ಚರಮಗೀತೆ ಹಾಡುವತ್ತಿರುವ “ಚಪಾತಿ”

ಚರಮಗೀತೆ ಹಾಡುವತ್ತಿರುವ “ಚಪಾತಿ”

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಚರಮಗೀತೆ ಹಾಡುವತ್ತಿರುವ “ಚಪಾತಿ”

ಪಶ್ಚಿಮದ ಜಗತ್ತು “ಗೋಧಿಮುಕ್ತ ಆಹಾರ” ಕ್ಕೆ ಮೊರೆಹೋಗಿದೆ.
ಗೂಗಲ್ ‌ನಲ್ಲಿ ಒಮ್ಮೆ Wheat free diet ಎಂದು ಹುಡುಕಿ ನೋಡಿ. ಎಷ್ಟಲ್ಲಾ ಉಪಯೋಗಗಳಿವೆ ಎಂದು ತಿಳಿಯುತ್ತದೆ.

ಆದರೆ ಇದು ಪೂರ್ಣ ಸತ್ಯವಲ್ಲ.
ಚಪಾತಿ ಮುಕ್ತ ಆಹಾರ ಎನ್ನಬೇಕೇ ಹೊರತೂ ಗೋಧಿಮುಕ್ತ ಎನ್ನಬಾರದು.

ಕೆಲವು ಅಸತ್ಯಗಳು:
• ಗೊಧಿಯಿಂದ ತಯಾರಿಸಿದ ಉತ್ಪನ್ನಗಳೆಲ್ಲವೂ ಗೋಧಿಯ ಗುಣ ಹೊಂದಿರುತ್ತವೆ.
• ಗೋಧಿ ತಿಂದರೆ ತೆಳ್ಳಗಾಗಬಹುದು.
• ಗೋಧಿ ಮಧುಮೇಹ ನಿಯಂತ್ರಕ
• ಗೋಧಿ ಹೃದಯದ ತೊಂದರೆಯನ್ನು ತಡೆಯುತ್ತದೆ.
• ಚಪಾತಿ ಶಕ್ತಿಕೊಡುವ ಆಹಾರ.


ಮುಂತಾದವುಗಳು

ಇಂತಹ ಸುಳ್ಳುಗಳನ್ನು ನಂಬಿ ನಿತ್ಯವೂ ಗೋಧಿ ಸೇವಿಸುತ್ತಿರುವವರು ಗಮನಿಸಿ ನೋಡಿ, ಮೇಲಿನ ಯಾವ ಲಾಭವನ್ನೂ ಸಹ ನಾವು ಗಳಿಸಲಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ವಿಲಿಯಮ್ ಡಾವಿಸ್(Dr.Willim Davis) ಹೇಳುತ್ತಾರೆ-
“ನಾವು ಹೃದಯಕ್ಕೆ ತೇಪೆಹಚ್ವಿ ಕಳಿಸುತ್ತಿದ್ದೇವೆ ಅಷ್ಟೇ, ಮತ್ತೆ ಇದೇ ತೊಂದರೆಯಿಂದ ರೋಗಿ ಮರಳಿ ಬರುತ್ತಾನೆ” ಎಂದು.

ಅವರು ತಮ್ಮ ಸ್ವಂತ ತಾಯಿಯನ್ನು ಹೃದಯಾಘಾತದಿಂದ ಕಳೆದುಕೊಂಡ ಮೇಲೆ, ಅದಕ್ಕೆ ಮೂಲ ಕಾರಣ ಹುಡುಕುತ್ತಾ ಹದಿನೈದು ವರ್ಷ ಕಳೆದ ನಂತರ ಶತ್ರು ಯಾರೆಂದು ಗುರುತಿಸಿದ್ದಾನೆ ಅದುವೇ ನಮ್ಮ ಪ್ರೀತಿಯ ಗೋಧಿ

ಆತನ ಪ್ರಕಾರ ಗೋಧಿಯನ್ನು ತಾಂತ್ರಿಕಾಗಿ ಉತ್ಪನ್ನ ಮಾಡಲು ಆರಂಭಿಸಿ ಹೆಚ್ಚು ಬೆಳೆ ಬೆಳೆಯಲು ಕಲಿತೆವು.
1970-80 ರ ನಂತರ ಗೋಧಿಯ ಸ್ವರೂಪವನ್ನೇ ಪೂರ್ಣ ರೂಪದಲ್ಲಿ ಬದಲಾವಣೆ ಮಾಡಲಾಗಿದೆ.
100ವರ್ಷ ಹಿಂದಿನ ಗೋಧಿ ಈಗ ಸಿಗುತ್ತಿಲ್ಲ. ಎಂದಿದ್ದಾನೆ.

ಈಗಿನ ಗೋಧಿಯಲ್ಲಿರುವ
• Amylopectin A
• Gliadin
• Gluten
ಮುಂತಾದವುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿ ವಿಷಯ ಮಂಡಿಸಿದ್ದಾನೆ.

ಈ Amylopectin A ಎಂಬ ರಾಸಾಯನಿಕವು ಹೃದಯದ ಕಾಯಿಲೆಗಳ ಪ್ರಮುಖ ಕಾರಣವಾದ ಸಣ್ಣ LDL ಕಣಗಳನ್ನು ನಮ್ಮ ರಕ್ತದಲ್ಲಿ ಯಥೇಚ್ಛವಾಗಿ ಹೆಚ್ಚಿಸುತ್ತದೆ, ಇದೊಂದೇ ಸಾಕು ನಮ್ಮ ಹೃದಯವನ್ನು ಬಡಿಯದಂತೆ ತಡೆಯಲು!!!?

