ನಿವಾರಿಸಿಕೊಳ್ಳಿ ಮೈ ತುರಿಕೆಯನ್ನು ಬಹಳ ಜನರನ್ನು ಬಹು ವಿಧದಲ್ಲಿ ಕಾಡುವ “ತುರಿಕೆ” ಯಮಯಾತನೆ ಕೊಡುತ್ತದೆ. ಸಾಕಾಗಿ ಹೋಗುತ್ತಾರೆ,ರೋಗಿಗಳು.

ನಿವಾರಿಸಿಕೊಳ್ಳಿ ಮೈ ತುರಿಕೆಯನ್ನು ಬಹಳ ಜನರನ್ನು ಬಹು ವಿಧದಲ್ಲಿ ಕಾಡುವ “ತುರಿಕೆ” ಯಮಯಾತನೆ ಕೊಡುತ್ತದೆ. ಸಾಕಾಗಿ ಹೋಗುತ್ತಾರೆ,ರೋಗಿಗಳು.

ಪರಿಹಾರ ಸರಳ, ಸುಲಭ; ಸೇವಿಸುವ ಔಷಧಿ ಮಾತ್ರ ಬಹಳ ಕಹಿ. ತುರಿಕೆ ಏಕೆ ಬರುತ್ತದೆ, ಹೇಗೆ ಬರುತ್ತದೆ ಎಂಬ ಮಾಹಿತಿ ಕೊಡುವ ಉದ್ದೇಶ ಎಂದರೆ — ಯಾರಿಗೂ ಬರಬಾರದು, ಈಗ ಬಂದವರಿಗೆ ಮತ್ತೆ ಮರುಕಳಿಸದಂತೆ ತಡೆಯುವುದಾಗಿದೆ, ಇದನ್ನು ನಾವು ಚಿಕಿತ್ಸೆಗಿಂತ ದೊಡ್ಡದು ಎಂದು ನಂಬಿದ್ದೇವೆ.


ತುರಿಕೆ ಮಾಹಿತಿ:
ತ್ವಚೆಯ ಪದರಗಳಲ್ಲಿನ ದ್ರವರೂಪದ ರಸಧಾತುವಿನಲ್ಲಿ ಅಥವಾ ಬೆವರಿನಲ್ಲಿಯೂ ಅಂಟಾದ ಜಿಡ್ಡು ಸೇರಿಕೊಳ್ಳುತ್ತದೆ, ಇದು ಹೊರಬರಲು ಯತ್ನಿಸುತ್ತದೆ ಆದರೆ, ತ್ವಚೆಯ ರಂಧ್ರಗಳು ಚಿಕ್ಕದಾಗಿರುವ ಕಾರಣ ಅದು ಸಿಕ್ಕಿಹಾಕಿಕೊಂಡು ತುರಿಕೆಯನ್ನುಂಟು ಮಾಡುತ್ತದೆ. ಇನ್ನೊಂದು ರೀತಿಯ ತುರಿಕೆ ಎಂದರೆ, ವಾರ್ಧಖ್ಯದಲ್ಲಿ ತ್ವಚೆಯಲ್ಲಿನ‌ ದ್ರವಾಂಶ ಕ್ಷೀಣವಾಗಿ ಉಂಟಾಗುತ್ತದೆ.

ಎರಡರ ನಿವಾರಣೆಗೆ ವಿಭಿನ್ನ ಉಪಾಯಗಳು ಇವೆ…
ಅಂಟಾದ ಪದಾರ್ಥಗಳ ಸೇವನೆ ನಿಲ್ಲಿಸಿ, ಉದಾಹರಣೆಗೆ — ಮೈದಾ, ಉದ್ದು, ಗೋಧಿ, ಎಲ್ಲಾ ರೀತಿಯ ಸಿಹಿ, ಎಣ್ಣೆಯಲ್ಲಿ ಕರಿದ ಮತ್ತು ಹುಳಿ ಪದಾರ್ಥಗಳನ್ನು ತಕ್ಷಣ ನಿಲ್ಲಿಸಿ, ಅರ್ಧ ಪ್ರಮಾಣದ ಆಹಾರ ಸೇವಿಸಿದರೆ ಒಂದು ವಾರದಲ್ಲಿ ತುರಿಕೆ ನಿಂತುಹೋಗುತ್ತದೆ! ನಂತರ ನಮ್ಮ ಶಾರೀರಿಕ ಶ್ರಮ ಮತ್ತು ಜೀರ್ಣ ಪ್ರಮಾಣ ಅರಿತು ಆಹಾರ ಸೇವಿಸಬಹುದು…

ವೃದ್ಧರಿಗೆ — ಉತ್ತಮ ನಿದ್ದೆ, ಮಕ್ಕಳೊಂದಿಗೆ ಆಟ-ಪಾಠ, ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ(ಯುವಕರ ಆಹಾರದಂತಲ್ಲ, ಮಕ್ಕಳ ಆಹಾರದಂತೆ ಸೇವಿಸುವುದು), ನಿತ್ಯವೂ ತೈಲ ಲೇಪನ ಸ್ನಾನ.
ಇವು ಶಾಶ್ವತ ಪರಿಹಾರಗಳು…

ತತ್ಕಾಲೀನ ಉಪಚಾರಗಳು:
1ಗ್ರಾಂ ಕಿರಾತ ತಿಕ್ತ ಕಡ್ಡಿಯಿಂದ ಕಷಾಯ ತಯಾರಿಸಿ, ಸ್ವಲ್ಪ ಅರಿಶಿಣ ಬೆರೆಸಿ ದಿನಕ್ಕೆ ಎರಡು ಬಾರಿ, 15 ದಿನಗಳ ಕಾಲ ಸೇವಿಸುತ್ತಾ ಆಹಾರ ನಿಯಮ ಪಾಲಿಸಿ, ಗುಣವಾಗುತ್ತದೆ. ಇನ್ನೂ ಉತ್ತಮ ಎಂದರೆ, ಬೆಳಿಗ್ಗೆ ಎದ್ದು ಮಲಮೂತ್ರ ವಿಸರ್ಜಿಸಿ, ಖಾಲೀ ಹೊಟ್ಟೆಗೆ ಒಂದು ಲೀಟರ್ ನೀರಿಗೆ ಸೈಂಧವ ಉಪ್ಪು ಬೆರೆಸಿ, ಸೇವಿಸಿ, ವಾಂತಿ ಮಾಡಿಬಿಡಿ, ತಕ್ಷಣ ನಿಯಂತ್ರಣ ಸಾಧ್ಯ. ನಂತರ ಆಹಾರ ಪಾಲನೆ, ಔಷಧಿ ಸೇವನೆ ಮಾಡಬಹುದು.

ವೃದ್ಧರಿಗೆ ಮತ್ತು 12 ವಯದ ಒಳಗಿನ ಮಕ್ಕಳಿಗೆ ವಾಂತಿ ಚಿಕಿತ್ಸೆ ಮಾಡಿಸಬಾರದು. ಮಕ್ಕಳಿಗೆ ತಾನಾಗಿ ವಾಂತಿ ಆಗುತ್ತದೆ. ವೃದ್ಧರಿಗೆ ವಾಂತಿ ಆಗುವುದಿಲ್ಲ.

ಡಾ. ಮಲ್ಲಿಕಾರ್ಜುನ ಡಂಬಳ
ATHARVA Ayurveda Hospital & Research Institute
87922902749148702645

Admin

Leave a Reply

Your email address will not be published. Required fields are marked *

error: Content is protected !!