ಅಂಬಾರಗೊಪ್ಪ ಗ್ರಾಮವನ್ನು ನಗರಸಭೆಗೆ ಸೇರಿಸಲು ಗ್ರಾಮಸ್ಥರ ವಿರೋಧ ಪಂಚಾಯಿತಿ ಬಾಗಿಲು ಹಾಕಿ ಪ್ರತಿಭಟನೆ

ಅಂಬಾರಗೊಪ್ಪ ಗ್ರಾಮವನ್ನು ನಗರಸಭೆಗೆ ಸೇರಿಸಲು ಗ್ರಾಮಸ್ಥರ ವಿರೋಧ ಪಂಚಾಯಿತಿ ಬಾಗಿಲು ಹಾಕಿ ಪ್ರತಿಭಟನೆ

ಶಿಕಾರಿಪುರ ತಾಲೂಕು ಅಂಬಾರಗೊಪ್ಪ ಗ್ರಾಮವನ್ನು ನಗರಸಭೆಗೆ ಸೇರಿಸಲು ಕಳೆದ ಜೂನ್ ತಿಂಗಳಲ್ಲಿ ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿಗಳು ಒಪ್ಪಿಗೆವುಳ್ಳ ನಿರ್ಣಯ ಸಲ್ಲಿಸಲು ಅಂಬಾರಗೊಪ್ಪ ಗ್ರಾಮ ಪಂಚಾಯಿತಿಗೆ ಆದೇಶ ಮಾಡಿರುತ್ತಾರೆ.

ಆದರೆ ಗ್ರಾಮಸ್ಥರ ಯಾವುದೇ ಒಪ್ಪಿಗೆ ಪಡೆಯದೆ ಸಾಮಾನ್ಯ ಸಭೆಯನ್ನು ಕರೆಯದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಪಿ.ಡಿ.ಓ ಅವಸರದಲ್ಲಿ ನಗರಸಭೆಗೆ ಸೇರಿಸಲು ಒಪ್ಪಿಗೆ ನಿರ್ಣಯ ಸಲ್ಲಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಿಬ್ಬಂಧಿಗಳನ್ನು ಕೆಲಸ ನಿರ್ವಹಿಸದಂತೆ ತಡೆದು ಬಾಗಿಲು ಮುಚ್ಚಿಸಿ ಪ್ರತಿಭಟಿಸಿದ್ದಾರೆ.

ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಗ್ರಾಮಸ್ಥರು ಪ್ರಶ್ನಿಸಿದಾಗ ಈ ನಿರ್ಣಯದಲ್ಲಿ ಜನರಿಗೆ ವಿರೋಧವಿದೆ ನಿರ್ಣಯವನ್ನು ತಡೆಯಿಡಿಯಲು ಸೂಚಿಸಲಾಗಿದ್ದು ಪಿಡಿಓ ಅವಸರದಲ್ಲಿ ಕಳುಹಿಸಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಸಣ್ಣಪ್ಪ ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಬಾಗಿಲನ್ನು ಮುಚ್ಚಿಸಿ ಪ್ರತಿಭಟಿಸಿದ ಕಾರಣ ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ನಂತರ ಶಿಕಾರಿಪುರ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಈ ಕುರಿತು ಗ್ರಾಮಸ್ಥರು ಮತ್ತೊಮ್ಮೆ ಮನವಿ ಸಲ್ಲಿಸಿದ್ದು ಮನವಿಯಲ್ಲಿ ತುರ್ತು ಗ್ರಾಮ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದು ,ಇನ್ನೂ ನಾಲ್ಕು ದಿನಗಳಲ್ಲಿ ಗ್ರಾಮ ಸಭೆ ಕರೆಯುದಾಗಿ ಗ್ರಾಮ ಪಂಚಾಯಿತಿ ಪಿಡಿಓ ತಿಳಿಸಿದ್ದಾರೆ.

News by: Naveen Yuva-7411515737

Admin

Leave a Reply

Your email address will not be published. Required fields are marked *

error: Content is protected !!