ಮೇಕೆದಾಟು ಪಾದಯಾತ್ರೆಗೆ ಸಿದ್ದರಾಮೋತ್ಸವ ಉತ್ತರ: ಬಿ.ವೈ. ವಿಜಯೇಂದ್ರ

ಮೇಕೆದಾಟು ಪಾದಯಾತ್ರೆಗೆ ಸಿದ್ದರಾಮೋತ್ಸವ ಉತ್ತರ: ಬಿ.ವೈ. ವಿಜಯೇಂದ್ರ

ಶಿಕಾರಿಪುರ :ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿಕಾರಿಪುರದಲ್ಲಿ ಚುನಾವಣಾ ಪೂರ್ವ ತಯಾರಿಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದು ಬಿಜೆಪಿ ಪೇಜ್ ಪ್ರಮುಖ್ ಸಭೆಗಳನ್ನ ಮಾಡುತ್ತಿದ್ದಾರೆ.

ಪಟ್ಟಣದ ಕುಮುದ್ವತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶಿಕಾರಿಪುರದಲ್ಲಿ ತಮ್ಮ ಚುನಾವಣಾ ಉಮೇದುವಾರಿಕೆ, ಸಿದ್ದರಾಮೋತ್ಸವ ಸೇರಿ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.

ಸಿದ್ದರಾಮೋತ್ಸವ ಬಿಜೆಪಿಗೆ ನಡುಕ‌ ಹುಟ್ಟಿಸಿದೀಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಪಕ್ಷದಲ್ಲಿ ಆಕ್ಷನ್ ರಿಯಾಕ್ಷನ್ ಹಗ್ಗ ಜಗ್ಗಟಾ ನಡೆಯುತ್ತಿದೆ ಎಂದರು.

ಡಿಕೆ ಶಿವಕುಮಾರ್ ನೇತೃತ್ವದ ಮೇಕೆದಾಟು ಪಾದಯಾತ್ರೆಗೆ ಸಿದ್ದರಾಮಯ್ಯನವರು ಸಿದ್ದರಾಮೋತ್ಸವದ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ನಾಯಕತ್ವದ ಪರೀಕ್ಷೆ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ ಎಂದರು.

ಶಿಕಾರಿಪುರ ತಾಲೂಕಿನಲ್ಲಿ ಪೇಜ್ ಪ್ರಮುಖ್ ಸಭೆ ಪಕ್ಷದ ಕರೆಯಂತೆ ಎರಡು ದಿನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಮಹೋತ್ಸವ ದೇಶದ ದೊಡ್ಡಹಬ್ಬವಾಗಿ ಆಚರಿಸಲು ಕರೆ ನೀಡಿದ್ದಾರೆ. ದೇಶಭಕ್ತಿ ಯುವಕರಲ್ಲಿ ಹೆಚ್ಚಿಸಲು ಹಬ್ಬದ ರೀತಿ ಆಚರಿಸಲಾಗುತ್ತದೆ.

20 ಕೋಟಿ ಮನೆಗಳ ಮೇಲೆ ಧ್ವಜ ಹಾರಲು ಕರೆ ರಾಜ್ಯದಲ್ಲು 58‌ ಸಾವಿರ ಬೂತ್ ಕೇಂದ್ರದಲ್ಲೂ ಅರ್ಥಪೂರ್ಣ ಆಚರಣೆಗೆ ಬಿಜೆಪಿ ಸಿದ್ದತೆ ನಡೆಸಿದೆ‌ ಎಂದರು.

ಸ್ವಾತಂತ್ರ್ಯ ನೆನಪು ಈಸೂರು ಮರೆಯಲು ಅಸಾಧ್ಯ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಿದ ಮೊದಲ ಗ್ರಾಮ ಇಲ್ಲಿ ಹೆಚ್ಚು ಅರ್ಥಪೂರ್ಣ ಆಗಬೇಕು ಎನ್ನುವ ಕಾರಣಕ್ಕೆ ಸರಣಿ ಸಭೆ ನಡೆಸಲಾಗಿದೆ ಸಲಹೆ ಪಡೆದು ಕಾರ್ಯ ಯೋಜನೆ ಮಾಡಿಲಾಗಿದೆ ಎಂದರು‌.

ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಬಿಜೆಪಿ‌ ಕಾರ್ಯಕರ್ತರ ಆಕ್ರೋಶ ಕುರಿತು ಉತ್ತರಿಸಿದ ಅವರು ಹತ್ಯೆಕೊರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ರಾಜ್ಯ ಸರ್ಕಾರ ಗಂಭೀರ ಪರಿಗಣಿಸಿದೆ ಕಾರ್ಯಕರ್ತರು ಒಂದಷ್ಟು ಅಸಮಾಧನ ಆಕ್ರೋಶ ವ್ಯಕ್ತಪಡಿಸಿದ್ದು ನಿಜ ಅದರೆ ಎಲ್ಲಾ‌ ಸರಿಯಾಗಿದೆ ಎಂದರು.

ದ್ವಜದಲ್ಲೂ ರಾಜಕೀಯ ಎಂದು ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಅವರು
ಹರ್ ಘರ್ ತಿರಂಗ ದೇಶದ ಸ್ವಾಭಿಮಾನ ಏಕತೆ ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಈ ವರೆಗೂ ತಮಗೆ ಎಂಎಲ್‌ಎ ಎಂಎಲ್ ಸಿ ಟಿಕೆಟ್ ಪಕ್ಷ ನೀಡಿಲ್ಲ ಈಗ ನೀಡುತ್ತರೆ ಅನುವ ಬರವೆಸೆ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ‌ ಅವರು ಶಿಕಾರಿಪುರದಲ್ಲಿ ನಾನು ಚುನಾವಣೆ ಸ್ಪರ್ಧೆ ಕುರಿತು ತಂದೆಯವರು ಘೋಷಣೆ ಮಾಡಿದ್ದರು ಅದು ಪಕ್ಷದ ಮುಖಂಡರ ಕಾರ್ಯಕರ್ತರ ಒತ್ತಾಯದ ಮೇಲೆ ಹೇಳಿಕೆ ನೀಡಿದ್ದಾರೆ ಪಕ್ಷ ಹೇಳಿದ್ದು ನಾನು ಕೇಳುತ್ತೇನೆ ಎಂದರು.

ನಾನು ಎಂಎಲ್‌ಎ ಆಗಲು ಪಕ್ಷ ಸಂಘಟನೆ ಮಾಡುತ್ತಿಲ್ಲ ಪಕ್ಷದ ಜವಾಬ್ದಾರಿ ಸಂತೃಪ್ತಿಯಿಂದ ಮಾಡುತ್ತೇನೆ. ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ,ತಾ. ಬಿಜೆಪಿ ವಿರೇಂದ್ರ ಪಾಟೀಲ್, ಸಿದ್ದಲಿಂಗಪ್ಪ, ಗುರುರಾಜ್ ಜಗತಾಪ್,ರೇಣುಕಸ್ವಾಮಿ‌ ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!