ಮಾರಿಕಾಂಬ ಜಾತ್ರಾ ಮಹೋತ್ಸವ ಖರ್ಚು ವೆಚ್ಚ ವಿವರ ಪ್ರಕಟ..!

ಮಾರಿಕಾಂಬ ಜಾತ್ರಾ ಮಹೋತ್ಸವ ಖರ್ಚು ವೆಚ್ಚ ವಿವರ ಪ್ರಕಟ..!

ಶಿಕಾರಿಪುರ ಪಟ್ಟಣದ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾದ
ಮಹೇಶ್ ಹುಲ್ಮಾರ್ ಈ ವರ್ಷದ ಜಾತ್ರೆಯ‌‌ ಜಮಾ‌ ಖರ್ಚು ವಿವರವನ್ನು ಸಾರ್ವಜನಿಕರಿಗೆ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು‌ ಅದ್ದೂರಿ ಜಾತ್ರೆ ನಡೆಸಲು ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಅದರೆ ಕರೋನ ಕಾರಣದಿಂದ ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು

ದೇಣಿಗೆ ಸಂಗ್ರಹ ಕಡಿಮೆ ಅಗಿದ್ದು‌ ಅನೇಕ ಅಂಗಡಿಯ‌ ಮಾಲೀಕರು ದೇಣಿಗೆ ನೀಡಿಲ್ಲ ಎಂದರು.

ಪಟ್ಟಣದ ವಾರ್ಡ್ ಕೇರಿವಾರು ಜನರು ಜಾತ್ರೆಗೆ ‌ದೇಣಿಗೆ ನೀಡಿದ್ದು ಸಮಸ್ತ ವ್ಯಾಪಾರಿಗಳು ಜನತೆಗೆಗೂ ಧನ್ಯವಾದಗಳು ಸಲ್ಲಿಸಿದರು.

ಈ ಬಾರಿ ಎಲ್ಲಾ ರೀತಿಯ ಖರ್ಚು ತೆಗೆದು 5,86,870 ಹಣವನ್ನು ಉಳಿತಾಯವಾಗಿದೆ ಎಂದರು.

ದೇವಸ್ಥಾನಕ್ಕೆ ಯಾವುದೇ ಆದಾಯ ಇರುವುದಿಲ್ಲ ಅದ್ದರಿಂದ ದೇವಸ್ಥಾನ ಸಮಿತಿಯವರು ವಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದು ಸಂಸದ ಬಿ ವೈ‌ ರಾಘವೇಂದ್ರ ಅವರು ಶಂಕುಸ್ಥಾಪನೆ ಮಾಡಿದ್ದಾರೆ.

ದೇವಸ್ಥಾನ ಸಮಿತಿ‌ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು ಸಮುದಾಯದ ಭವನ‌ ಆದಾಯ ಬರುವುದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು.

ಈ ಸಂದರ್ಭದಲ್ಲಿ ಸಮಿತಿಯ ಹೊಲಗಾವಲು ಮಲ್ಲಪ್ಪ,ಪ್ರ.ಕಾ. ಪರಿವಾಳದ ಶಿವಶಂಕರಪ್ಪ, ಗುಳ್ಯಪ್ಪ, ಶಿವನಗೌಡ್ರು, ಕೆ.ಹಾಲಪ್ಪ, ಮಹೇಶ್ ಹುಲ್ಮಾರ್, ಗಿರೀಶ್ ,ಶ್ರೀಕಾಂತ್, ಸಂದೀಪ್ ,ಪ್ರಶಾಂತ್ ಇದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!