ಹರ್ನಿಯಾ ತಡೆಯುವ ವಿಧಿ-ವಿಧಾನಗಳು

ಹರ್ನಿಯಾ ತಡೆಯುವ ವಿಧಿ-ವಿಧಾನಗಳು

ಹರ್ನಿಯಾ ತಡೆಯುವಲ್ಲಿ ಮೊದಲ ಆದ್ಯತೆಯನ್ನು ಲಿಗಮೆಂಟ್‌ಗಳ ಬಲವನ್ನು ಕಾಪಾಡಲು ಕೊಟ್ಟರೆ, ಎರಡನೇ ಆದ್ಯತೆಯನ್ನು ಉದರ, ಕರುಳುಗಳಲ್ಲಿ ಗ್ಯಾಸ್ ಆಗದಂತೆ ಎಚ್ಚರ ವಹಿಸುವುದಕ್ಕೆ ನೀಡಬೇಕು.

ಈ ಎರಡರ ಸಹಕಾರದಿಂದ ಕರುಳುಗಳನ್ನು ಹೊರಬರದಂತೆ ರಕ್ಷಿಸುವ ಪೊರೆಗಳು ದೃಢವಾಗಿದ್ದು, ಸಣ್ಣ ಒತ್ತಡಕ್ಕೆ ರಂಧ್ರವಾಗಿ ಹರಿದುಕೊಳ್ಳುವುದಿಲ್ಲ. ಮತ್ತು ಗ್ಯಾಸ್ ಉಂಟಾಗಿ ಒಳಗಿನ ಒತ್ತಡ ಹೆಚ್ಚುವುದಿಲ್ಲ, ರಕ್ಷಾಕವಚ ರಂಧ್ರವಾಗುವುದಿಲ್ಲ.

ಏನು ಮಾಡಬೇಕು?
ಹರ್ನಿಯಾ ಆಗಬಾರದೆನ್ನುವವರೂ, ಈಗಾಗಲೇ ಹರ್ನಿಯಾ ಆದವರೂ ಮಾಡಬೇಕಾದ ಕರ್ತವ್ಯಗಳು ಹೀಗಿವೆ… 👉

• ಶಾರೀರಿಕ ಶ್ರಮವಿಲ್ಲದೇ, ಹೆಚ್ಚು ಶಕ್ತಿಯ ಆಹಾರವನ್ನು ಸೇವಿಸಬೇಡಿ, ಇದು ಗ್ಯಾಸ್ ಉಂಟುಮಾಡುತ್ತದೆ.

• ಯುರಿಕ್ ಆ್ಯಸಿಡ್ ಹೆಚ್ಚುವ ಬೇಳೆಕಾಳು, ಮಾಂಸಗಳನ್ನು ಮಿತವಾಗಿ ಬಳಸಿ, ಹೆಚ್ಚಾದರೆ ರಕ್ಷಾಕವಚ ಗಡುಸಾಗಿ ಹಿಗ್ಗುವಿಕೆ ಕಳೆದುಕೊಂಡು ರಂಧ್ರವಾಗುತ್ತದೆ.
• ಮಲಬದ್ಧತೆಯನ್ನು ನಿವಾರಿಸಿಕೊಳ್ಳಲು, ತಡರಾತ್ರಿ ಆಹಾರ ಸೇವಿಸಬೇಡಿ ಮತ್ತು ರಾತ್ರಿ ಅರ್ಧಹೊಟ್ಟೆ ಆಹಾರ ಸೇವಿಸಿ.

• ಚೆನ್ನಾಗಿ ನಿದ್ರೆ ಮಾಡುವುದರಿಂದ, ನಿಮ್ಮ ಲಿಗಮೆಂಟ್‌ಗಳ ಶಕ್ತಿ ಹೆಚ್ಚುತ್ತದೆ, ಇದು ರಂಧ್ರವಾಗುವುದನ್ನು ತಡೆಯುತ್ತದೆ. ಈಗಾಗಲೇ ಹರ್ನಿಯಾ ಇರುವವರು, ಮೇಲಿನ‌ ನಿಯಮಗಳನ್ನು ಪಾಲಿಸುತ್ತಾ… —
• ಆಯುರ್ವೇದ ರೀತ್ಯಾ ಅನುನೋಮನ ದ್ರವ್ಯ ಸಿದ್ಧ ಔಷಧ ಸೇವಿಸಿ.
• ಮಲಬದ್ಧತೆ ನಿವಾರಿಸಲು ಬೇಧಿ ಮಾತ್ರೆ, ಸಿರಪ್ ಸೇವಿಸಬೇಡಿ.
• ತೂಕ ಎತ್ತಬೇಡಿ, ಎತ್ತಿದರೆ ರಂಧ್ರ ದೊಡ್ಡದಾಗುತ್ತದೆ.
• ರಂಧ್ರ ಕೂಡಲು “ಮಾತ್ರಾಬಸ್ತಿ” ಎಂಬ ಸಶಕ್ತ ಚಿಕಿತ್ಸೆ ಪಡೆಯಿರಿ.
• ಆಂತ್ರವೃದ್ಧಿಹರ ವಿಶೇಷ ಚಿಕಿತ್ಸೆ ಪಡೆಯಿರಿ.
• ಹರ್ನಿಯಾ ಹೊರಬರದಂತೆ ಆಯುರ್ವೇದೀಯ ಬಂಧ ವಿಧಿಗಳನ್ನು ಅನುಸರಿಸಿ, ಬಟ್ಟೆ ತೊಡಬೇಕು.

ಇದಕ್ಕೆ ವೈದ್ಯನ ಸಹಕಾರ ಅತ್ಯಗತ್ಯ. ಮತ್ತು ಅಳುಕು ಬೇಡ, ಶಸ್ತ್ರಚಿಕಿತ್ಸೆ ಬೇಕೇ ಬೇಕು ಎಂದೇನೂ ಕಡ್ಡಾಯವಲ್ಲ. ಏನು ಮಾಡದಿದ್ದರೂ, ಕೇವಲ ಹರ್ನಿಯಾ ಕಾಳಜಿ ಮಾಡಿದರೂ ಸಾಕು, ಜನ್ಮಪೂರ್ತಿ ಹರ್ನಿಯಾ ಇದ್ದರೂ ನಿಮಗೆ ಏನೂ ಮಾಡದು.

ಡಾ. ಮಲ್ಲಿಕಾರ್ಜುನ ಡಂಬಳ
8792290274 9148702645
ATHARVA Ayurveda Hospital & Research Institute
••••••••••••••••••••••••••••••••••

Admin

Leave a Reply

Your email address will not be published. Required fields are marked *

error: Content is protected !!