ಶಿಕಾರಿಪುರ : ಬೆಳ್ಳಂಬೆಳಗ್ಗೆ ಕಪ್ಪನಹಳ್ಳಿ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಮಹಿಳೆಯ ಕೊಲೆ..!

ಶಿಕಾರಿಪುರ : ಬೆಳ್ಳಂಬೆಳಗ್ಗೆ ಕಪ್ಪನಹಳ್ಳಿ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಮಹಿಳೆಯ ಕೊಲೆ..!

ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ -ಅಮಟೆಕೊಪ್ಪ ಗ್ರಾಮದ ರಸ್ತೆಯ ಮದ್ಯ ಮಹಿಳೆಯೋರ್ವಳನ್ನು ಭೀರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಕ್ಯಾಂಪ್ ನಿವಾಸಿ ಹೇಮಾವತಿ ಮೃತ ಮಹಿಳೆ ಎನ್ನಲಾಗಿದ್ದು ಸಂಡ ಗ್ರಾಮದ ಪಶು ಕೈಗಾರಿಕಾ ಘಟಕದಲ್ಲಿ ದಿನಕೂಲಿ ಕೆಲಸವನ್ನು ಮಾಡುತ್ತಿದ್ದರು.

ಮಹಿಳೆ ಶನಿವಾರ ಬೆಳಗ್ಗೆ ಕರ್ತವ್ಯಕ್ಕೆ ತೆರಳುವಾಗ ಮಾರ್ಗ ಮದ್ಯದಲ್ಲಿ ಯಾರೋ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಲಾಗಿದೆ.

ಈ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೋಲಿಸ ಠಾಣೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!