ಮತೀಯ ಶಕ್ತಿಗಳನ್ನು ಬೇರು ಮಟ್ಟದಿಂದಲೇ ಕಿತ್ತೊಗೆಯಲು ಸರ್ಕಾರ ಪ್ರಯತ್ನ: ಸಂಸದ ರಾಘವೇಂದ್ರ..!

ಮತೀಯ ಶಕ್ತಿಗಳನ್ನು ಬೇರು ಮಟ್ಟದಿಂದಲೇ ಕಿತ್ತೊಗೆಯಲು ಸರ್ಕಾರ ಪ್ರಯತ್ನ: ಸಂಸದ ರಾಘವೇಂದ್ರ..!

ಶಿವಮೊಗ್ಗ: ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಮತೀಯ ಶಕ್ತಿಗಳ ಸಂಘಟನೆಗಳನ್ನು ಬ್ಯಾನ್ ಮಾಡುವುದಕ್ಕಿಂತಲೂ ಇದಕ್ಕೆ ಬೆಂಬಲವಾಗಿರುವ ಮೂಲ ಶಕ್ತಿಗಳನ್ನು ಬೇರು ಸಹಿತ ಕಿತ್ತು ಹಾಕಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಚೂರಿ ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಗಲಭೆ ಆರೋಪಗಳನ್ನು ಹೊತ್ತಿರುವ ಮತೀಯ ಸಂಘಟನೆಗಳನ್ನು ಬ್ಯಾನ್ ಮಾಡಿದರೆ, ಮತ್ತೆ ಬೇರೆ ಬ್ಯಾನರ್ ಅಡಿಯಲ್ಲಿ ಮತ್ತೆ ತಲೆ ಎತ್ತುತ್ತವೆ.

ಹೀಗಾಗಿ, ಇಂತಹವರಿಗೆ ಕುಮ್ಮಕ್ಕು ನೀಡುತ್ತಿರುವ ದುಷ್ಟ ಶಕ್ತಿಗಳನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಅಮಾಯಕನ ಮೇಲಿನ ಇಂತಹ ಹಲ್ಲೆ ಖಂಡನೀಯವಾದುದು.

ಇಂತಹ ಮತೀಯ ಮಾನಸಿಕತೆ ಬದಲಾಗಬೇಕಿದ್ದು, ಬಹಳ ದಿನಗಳಿಂದ ರಾಜಕೀಯ ಶಕ್ತಿಗಳ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಹಂತ ಹಂತವಾಗಿ ಇಂತಹ ಕೃತ್ಯಗಳನ್ನು ನಿಯಂತ್ರಿಸುತ್ತಿದ್ದೇವೆ ಎಂದರು.

ಮತೀಯ ಶಕ್ತಿಗಳ ಕೃತ್ಯದಿಂದ ಅಮಾಯಕರು ಹಾಗೂ ಎಲ್ಲ ಸ್ಥರದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.

ಸಂಜೆ ಮೇಲಿನ ವ್ಯಾಪಾರಸ್ಥರು ಹಾಗೂ ಬೀದಿ ಬದಿ ವ್ಯಾಪಾರಿಗಳು ಎಲ್ಲ ಸಿದ್ದತೆ ಮಾಡಿಕೊಂಡಿರುತ್ತಾರೆ. ಹೀಗೆ ಯಾರದ್ದೋ ಸ್ವಾರ್ಥಕ್ಕೆ ಏಕಾಏಕಿ ಇಂತಹ ಕೃತ್ಯಗಳು ನಡೆದರೆ ಇಂತಹ ವ್ಯಾಪಾರಿಗಳ ಗತಿಯೇನು? ಅವರು ಎಷ್ಟು ನಷ್ಟ ಅನುಭವಿಸುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಿಂದೆಲ್ಲಾ ಇಂತಹ ಕೃತ್ಯಗಳು ನಡೆದರೆ ತಿಂಗಳುಗಳಗಟ್ಟಲೇ ಆರೋಪಿಗಳನ್ನು ಬಂಧಿಸುತ್ತಿರಲಿಲ್ಲ. ಆದರೆ, ಈಗ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗುತ್ತಿದೆ.

ಅಲ್ಲದೇ, ಹಿಂದೆಲ್ಲಾ ಕಾಟಾಚಾರಕ್ಕೆ ಬಂಧಿಸಿದ ನಂತರ ಬೇಲ್ ಮೇಲೆ ಹೊರಕ್ಕೆ ಬರುತ್ತಿದ್ದರು. ಆದರೆ, ಈಗ ಹಾಗೆ ಆಗದೇ ಬಿಗಿ ಮಾಡಲಾಗಿದೆ ಎಂದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!