ಮಧುಮೇಹ ಉಳ್ಳವರಿಗೆ ಚಪಾತಿ ಸೇವನೆ ಒಳ್ಳೆಯದಲ್ಲ ಹೇಗೆ?

ಮಧುಮೇಹ ಉಳ್ಳವರಿಗೆ ಚಪಾತಿ ಸೇವನೆ ಒಳ್ಳೆಯದಲ್ಲ ಹೇಗೆ?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಮಧುಮೇಹ ಉಳ್ಳವರಿಗೆ ಚಪಾತಿ ಸೇವನೆ ಒಳ್ಳೆಯದಲ್ಲ ಹೇಗೆ?

ನಮ್ಮ ದೇಶದ ಜನರಲ್ಲಿ ಮಧುಮೇಹಕ್ಕೂ ಚಪಾತಿಗೂ ಎಲ್ಲಿಲ್ಲದ ನಂಟು ಸೇರಿಕೊಂಡಿದೆ.

ಡಾಕ್ಟ್ರೇ,
ಈ ಡಯಾಬಿಟೀಸ್ ಬಂದ್ಮೇಲೆ ನಾವು ದಿನಾ ರಾತ್ರಿ ಚಪಾತಿ ಬಿಟ್ಟು ಬೇರೇನೂ ಸೇವಿಸಲ್ಲ.
ಇದನ್ನವರು ಬೇಸರದಿಂದ ಹೇಳುವುದಿಲ್ಲ, ತಾವು ಎಷ್ಟು ಚನ್ನಾಗಿ ನಿಭಾಯಿಸುತ್ತಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಾಕ್ಯ ಅದು.

ಗೋಧಿ ಸೇವೆನೆಯಿಂದ ಮಧುಮೇಹ ನಿಯಂತ್ರಣದಲ್ಲೂ ಇಲ್ಲ. ಹೊಸದಾಗಿ ಸೇರುವ ಮಧುಮೇಹಿಗಳೂ ಕಡಿಮೆಯಾಗಿಲ್ಲ.
ಅಂದರೆ ಚಪಾತಿ ಸೇವನೆಯ ಒಟ್ಟಾರೆ ಪರಿಣಾಮ ಶೂನ್ಯ ಎನ್ನುವುದಕ್ಕಿಂತ ನೆಗೆಟಿವ್ ಎಂಬುದನ್ನು ಈ ಲೇಖನದಲ್ಲಿ ಹೇಳಬಯಸುತ್ತೇವೆ.

ಚಪಾತಿಯ ಮೂಲ “ಗೋಧಿಹಿಟ್ಟು” ಗೋಧಿಕಾಳಿಗೂ ಗೋಧಿಹಿಟ್ಟಿಗೂ ಗುಣದಲ್ಲಿ ಬಹಳ ವ್ಯತ್ಯಾಸ ಇದೆ.

ಈ ಸತ್ಯವನ್ನು ಗಮನಿಸಿ-
ಗೋಧಿಹಿಟ್ಟನ್ನು ನೀರಿನೊಂದಿಗೆ ಕಲಸಿ ಇಟ್ಟರೆ ಅದು ಒಂದು ತಾಸಿನಲ್ಲಿ ಹುಳಿಯನ್ನು ಬಿಡುತ್ತದೆ. ಹೆಚ್ಚುಕಾಲ ಬಿಟ್ಟಂತೆ ಹೆಚ್ಚು ಹೆಚ್ಚು ಹುಳಿಯಾಗುತ್ತದೆ, ಅಲ್ಲವೇ? ಈ ಹುಳಿರಸವೇ ಮನುಷ್ಯರ ಆರೋಗ್ಯವನ್ನು ಹಾಳು ಮಾಡುವುದು. ಏಕೆಂದರೆ-
ಈ ಗೋಧಿಯ ಹಿಟ್ಟು ಸೇವನೆಯ ನಂತರ ಆಮ್ಲ(ಹುಳಿ)ವಿಪಾಕ ವಾಗಿ ಪರಿವರ್ತನೆಯಾಗಿ ಶರೀರದಲ್ಲಿ ಪಿತ್ತ-ಕಫ ವನ್ನು ವೃದ್ಧಿಮಾಡುತ್ತದೆ.
ವಾಸ್ತವದಲ್ಲಿ “ಗೋಧಿಕಾಳು ಮಧುರ ವಿಪಾಕವನ್ನು ಉತ್ಪತ್ತಿ ಮಾಡುವ ಧಾನ್ಯವಾಗಿದೆ”
( ವಿಪಾಕ ಎಂದರೆ- ನಾವು ಸೇವಸಿದ ಆಹಾರವು ಕರುಳಿನಲ್ಲಿ ಪರಿವರ್ತನೆಯಾಗುವ “ಆಹಾರದ ರಸವಿಶೇಷ”. ಇದು ಮೂಲ ಆಹಾರಕ್ಕೂ ನಮ್ಮ ಶರೀರಕ್ಕೂ ಮಧ್ಯದಲ್ಲಿ ಬರುವ ಒಂದು ಹಂತ. ಆಹಾರ ಶರೀರವಾಗಿ ಪರಿವರ್ತನೆಯಾಗಬೇಕೆಂದರೆ ಅದು “ವಿಪಾಕ” ಎಂಬ ರಸವಿಶೇಷ ಅವಸ್ಥೆಯನ್ನು ಹೊಂದಲೇಬೇಕಾಗುತ್ತದೆ, ನಂತರವಷ್ಟೇ ಆಹಾರ ಶರೀರವಾಗಿ ಪರಿವರ್ತನೆಯಾಗುವುದು)

