ಕಾರ್ಯಕರ್ತರ ಶ್ರಮದಿಂದ ನಾನು ಗೆದ್ದಿದ್ದೇನೆ : ಬಿ. ವೈ ರಾಘವೇಂದ್ರ

ಕಾರ್ಯಕರ್ತರ ಶ್ರಮದಿಂದ ನಾನು ಗೆದ್ದಿದ್ದೇನೆ : ಬಿ. ವೈ ರಾಘವೇಂದ್ರ

ಶಿವಮೊಗ್ಗ: ನಗರದ ರವೀಂದ್ರ ನಗರದಲ್ಲಿ ಬಿಜೆಪಿ ಪೇಜ್ ಪ್ರಮುಖರ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ “ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸ್ಸಿನಂತೆ ಆರ್ಟಿಕಲ್ 370 ಇಂದು ರದ್ದಾಗಿದೆ, ಎಲ್ ಕೆ ಅಡ್ವಾಣಿಜಿ ಹಾಗೂ ಲಕ್ಷಾಂತರ ಕರಸೇವಕರ ಶ್ರಮದಿಂದ ಇಂದು ರಾಮ ಮಂದಿರ ನಿರ್ಮಾಣವಾಗುತ್ತಿದೆ, ಹಾಗೂ ವಿವಿಧ ಐತಿಹಾಸಿಕ ದೇವಾಲಯದ ಪುನರ್ ನಿರ್ಮಾಣದ ಕೆಲಸ ಆಗುತ್ತಿರುವುದನ್ನು ಗಮನಿಸಬಹುದು, ಇಂದು ನಮ್ಮ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆದಿದೆ, ಪೇಜ್ ಪ್ರಮುಖರದ ನಾವು ನಮ್ಮ ವ್ಯಾಪ್ತಿಯಲ್ಲಿ ಬರುವ ಮನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರಾದ ಕೆ ಎಸ್ ಈಶ್ವರಪ್ಪ ನವರು ಮಾಡಿದ ಅಭಿವೃದ್ಧಿ ಕೆಲಸ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಯನ್ನು ತಿಳಿಸಿ ಪಕ್ಷದ ಪರವಾಗಿ ಇರುವಂತೆ ನೋಡಿಕೊಳ್ಳೋಣ, ಇಂದು ನಾನು ಒಬ್ಬ ಸಂಸದ್ ಸದಸ್ಯನಾಗಿದ್ದೇನೆ ಎಂದರೆ ಅದು ಕಾರ್ಯಕರ್ತರ ಶ್ರಮ” ಎಂದು ಸಂಸದ ಬಿ. ವೈ ರಾಘವೇಂದ್ರ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ್ ಡಿ.ಎಸ್, ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಸುಡಾ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಬಳ್ಳಿಕೆರೆ ಸಂತೋಷ್, ಶಂಕರ್, ಕಾರ್ಪರೇಟರ್ ಆರತಿ, ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!