ಬಿಜೆಪಿಯ ದುರಾಡಳಿತ‌ದ ವಿರುದ್ಧ‌ ಜನ‌ ಆಕ್ರೋಶ ಹೋರಾಟ : ಮಧು ಬಂಗಾರಪ್ಪ

ಬಿಜೆಪಿಯ ದುರಾಡಳಿತ‌ದ ವಿರುದ್ಧ‌ ಜನ‌ ಆಕ್ರೋಶ ಹೋರಾಟ : ಮಧು ಬಂಗಾರಪ್ಪ

ಶಿಕಾರಿಪುರ :ಕಾರ್ಪೋರೇಟ್ ಮನಸ್ಥಿತಿಯಲ್ಲಿರುವ ರಾಜ್ಯ ಕಂದಾಯ ಸಚಿವರು ರೈತರಿಗೆ ಭೂ ಹಕ್ಕನ್ನು ನೀಡದೇ ದರ ನಿಗದಿ ಮಾಡಿ ಭೋಗ್ಯಕ್ಕೆ ನೀಡಲು ತೀರ್ಮಾನಿಸಿರುವುದು ನಾಚಿಗೆಗೇಡಿನ ಸಂಗತಿ.

ಶರಾವತಿ ಸಂತ್ರಸ್ತರ ಪರವಾಗಿ ಕಿಂಚಿತ್ತು ಕಾಳಜಿ ಇಲ್ಲದ ಬಿಜೆಪಿ ನಾಯಕರು ಚುನಾವಣೆ ಸಮೀಪಿಸುತ್ತಿದ್ದಂತೆ ಹುಸಿ ಭರವಸೆ ನೀಡುವ ಕೆಲಸದಲ್ಲಿ ತೊಡಗಿದ್ದಾರೆ.

ಬಗರ್‌ಹುಕುಂ ರೈತರು ಬೀದಿಗೆ ಬೀಳಲು ಶಿಕಾರಿಪುರ, ಸಾಗರ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರದ್ದೆ ಮುಖ್ಯ ಪಾತ್ರವಹಿಸಿದ್ದು, ರೈತರು ನ್ಯಾಯಾಲಯಗಳಿಗೆ ಅಲೆಯುವಂತಾಗಿದೆ ಎಂದು ಆರೋಪಿಸಿದರು.

ದೊರೆತ ಅಧಿಕಾರವನ್ನು ಜನಪರವಾಗಿ ನಿರ್ವಹಿಸಿದಾಗ ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ. ಆದರೆ, ಬಿಜೆಪಿ ಅಧಿಕಾರ ಸಿಕ್ಕರೂ ಜನವಿರೋಧಿ ನೀತಿ ಅನುಸರಿಸುತ್ತಿದೆ.

ಜನತೆ ಇದರಿಂದ ಬೇಸತ್ತು ಹೋಗಿದ್ದಾರೆ‌ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ನ. 28 ರಂದು ಶಿವಮೊಗ್ಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಲೆನಾಡ ಜನಾಕ್ರೋಶ ಸಮಾವೇಶ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ ೯ಕ್ಕೆ ಆಯನೂರಿನಿಂದ ಸಮಾವೇಶ ನಡೆಯಲಿರುವ ಎನ್‌ಇಎಸ್ ಕಾಲೇಜು ಮೈದಾನದ ವರೆಗೆ ಪಾದಯಾತ್ರೆ ನಡೆಯಲಿದೆ.

ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆಯ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಅನೇಕ ರಾಜ್ಯ ಮತ್ತು ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಪ್ರಮುಖರಾದ ತೀ.ನ. ಶ್ರೀನಿವಾಸ್, ಕಲಗೋಡು ರತ್ನಾಕರ,ನಗರದ ಮಹಾದೇವಪ್ಪ, ಗೋಣಿ ಮಾಲತೇಶ್, ಎಸ್‌ಪಿ ನಾಗರಾಜ್ ಗೌಡ, ಉಳ್ಳಿ ದರ್ಶನ್, ಅನೇಕ ಮುಖಂಡರು ಇದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!