ಹಿಂದೂ ಸಂಸ್ಕೃತಿಯ ಶ್ರೇಷ್ಠತೆಯನ್ನು ಅರಿಯಿರಿ: ಕಾವೇರಿ ರಾಯ್ಕರ್…!!!

ಹಿಂದೂ ಸಂಸ್ಕೃತಿಯ ಶ್ರೇಷ್ಠತೆಯನ್ನು ಅರಿಯಿರಿ: ಕಾವೇರಿ ರಾಯ್ಕರ್…!!!

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮುಳುಗಿರುವ ಇಂದಿನ ಯುವ ಜನತೆ ಹಿಂದೂ ಸಂಸೃತಿಯ ಶ್ರೇಷ್ಠತೆಯನ್ನು ಅರಿಯಬೇಕಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿಯ ಕಾವೇರಿ ರಾಯ್ಕರ್ ಹೇಳಿದರು

ಶಿಕಾರಿಪುರದ ದೊಡ್ಡಕೇರಿಯಲ್ಲಿರುವ ಶ್ರೀ ಗಿಡ್ಡೆಶ್ವರ ದೇವಸ್ಥಾನದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯು ದ್ವಿದಶಕ ಪೂರ್ಣಗೊಳಿಸಿದ ಉದ್ದೇಶದಿಂದ ವರ್ಧಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ನಮ್ಮ ಪ್ರತಿಯೆಂದು ಆಚರಣೆಗಳಲ್ಲಿ ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ, ಹೀಗಾಗಿ ಹಿಂದೂ ಧರ್ಮದ ಮಹತ್ವವನ್ನು ತಿಳಿಯಲು ಪ್ರತಿಯೊಬ್ಬರೂ ಧರ್ಮಶಿಕ್ಷಣವನ್ನು ಪಡೆಯಬೇಕಿದೆ ಎಂದರು.

ಸದ್ಯದ ಸ್ಥಿತಿಯಲ್ಲಿ ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ, ಇದಕ್ಕಿಂತ ಮೊದಲು ಹಿಂದೂ ಶಬ್ದದ ಅರ್ಥ ತಿಳಿಯಬೇಕಿದೆ, ಹೀನಾನಿ ಗುಣಾನಿ ದೂಷಯತಿ ಇತಿ ಹಿಂದೂ ಅಂದರೆ ಯಾರು ತನ್ನಲ್ಲಿರುವ ಕೆಟ್ಟಗುಣಗಳನ್ನು ನಾಶ ಪಡಿಸಲು ಪ್ರಯತ್ನ ಮಾಡುತ್ತಾನೆಯೋ ಅವನನ್ನು ಹಿಂದೂ ಎನ್ನುತ್ತಾರೆ ಎಂದು ಮೇರು ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ, ಅದನ್ನು ಕೃತಿಯಲ್ಲಿ ನಾವೆಲ್ಲರೂ ತರಬೇಕಿದೆ, ಹಿಂದೂ ರಾಷ್ಟ್ರವನ್ನು ನಾವು ಧರ್ಮಾಚರಣೆ ಮಾಡುವ ಮೂಲಕ ತರಬೇಕಿದೆ, ನಾವು ಕೇವಲ ಜನ್ಮ ಹಿಂದೂಗಳಾಗಿದ್ದೇವೆ ಆದರೆ ಕರ್ಮ ಹಿಂದುಗಳಾಗಿ ಈ ಜನ್ಮ ಸಾರ್ಥಕ ಗೊಳಿಸಲು ಇಂದೇ ಧರ್ಮಾಚರಣೆ ಮಾಡುವ ನಿಶ್ಚಯ ಮಾಡಬೇಕಾಗಿದೆ ಎಂದರು.

ನಮಗೆ ಧರ್ಮ ಬೇರೆ ರಾಷ್ಟ್ರ ಬೇರೆಯಲ್ಲ ನಮ್ಮ ಧರ್ಮದ ಎಲ್ಲಾ ಮಂತ್ರಗಳು ರಾಷ್ಟ್ರ ಕಲ್ಯಾಣಕ್ಕಾಗಿ ಮತ್ತು ಸಮಸ್ತ ವಿಶ್ವ ಕಲ್ಯಾಣಕ್ಕಾಗಿ ಇವೆ ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯಿಂದ ವಿಶ್ವ ಕಲ್ಯಾಣವೇ ಆಗಲಿದೆ 100 ಕೋಟಿಗಿಂತಲೂ ಹೆಚ್ಚಿರುವ ಹಿಂದೂಗಳಿಗೆ ಜಗತ್ತಿನಲ್ಲಿ ಒಂದೂ ಹಿಂದೂ ರಾಷ್ಟ್ರವಿಲ್ಲ ಜಾತ್ಯತೀತ ಭಾರತದ 9 ರಾಜ್ಯಗಳಲ್ಲಿ ಇಂದು ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ.

ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ, ದೇಶದಾದ್ಯಂತ ಹಿಂದೂ ನೇತಾರ ಹತ್ಯೆ, ಲವ್ ಜಿಹಾದ್, ಹಲಾಲ್ ಜಿಹಾದ್, ಭಯೋತ್ಪಾದನೆ, ಮತಾಂತರ ಸಮಸ್ಸೆಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಉಪಾಯವೆಂದು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶದ ಮೇಲಾಧಾರಿತ ಹಿಂದೂ ರಾಷ್ಟ್ರದ ಘೋಷಣೆಯಾಗುವುದು ಅವಶ್ಯಕವಾಗಿದೆ ಈ ಉದ್ದೇಶದಿಂದ ನಾವೆಲ್ಲಾ ಸಂಘಟಿತರಾಗಿ ಇಂದೇ ಸಂಕಲ್ಪ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ 20 ವರ್ಷದ ಕಾರ್ಯದ ಸಂಪೂರ್ಣ ಮಾಹಿತಿ ನೀಡುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು,

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರಾದ ವಿ. ರಾಮಣ್ಣ, ಸಮಿತಿಯ ಮುಕುಂದ ಮೋಗೇರ್, ಪರಶುರಾಮ, ಶ್ರೀ ಗಿಡ್ಡೆಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಪಚ್ಚಿ ಗಿಡ್ಡಪ್ಪ, ವಿಶ್ವಹಿಂದೂ ಪರಿಷತ್ ನ ಪ್ರಕಾಶ್ ಎಂ. ಎಸ್., ಭವರ್ ಸಿಂಗ್, ಮಂಜಣ್ಣ ರಾಜಲಕ್ಷ್ಮೀ ಮತ್ತಿತರರು ಇದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!