ಜೆಡಿಎಸ್ ಅಭ್ಯರ್ಥಿಯಾಗಿದ್ದ ಹೆ.ಟಿ ಬಳೀಗಾರ್ ಜೆಡಿಎಸ್ ತೊರೆದು ಬಿಜೆಪಿ ಸೆರ್ಪಡೆ….!!!

ಜೆಡಿಎಸ್ ಅಭ್ಯರ್ಥಿಯಾಗಿದ್ದ ಹೆ.ಟಿ ಬಳೀಗಾರ್ ಜೆಡಿಎಸ್ ತೊರೆದು ಬಿಜೆಪಿ ಸೆರ್ಪಡೆ….!!!

ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಹೆ.ಟಿ ಬಳಿಗಾರ್ ಜೆಡಿಎಸ್ ತೊರೆದು ಬಿಜೆಪಿಗೆ ಇಂದು ಅಧೀಕೃತವಾಗಿ ಸೇರ್ಪಡೆಯಾಗಿದ್ದಾರೆ.

ಶುಕ್ರವಾರ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ವೈ ಹಾಗೂ ಸಂಸದ ಬಿ ವೈ ರಾಘವೇಂದ್ರ ಗೃಹ ಸಚಿವ ಅರಗ ಜ್ಞಾನೇಂದ್ರ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸಮ್ಮುಖದಲ್ಲಿ ಎಚ್ ಟಿ ಬಳಿಗಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಈ ಕುರಿತು ಮಾತನಾಡಿದ ಅವರು ಜೀವನದ ಬಹದೊಡ್ಡ ತಿರುವು ಕೊಡುವ ದಿನ ಇವತ್ತಾಗಿದೆ. ಸಮಾಜವಾದಿಯ ಹಿನ್ನಲೆಯಲ್ಲಿ ಬಂದ ನನಗೆ. ಬಹಳ ದಿನಗಳಿಂದ ಬಿಜೆಪಿಯನ್ನ ಗಮನಿಸುತ್ತಿದ್ದೇನೆ. ಮೋದಿ ಮತ್ತು ಬಿಎಸ್ ವೈ ಗಣನೀಯ ಕೆಲಸಮಾಡುವ ಮೂಲಕ ವಿಶ್ವವನ್ನೇ ತಮ್ಮಡೆಗೆ ಸೆಳೆಯುತ್ತಿದ್ದಾರೆ ಎಂದರು.

ಮೋದಿ ಅವರ ವಿದೇಶಾಂಗ ನೀತಿ, ಆರ್ಥಿಕವಾಗಿ ಬದಲಾವಣೆ ಗಮನಿಸಿ ಬಿಜೆಪಿಗೆ ಬಂದಿದ್ದೇನೆ ಇಡೀ ಜಗತ್ತಿನಲ್ಲಿ ಬಾರತಕ್ಕೆ ಉತ್ತಮ ಸ್ಥಾನಮಾನ ದೊರೆತಿರುವುದು ಗಮನಾರ್ಹವೆಂದರು.

ಹಾಗಾಗಿ ಪಕ್ಷಕ್ಕೆ ಬಂದು ಶಿಕಾರಿಪುರದ ಅಭಿವೃದ್ಧಿಗೆ ಕೈಜೋಡಿಸಿರುವೆ. ಕೃಷಿ ನೀರಾವರಿ, ರೈಸ್ ಪಾರ್ಕ್ ನಿರ್ಮಾಣಕ್ಕೆ ಮತ್ತು ರೈತರ ಹೋರಾಟಕ್ಕೆ ನನ್ನ ಬದ್ಧತೆ ಇರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಗೃಹ ಸಚಿವ ಆರಗ ಜ್ಞಾನೇಂದ್ರ ಸಂಸದ ಬಿ ವೈ ರಾಘವೇಂದ್ರ ಉಪಸ್ಥಿತರಿದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!