ಈ ಆಮ್ಲವಿಪಾಕವು ಉಷ್ಣವೀರ್ಯವನ್ನು ಬಿಡುಗಡೆ ಮಾಡುತ್ತದೆ.
ಅಂದರೆ, ಈ ಹುಳಿಯು ಕರುಳಿಗೆ ಉಷ್ಣತೆಯನ್ನು ಬಿಡುಗಡೆ ಮಾಡುತ್ತದೆ.
ಕರುಳಿನಲ್ಲಿ ಬಹಳ ಕಾಲ ಹುಳಿರಸ ಉಳಿದುಕೊಳ್ಳುವ ಕಾರಣ ಸೂಕ್ಷ್ಮ ಅಥವಾ ಮೃದು ಕರುಳನ್ನು ಹೊಂದಿರುವವರು ಗೋಧಿ ಸೇವೆನೆಯ ನಂತರ ಗ್ಯಾಸ್ಟ್ರಕ್ ಆಗಿದೆ ಎನ್ನುವುದನ್ನು ನಾವು ನೋಡುತ್ತೇವೆ.

ಈ ಹುಳಿವಿಪಾಕ ಎಂಬ ರಸವಿಶೇಷವು ಮೊದಲು “ಗೌರೀಸಿರಾ”ದ(ಪೋರ್ಟಲ್‌ವೇನ್‌) ಮೂಲಕ ನಮ್ಮ ಯಕೃತ್ತನ್ನು ಸೇರುತ್ತದೆ.

ಯಕೃತ್ತಿನ ಕೆಲಸದಲ್ಲಿ ಪ್ರಮುಖವಾದುದೆಂದರೆ ” ಆಹಾರವು ರಕ್ತಕ್ಕೆ ಒಗ್ಗಿಕೊಳ್ಳದೇ ಹೋಗುವ ಸ್ಥಿತಿಯಲ್ಲಿದ್ದರೆ, ಅದನ್ನು ವಿಷ ಎಂದು ಪರಿಗಣಿಸುತ್ತದೆ. ಏಕೆಂದರೆ, ಅಂತಹ ಒಗ್ಗಿಕೊಳ್ಳದ ವಸ್ತು ರಕ್ತವನ್ನು ಸೇರಿದರೆ, ಆ ರಕ್ತವು ತಕ್ಷಣ ಸಣ್ಣ ಅಲರ್ಜಿಯಿಂದ ಹಿಡಿದು ಪ್ರಾಣಾಂತಿಕ ಎನ್ನುವಷ್ಟು ಶೀಘ್ರ ಪ್ರತಿಕ್ರಿಯೆ ತೋರುತ್ತದೆ. ಇದು ಶರೀರಕ್ಕೆ ಸರ್ವದಾ ಅಪಾಯಕಾರಿ ಹಾಗಾಗಿ ಯಕೃತ್ತು ಈ ಹುಳಿಯನ್ನು ವಿಷ ಎಂದು ಪರಿಗಣಿಸಿ ಅದನ್ನು ಪರಿವರ್ತಿಸಿ ನಂತವಷ್ಟೇ ರಕ್ತಕ್ಕೆ ಬಿಡುತ್ತದೆ.

ಇಲ್ಲೇ ಇರುವುದು ಸೂಕ್ಷ ವಿಚಾರ-
ನಿರಂತರ ಈ ರೀತಿಯ ಆಮ್ಲವಿಪಾಕ ಆಹಾರವನ್ನು ನಾವು ಸೇವಿಸುತ್ತಿದ್ದರೆ ಯಕೃತ್ ಅದನ್ನು ಪರಿವರ್ತಿಸಲು ರೂಢಿಯಾಗುವಷ್ಟು ಮಧುರ(ಸಿಹಿ ಪರಿವರ್ತಕ)ತೆಯನ್ನು ಬಿಡುಗಡೆ ಮಾಡುತ್ತದೆ.
ಮನಸ್ಸು ತೀವ್ರ ಚಿಂತೆಗೆ ಬಿದ್ದಾಗಲೂ ಇದೇ ಮಧುರ ರಸ ಬೇಕಾಗುತ್ತದೆ, ಆಗಲೂ ಯಕೃತ್ತು ಮಧುರ ಪರಿವರ್ತನೆಯಲ್ಲಿ ತೊಡಗಿಬಿಡುತ್ತದೆ. ಹಾಗೆ ಮಾಡದೇ ಹೋದರೆ, ಶರೀರ ಬಹಳ ಕಾಲ ಬದುಕದು, ಒಳಗಣ ಅಲರ್ಜಿಗಳಿಂದಲೇ ಅದು ಪ್ರಾಣ ಕಳೆದುಕೊಳ್ಳುತ್ತದೆ.