Gaiadin ಎಂಬ ಪ್ರೋಟೀನ್ ರುಚಿಯನ್ನು ಕೊಟ್ಟು, ಬಾಯ್ಚಪಲದಿಂದ ಕಳ್ಳ ಹಸಿವನ್ನು ಹೆಚ್ಚಿಸುತ್ತದೆ, ಶರೀರದ ತೂಕವನ್ನು ನಿರಂತರವಾಗಿ ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯನ್ನು ಇದರ ವ್ಯಸನಿಯನ್ನಾಗಿಸುತ್ತದೆ. ಬಹುಶಃ ಹಾಗೆಂದೇ ಹೆಚ್ಚು ಜನರು ಗೋಧಿಯನ್ನು ಬಿಡಲು ಕಷ್ಟಪಡುತ್ತಿರಬಹುದು.

ಇನ್ನು Gluten ದೊಡ್ಡಕರುಳಿನ ಸಾಮರ್ಥ್ಯವನ್ನೇ ಹಾಳು ಮಾಡುತ್ತದೆ, ಕೊಲೈಟೀಸ್ ಉಂಟುಮಾಡಿ IBS ಎಂಬ ಮಲಪ್ರವೃತ್ತಿಯ ರೋಗವನ್ನು ತರುತ್ತದೆ.
ಹಾಗೇ ಗಮನಿಸಿ-
ಶರೀರದಲ್ಲಿ ಹೆಚ್ಚು ಊತವನ್ನುಂಟುಮಾಡುವ CRP ಹೆಚ್ಚು ಮಾಡುವ ಈ Gluten ಇರುವ ಚಪಾತಿಯನ್ನು ಕೊರೋನಾ ರೋಗಿಗೆ ತಿನಿಸಿದ್ದೇ ತಿನಿಸಿದ್ದು..ವ್ಹಾವ್! ಎಂತಹ (ಅ)ಜ್ಞಾನಿಗಳು ನಾವು?!

ಕೊರೋನಾಗೆ ಅಳವಡಿಸಿದ ಚಿಕಿತ್ಸೆ ಮತ್ತು ಆಹಾರ ಪದ್ಧತಿಯಿಂದಾದ ನಷ್ಟವನ್ನು ತುಂಬಿಕೊಡಲು ಯಾರಿಂದಲಾದರೂ ಸಾಧ್ಯವೇ?!

ಬೇಡ ಎಂದರೂ ಒಂದೇ ಬಾರಿ ಗೋಧಿ ತಿಂದವರಲ್ಲಿ 90% ಇದ್ದ SpO2 30% ಗೆ ಇಳಿದದ್ದನ್ನು ನಾವು ನೋಡಿದ್ದೇವೆ.

ಇರಲಿ ಈಗ ಹೃದಯದ ತೊಂದರೆ ನೋಡೋಣ-
ಹೃದಯದ ರಕ್ತನಾಳಗಳು ಗಡುಸುಗೊಂಡು, ನಾಳದ ಒಳಭಾಗದಲ್ಲಿ ಊತ ಬರಿಸಿಕೊಂಡು ನಾಳ ಕಿರಿದಾಗಿ ಹೃದಯಸ್ಥಂಭನ ಆಗುವ ಪ್ರಮುಖ ಕಾರಣಗಳಲ್ಲಿ LDL (low-density lipoprotein) ಮೊದಲನೆಯದು.
ಇದನ್ನು ಹೃದಯದ ಚರಮಗೀತೆ ಬರೆಯುವ ಕೊಬ್ಬು ಎಂದೂ ಕರೆಯುತ್ತಾರೆ. ಇಂತಹ LDL ಕಣಗಳನ್ನು ನಮ್ಮ ರಕ್ತಸಂಚಾರದಲ್ಲಿ ಯಥೇಚ್ಛವಾಗಿ ಹೆಚ್ಚಿಸುವ ಗೋಧಿಯನ್ನು ಯಗ್ಗಿಲ್ಲದೇ ಬಳಸುತ್ತಿರುವುದು ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರ ಪ್ರಾಣಹಾನಿ?!!

ಅದರೂ, ಗೋಧಿಯನ್ನು ಉತ್ತಮ ರೀತಿಯಿಂದ ಸಂಸ್ಕರಿಸಿ ಬಳಸಿದರೆ, ಅತ್ಯುತ್ತಮ ಆರೋಗ್ಯವನ್ನು ಪಡೆಯಬಹುದು.
ಆದರೆ ಇಂದು,
ಗೋಧಿಯ ಸಂಸ್ಕಾರವನ್ನು ಅವಸರದ ಜೀವನದಲ್ಲಿ ಮರೆತು ಕೇವಲ ಸುಲಭದಲ್ಲಿ ಮಾಡುವ ಗೋಧಿಹಿಟ್ಟನ್ನು ಕೇವಲ ಬಿಸಿಗೆ ಮುಟ್ಟಿಸಿ ಕೊಡುವ ಚಪಾತಿಯ ಮೊರೆಹೋಗಿದ್ದಾರೆ!!!

ಗೋಧಿಯನ್ನು ಆರೋಗ್ಯಕರವಾಗಿ ಬಳಸುವ ವಿಧಾನಗಳನ್ನು ಮುಂದೆ ನೋಡೋಣ

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!