ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ: ಬಿಡಿವಿಲ್ಲದೆ ಸಾಲು ಸಾಲು ಕಾರ್ಯಕ್ರಮ ಇಲ್ಲಿದೆ ವಿವರ…!!

ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ: ಬಿಡಿವಿಲ್ಲದೆ ಸಾಲು ಸಾಲು ಕಾರ್ಯಕ್ರಮ ಇಲ್ಲಿದೆ ವಿವರ…!!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನ.11ರ ನಾಳೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ನಿಮಿಷದ ಲೆಕ್ಕದಲ್ಲಿ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಯಾವೆಲ್ಲಾ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ??

ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು 10 ಗಂಟೆಗೆ ಬೆಂಗಳೂರಿನ ಎಚ್’ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ

10.05ಕ್ಕೆ ವಿಮಾನ ನಿಲ್ದಾಣದಿಂದ ಹೊರಟು 10.30ಕ್ಕೆ ವಿಧಾನ ಸೌಧಕ್ಕೆ ಆಗಮನ 10.30ರಿಂದ 10.32ರವರೆಗೆ ಗಣ್ಯರಿಂದ ಪ್ರಧಾನಿಯವರಿಗೆ ಸ್ವಾಗತ


10.32ರಿಂದ 10.36ರವರೆಗೆ ಕನಕದಾಸರ ಪುತ್ಥಳಿಗೆ ನಿರಂಜಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪುಷ್ಪನಮನ.

10.30ರಿಂದ 10.40ರವರೆಗೆ ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ

10.40ರಿಂದ 10.42ರವರೆಗೆ ತಮ್ಮ ಬೆಂಗಾವಲು ವಾಹನದ ಕಡೆಗೆ ನಡಿಗೆ 10.42ಕ್ಕೆ ವಿಧಾನಸೌಧದಿಂದ ಹೊರಟು 10.50ಕ್ಕೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮನ.

10.50ಕ್ಕೆ ಕೆಎಸ್’ಆರ್ ಬೆಂಗಳೂರು ರೈಲು ನಿಲ್ದಾಣದ ವಿವಿಐಪಿ 2ನೆಯ ಮಾರ್ಗದಿಂದ ಪ್ರವೇಶ 10.50ರಿಂದ 10.52ರವರೆಗೆ ಪ್ಲಾಟ್ ಫಾರಂ 7ಕ್ಕೆ ಅಗಮನ

10.52ರಿಂದ 10.59ರವರೆಗೆ ವಂದೇ ಮಾತರಂ ರೈಲಿಗೆ ಹಸಿರು ನಿಶಾನೆ.

10.59ರಿಂದ 11.01ರವರೆಗೆ 8ನೆಯ ಪ್ಲಾಟ್ ಫಾರಂಗೆ ಆಗಮನ.

11.01ರಿಂದ 11.08ರವರೆಗೆ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ನಂತರ ಚಾಲನೆ..

11.10ಕ್ಕೆ ರಸ್ತೆ ಮೂಲಕ ಹೆಬ್ಬಾಳದಲ್ಲಿರುವ ಏರ್ಫೋರ್ಸ್ ಟ್ರೆನಿಂಗ್ ಕಮಾಂಡ್ ಸೆಂಟರ್’ಗೆ ಭೇಟಿ.

ಮಧ್ಯಾಹ್ನ 12.22ಕ್ಕೆ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಸಮರ್ಪಣೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಬಳಿ ವೇದಿಕೆ ಕಾರ್ಯಕ್ರಮ.

ಮಧ್ಯಾಹ್ನ 1.10ಕ್ಕೆ ಸುಮಾರಿಗೆ ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್ಫಾರ್ಮೇಷನ್ (ಅಮೃತ್ ಯೋಜನೆ) 2.0 ಯೋಜನೆಯನ್ನು ಉದ್ಘಾಟನೆ.

ಮಧ್ಯಾಹ್ನ 1.35ಕ್ಕೆ ಮೋದಿಯವರ ಭಾಷಣ

ಮಧ್ಯಾಹ್ನ 1.45ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಪ್ರಯಾಣ.

ಸಂಚಾರ ನಿರ್ಬಂಧ ಎಲ್ಲೆಲ್ಲಿ.??

ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ.

ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್’ಪೋರ್ಟ್ ಎಲಿವೇಟೆಡ್ ಕಾರಿಡಾರ್, ಮಹಾರಾಣಿ ಸೇತುವೆ, ಶೇಷಾದ್ರಿ ರೈಲು ನಿಲ್ದಾಣದ ಪ್ರವೇಶ ದ್ವಾರದವರೆಗೆ ವಾಹನಗಳ ಸಂಚಾರವನ್ನು ನಿಷೇಧ.
ಮೆಜೆಸ್ಟಿಕ್’ನ ಶಾಂತಲಾ ಜಂಕ್ಷನ್ ಮೈಸೂರು ಬ್ಯಾಂಕ್ ವೃತ್ತದಿಂದ ಕೆಜಿ ರಸ್ತೆ, ಖೋಡೆ ಅಂಡರ್ ಪಾಸ್’ನಿಂದ ವಾಟಾಳ್ ನಾಗರಾಜ್ ಟೋಡ್’ನಲ್ಲಿ ಪಿಎಫ್ ಕಚೇರಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧ ಇರುತ್ತದೆ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!