BREAKING NEWS| ಶಿರಾಳಕೊಪ್ಪ- ಶಿಕಾರಿಪುರ ಮಾರ್ಗ ಮಧ್ಯ ಭೀಕರ ಅಪಘಾತ ಓರ್ವ ಸಾವು..!!

BREAKING NEWS| ಶಿರಾಳಕೊಪ್ಪ- ಶಿಕಾರಿಪುರ ಮಾರ್ಗ ಮಧ್ಯ ಭೀಕರ ಅಪಘಾತ ಓರ್ವ ಸಾವು..!!

ಶಿಕಾರಿಪುರ: ಶಿಕಾರಿಪುರ-ಶಿರಾಳಕೊಪ್ಪ ಮಾರ್ಗದ ಭದ್ರಾಪುರ ಬಳಿ ಒಮಿನಿ ಕಾರ್ ಗೂಡ್ಸ್ ಡಿಕ್ಕಿ ಒಬ್ಬರ ಸಾವು: ಮೂವರು ಗಂಭೀರ

ಶಿಕಾರಿಪುರ ಪಟ್ಟಣದಿಂದ ಶಿರಾಳಕೊಪ್ಪಕ್ಕೆ ಹೋಗುವ ಮಾರ್ಗದ ಭದ್ರಾಪುರ ಬಳಿ ಒಮಿನಿ ಕಾರಿಗೆ ಗೂಡ್ಸ್ ವಾಹನ ಒಂದು ಡಿಕ್ಕಿ ಹೊಡೆದು ಒಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಮೂವರು ಗಂಭೀರ ಗಾಯಗೊಂಡಿರುತ್ತಾರೆ

ಭದ್ರಾಪುರದ ಬಳಿ ಭೀಕರ ಅಪಘಾತ ಸಂಭವಿಸಿದ್ದು ಗೂಡ್ಸ್ ವಾಹನವು ವೇಗವಾಗಿ ಬರುತ್ತಿತ್ತು ಎನ್ನಲಾಗಿದೆ ಈ ವೇಳೆ ಒಮಿನಿ ಕಾರಿಗೆ ಗೂಡ್ಸ್ ವಾಹನ ವೇಗವಾಗಿ ಅಪ್ಪಳಿಸಿದ ರಭಸಕ್ಕೆ ಓಮಿನಿ ಕಾರು ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದು ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿರುವ ಪೊಲೀಸರು ಅಪಘಾತ ಸ್ಥಳವನ್ನು ಮಹಜರು ನಡೆಸಿದ್ದು ವಾಹನಗಳನ್ನು ತೆರೆವುಗೊಳಿಸಿದ್ದಾರೆ ಆದರೆ ಮೃತಪಟ್ಟವರು ಹಾಗೂ ಗಾಯಗೊಂಡವರ ಬಗ್ಗೆ ಮಾಹಿತಿ ಲಭ್ಯವಾಗಿರುವುದಿಲ್ಲ.

News by Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!