ಹಾಗಾಗಿ ಸಿಹಿಯ ಅಂಶ ಬಹಳ ಪ್ರಮಾಣದಲ್ಲಿ ಶರೀರಕ್ಕೆ ಬೇಕಾಗುತ್ತದೆ, ಈ ವ್ಯವಸ್ತೆಯನ್ನು ನಮ್ಮ ಮೆದುಳಿನ ಆದೇಶದಂತೆ ಇನ್ಸುಲಿನ್ ಹಾರ್ಮೋನು ನಿಯಂತ್ರಿತ ರೀತಿಯಲ್ಲಿ ರಕ್ತದಲ್ಲಿ ಹರಿಯುತ್ತದೆ. ಇನ್ಸುಲಿನ್ ಇದ್ದರೂ ಕೆಲಸ ಮಾಡುವ ಆದೇಶ ಬಾರದೇ ಸುಮ್ಮನೇ ನಿಷ್ಕ್ರಿಯ ರೀತಿಯಲ್ಲಿ ಸುತ್ತುತ್ತದೆ ಇದೇ ಮಧುಮೇಹ

ಈ ನಿಷ್ಕ್ರಿಯ ಇನ್ಸುಲಿನ್ ಅವಸ್ಥೆ ಏಕೆ ಇರುತ್ತದೆ ಎಂದರೆ, ಯಾವಾಗಲಾದರೂ ಕೆಲಸಕ್ಕೆ ಬರಬಹುದೆಂಬ ಕಾರಣದಿಂದ ರಕ್ತದಲ್ಲಿ ಸುತ್ತುತ್ತದೆ.
ಈ ಇನ್ಸುಲಿನ್ ಅವಶ್ಯಕತೆ ಅತ್ಯಂತ ಕಡಿಮೆ ಎನ್ನುವ ಹಂತ ತಲುಪಿದರೆ ಪ್ಯಾಂಕ್ರಿಯಾಸ್‌ಗೆ ಉತ್ಪತ್ತಿಯನ್ನು ಕಡಿಮೆ ಮಾಡುವಂತೆ ಕೊನೆಗೆ ನಿಲ್ಲಿಸುವಂತೆ ಆದೇಶ ಬರುತ್ತದೆ. ಆಗ ಹೊರಗಿನ ಇನ್ಸುಲಿನ್ ಬೇಕಾಗುತ್ತದೆ.

ಹುಳಿಬಿಡುವ ವಸ್ತುಗಳ ನಿರಂತರ ಸೇವನೆ ಮಾರಕ ಮಧುಮೇಹಕ್ಕೆ ಕಾರಣವಾಗುತ್ತದೆ. ಅವುಗಳೆಂದರೆ
• ಗೋಧಿ
• ಮೈದಾ
• ಹುಳಿಬರಿಸಿದ ಇಡ್ಲಿ-ದೋಸೆಗಳು
• ಮೇಲಿನಿಂದ ಎಣ್ಣೆಕಲಸಿದ ಆಹಾರಗಳು
ಎಣ್ಣೆಯಲ್ಲಿ ಕರಿದ ಆಹಾರಗಳು(ಫ್ರೈಡ್‌ರೈಸ್)
• ಜಂಕ್
• ಅಕಾಲ ಭೋಜನ
• ಅತಿಯಾದ ಚಿಂತೆ
• ನಿದ್ದೆಗೆಡುವುದು

ಇವುಗಳಲ್ಲಿ ನಾವು ನಿರಂತರ ಸೇವಿಸುತ್ತಿರುವ ಆಹಾರಗಳೆಂದರೆ
•ಚಪಾತಿ,
• ಬಿಸ್ಕೆಟ್, ಬನ್ಸ್,
• ಇಡ್ಲಿ-ದೋಸೆಗಳು
• ಚಿತ್ರಾನ್ನ-ಪುಳಿಯೊಗರೆ
• ಚಿಂತೆ
• ಅಕಾಲ ಭೋಜನ, ನಿದ್ದೆ

ಇವು ಹುಳಿಯನ್ನು ಬಿಡುವ ಕಾರಣ ಯಕೃತ್ತಿಗೆ ಒತ್ತಡವನ್ನು ಉಂಟುಮಾಡಿ ಮಧುಮೇಹವನ್ನು ತರುತ್ತವೆ. ಮತ್ತು ಗೋಧಿಯಿಂದ ಮಧುಮೇಹ ಶಾಶ್ವತವಾಗಿ ನಮ್ಮಲ್ಲಿ ಉಳಿಯುತ್ತದೆ.

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ.

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!