ಶಿಕಾರಿಪುರ: ಪ್ರಾಥಮಿಕ ಶಾಲಾ‌ ಶಿಕ್ಷಕರ ಪತ್ತಿನ ಸಹಕಾರಿ ಸಂಘವು 29 ಕೋಟಿ ಆರ್ಥಿಕ ವ್ಯಾವಹಾರ: ಆರ್ ಎಂ ಘಾಸಿ .

ಶಿಕಾರಿಪುರ: ಪ್ರಾಥಮಿಕ ಶಾಲಾ‌ ಶಿಕ್ಷಕರ ಪತ್ತಿನ ಸಹಕಾರಿ ಸಂಘವು 29 ಕೋಟಿ ಆರ್ಥಿಕ ವ್ಯಾವಹಾರ: ಆರ್ ಎಂ ಘಾಸಿ .

ಶಿಕಾರಿಪುರ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘವು 2021-22 ರ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಸುಮಾರು 29 ಕೋಟಿ ಆರ್ಥಿಕ ವ್ಯವಹಾರ ನಡೆಸಿ ಠೇವಣಿಗಳ ಮೇಲೆ ಬಡ್ಡಿ ನೀಡಲು 46 ಲಕ್ಷ ರೂಪಾಯಿಗಳು ಹಾಗೂ ಕರಡು ಸಾಲದ ನಿಧಿಗಾಗಿ 8 ಲಕ್ಷ ರೂ ಕಾಯ್ದಿರಿಸಿಕೊಂಡು, 24,23 196 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಆರ್ ಎಂ ಘಾಸಿ ತಿಳಿಸಿದರು.

ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2016 ರಿಂದಲೂ ಸಂಘದಲ್ಲಿ ನಗದು ರಹಿತ ವ್ಯವಹಾರ ನಡೆಸುತ್ತಾ ಬಂದಿದ್ದು, ಆಡಳಿತಾತ್ಮಕ ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಪ್ರತಿಯೊಂದು ವ್ಯವಹಾರವು ನಗದು ರಹಿತವಾಗಿ ನಡೆಸಿದ್ದರಿಂದ ಸಂಘವು ಅಭಿವೃದ್ಧಿಯತ್ತ ಸಾಗಿದೆ. ಷೇರು ಸಂಗ್ರಹ, ನಿರಂತರ ಠೇವಣಿ, ಆವರ್ತಕ ಠೇವಣಿ, ಮುದ್ದತ್ತು ಠೇವಣಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿದೆ ಸಾಲಗಾರ ಸದಸ್ಯರಿಂದ ಶೇ. 99% ರಷ್ಟು ಸಾಲ ಮರುಪಾವತಿಯಾಗುತ್ತಿದೆ.

ಇದರಿಂದಾಗಿ ಸಂಘವು ಪ್ರತಿ ವರ್ಷ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ. 2016 ರಲ್ಲಿ ಷೇರುದಾರ ಸದಸ್ಯರಿಗೆ ಒಂದು ಲಕ್ಷದವರೆಗೆ ಸಾಲ ನೀಡಲಾಗುತ್ತಿತ್ತು.

ಷೇರುದಾರ ಸದಸ್ಯರಿಗೆ ವೇತನಾಧಾರಿತವಾಗಿ 10 ಲಕ್ಷಣದಿಂದ 20 ಲಕ್ಷದವರೆಗೆ, ಸಾಲ ನೀಡಲಾಗುತ್ತಿದೆ. ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ನೀಡಿದ ಸಲಹೆ ಹಾಗೂ ಮಾರ್ಗದರ್ಶನದಿಂದ ಸಂಘವು ಈ ರೀತಿಯ ಸಾಧನೆಗೈಯಲು ಸಹಕಾರಿಯಾಗಿದೆ ಎಂದರು.

ನಿವೇಶನ ರಹಿತರಿಗೆ, ವಸತಿ ರಹಿತರಿಗೆ, ಸದಸ್ಯರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದಕ್ಕಾಗಿ ಮತ್ತು ಹೆಚ್ಚಿನ ಶಿಕ್ಷಣ ನೀಡಲು ಶಾಲಾ ಕಾಲೇಜುಗಳಿಗೆ ಸೇರಿಸಲು ಹಾಗೂ ಪಠ್ಯ ಪುಸ್ತಕಗಳ ಖರೀದಿಗೆ ಸಾಲ ನೀಡಲಾಗುತ್ತಿದೆ.

ಸಂಘದ ವತಿಯಿಂದ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ವರದಿ ಸಾಲಿನಲ್ಲಿ ತಾಲ್ಲೂಕು ಮಟ್ಟದ 14 ವರ್ಷದೊಳಗಿನ ಮಕ್ಕಳಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವರಿಗೆ ಬಹುಮಾನ, ಸೇವಾ ವೃತ್ತಿಯಲ್ಲಿ ಸಾಧನೆಗೈದ ಸಾಧಕ ಸದಸ್ಯರಿಗೆ ಸನ್ಮಾನ, ಹೀಗೆ ಹಲವಾರು ರೀತಿಯಲ್ಲಿ ಸಂಘದ ಸದಸ್ಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘವು ಬದ್ಧತೆ ಹೊಂದಿದೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಶಿರಾಳಕೊಪ್ಪದಲ್ಲಿ ಇನ್ನೊಂದು ಶಾಖೆ ತೆರೆಯಲಾಗುವುದು ಆ ಶಾಖಾ ಸಂಘದಲ್ಲಿ ಉಡುಗಣಿ, ತಾಳಗುಂದ ಹೋಬಳಿಯ ಸದಸ್ಯರಿಗೆ ಸಾಲ ಸೌಲಭ್ಯ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ವ್ಯವಹಾರವನ್ನು ಆನ್ ಲೈನ್ ತಂತ್ರಾಂಶಗಳ ಮೂಲಕ ನಡೆಸುವ ಜವಾಬ್ದಾರಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದಲ್ಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಉಮೇಶಪ್ಪ ಗೌರವಾಧ್ಯಕ್ಷ ಹುತ್ತೇಶ್ ಕೆ, ಕಾರ್ಯದರ್ಶಿ ಗದಿಗೆಪ್ಪ ಸಾಹುಕಾರ, ಖಜಾಂಚಿ ಸುಭಾಷ್ ಹೆಚ್ ಎನ್, ಕಾರ್ಯಾಧ್ಯಕ್ಷ ವೈ ಎಂ ದೇವರಾಜ್, ಲೆಕ್ಕಪರಿಶೋಧಕಿ ಲಕ್ಷ್ಮಮ್ಮ ಸುಣಗಾರ್ ಎಂ, ನಿರ್ದೇಶಕರಾದ ಬೀರೇಶ್ವರ ಎಸ್ ಡಿ, ಸೋಮಪ್ಪ ಎಂ ಹೆಚ್, ಹಾಲಪ್ಪ ಎ ಕೆ ಇದ್ದರು.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!