ಕೆಟ್ಟುನಿಂತ ವಾಹನ ಚಾರ್ಮಾಡಿ ಘಾಟ್’ನಲ್ಲಿ ಟ್ರಾಫಿಕ್ ಜಾಮ್..!

ಕೆಟ್ಟುನಿಂತ ವಾಹನ ಚಾರ್ಮಾಡಿ ಘಾಟ್’ನಲ್ಲಿ ಟ್ರಾಫಿಕ್ ಜಾಮ್..!

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ವಾರಾಂತ್ಯ ದಿನವಾದ್ದರಿಂದ ಘಾಟಿಯ ಹನ್ನೊಂದನೇ ತಿರುವಿನಲ್ಲಿ ಪೊಲೀಸ್ ಡಿಆರ್ ವಾಹನ ಕೆಟ್ಟು ನಿಂತು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.

ಚಿಕ್ಕಮಗಳೂರಿನ ಪೊಲೀಸ್ ಡಿಆರ್ ವಾಹನ ರಸ್ತೆಗೆ ಕೆಟ್ಟು ನಿಂತಿದ್ದರಿಂದ ಪ್ರವಾಸಿಗರು ಪರದಾಡುವಂತಾಯಿತು.

ಎರಡು ಬದಿಯಿಂದ ವಾಹನಗಳು ಏಕಕಾಲದಲ್ಲಿ ಸಂಚರಿಸಲಾಗದೇ ಕಿ.ಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವಾಹನ ಕೆಟ್ಟು ನಿಂತಿದ್ದರಿಂದ ಒಂದು ಬದಿ ವಾಹನ ಸಾಗಲು ಹರಸಾಹಸ ಪಡಬೇಕಾಯಿತು.

ವಾರಾಂತ್ಯ ಆದುದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಸಂಜೆ ಏಳು ಗಂಟೆ ವರೆಗೂ ವಾಹನ ರಿಪೇರಿ ಮಾಡಲಾಗುತ್ತಿತ್ತು.

ಆದರೂ ಟ್ರಾಫಿಕ್ ಜಾಮ್ ನಿಂದ ಜನರು ತೊಂದರೆ ಅನುಭವಿಸಬೇಕಾಯಿತು ಎಂದು ಪ್ರಯಾಣಿಕ ಸತೀಶ್ ಪತ್ರಿಕೆಗೆ ತಿಳಿಸಿದ್ದಾರೆ.

News by: chikamagaluru reporter

Admin

Leave a Reply

Your email address will not be published. Required fields are marked *

error: Content is protected !!