ಭಾಷೆಯನ್ನು ನಿರಂತರವಾಗಿಸಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿ ಮಂಜುನಾಥ್ ಹೇಳಿದರು

ಶಿಕಾರಿಪುರ ಪಟ್ಟಣದ ಜುಬೇದಾ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಚಿಂತನ ಮಂಥನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಕಥೆ ಕವನ ಜಾನಪದ ಗೀತೆಗಳ ಬಗ್ಗೆ ಅರಿವು ಮೂಡಿಸುತ್ತಾ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸುತ್ತಾ ಮುನ್ನಡೆದರೆ ಭಾಷೆ ತಾನಾಗಿ ಸದೃಢಗೊಳ್ಳುತ್ತದೆ ಈ ರೀತಿ ಕೆಲಸಗಳು ಶಾಲಾ ಹಂತದಲ್ಲಿ ನಡೆಯುವ ಅಗತ್ಯವಿದ್ದು ಈ ರೀತಿಯ ಕಾರ್ಯಕ್ರಮಗಳಿಗೆ ಪೋಷಕರು ಶಿಕ್ಷಕರು ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದರೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತದೆ .

ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ನಾವು ನವೆಂಬರ್ ಕನ್ನಡಿಗರಾಗದೆ ನಿರಂತರ ಕನ್ನಡಿಗರಾಗೋಣ ಎಂದರು ಮಕ್ಕಳಲ್ಲಿ ಸಾಹಿತ್ಯ ಅಭಿವೃದ್ಧಿಯನ್ನು ಬೆಳೆಸುವ ಪ್ರಯತ್ನದ ಭಾಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಮಕ್ಕಳಲ್ಲಿನ ಸೂಕ್ತ ಪ್ರತಿಭೆಯನ್ನು ಹೊರ ತರುವಲ್ಲಿ ಶ್ರಮಿಸುತ್ತಿದೆ ಆ ಮೂಲಕ ಸಾವಿರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಹೆಚ್ಚು ಹೆಚ್ಚು ಅಂಕಗಳಿಸುವ ಆ ಮೂಲಕ ತಮ್ಮ ಬದುಕಿಗೆ ಭದ್ರ ಬುನಾದಿ ಮಾಡಿಕೊಳ್ಳುವಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಇದಕ್ಕಾಗಿ ಅನೇಕ ಸಮಸ್ಯೆಗಳನ್ನು ನಾನು ಎದುರಿಸಿದರು ಕುಗ್ಗದೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವ ಮೂಲಕ ನನಗಿರುವ ಕನ್ನಡ ಪ್ರೇಮವನ್ನು ಅತ್ಯಂತ ಪ್ರೀತಿಯಿಂದ ಅನುಭವಿಸಿದ್ದೇನೆ ಎಂದರು.

ಗೋಕಾಕ್ ಚಳುವಳಿಯ ನಂತರ ಕನ್ನಡಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲ ಮಹನೀಯರಿಗೂ ಅಭಿನಂದಿಸುತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕೆ ಎಸ್ ಹುಚ್ರಾಯಪ್ಪ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಈವರೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸಿದ ಎಸ್.ಆರ್. ಕೃಷ್ಣಪ್ಪ, ಶಾಂತ ಗಂಗಾಧರ್, ಕತ್ತಿಗೆ ಚೆನ್ನಪ್ಪ, ಡಾ. ಗುರುದತ್, ಚಂದ್ರಶೇಖರ ಸೇರೆಗಾರ್, ಎಂ.ಆರ್.ರಘು, ಅಂಗಡಿ ಜಗದೀಶ್ ಹಾಗೂ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷರಾದ ಎಚ್.ಎಸ್. ರಘು, ಶಿರಾಳಕೊಪ್ಪ ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಿ. ರಾಮಯ್ಯ, ಎಚ್.ಎಸ್. ಮಂಜುನಾಥ್, ಗುಡಿ ಸಾಂಸ್ಕೃತಿಕ ಕೇಂದ್ರದ ಇಕ್ಬಾಲ್ ಅಹ್ಮದ್, ಸೋಮಶೇಖರ ಶಿವಮೊಗ್ಗಿ, ಬಿ.ಸಿ.ವೇಣುಗೋಪಾಲ್, ಡಾ. ಪ್ರಕಾಶ್, ಜಯಣ್ಣ ಈಸೂರು, ಹಾಲಪ್ಪ ಬೆಳಗುತ್ತಿ, ಜಿಯಾ ಉಲ್ಲಾ, ಡಾ. ಈಶ್ವರರಾವ್, ಲೋಕೇಶ್ ಮಕರಿ, ಸುಭಾಷ್ ಚಂದ್ರ ಸ್ತಾನಿಕ್,‌ ಅನೀಸ್ ಉರ್ ರೆಹಮಾನ್, ಸಾಹಿತಿ ಬಂಗಾರಪ್ಪ, ಕಾಳಿಂಗರಾವ್, ಎಚ್.ಆರ್. ರಾಘವೇಂದ್ರ, ಬಿ.ಎಲ್. ರಾಜಪ್ಪ ಮುಂತಾದವರು ಕ.ಸಾ. ಪ ಕಾರ್ಯದರ್ಶಿ ಸುನಿಲ್ ಕುಮಾರ್,ಕಾರ್ಯದರ್ಶಿ ಎಮ್.ಎಚ್. ಸತ್ಯನಾರಾಯಣ್ ಕಾಶಿಬಾಯಿ,ಪಾಪಯ್ಯ, ಇದ್ದರು.

News By Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!