ಕೊರೋನಾ ನಂತರದ ಉಪಚಾರ ಮತ್ತು ಆಹಾರ ವಿಧಿ..!

ಕೊರೋನಾ ನಂತರದ ಉಪಚಾರ ಮತ್ತು ಆಹಾರ ವಿಧಿ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಕೊರೋನಾ ನಂತರದ ಉಪಚಾರ ಮತ್ತು ಆಹಾರ ವಿಧಿ

ಕೊವಿಡ್ ಚಿಕಿತ್ಸೆ ಮುಗಿವವರೆಗೆ
ಮೆತ್ತನೆಯ ಬಿಸಿ ಅನ್ನ ಮತ್ತು ಆಲೂ, ಗೆಣಸು, ಸುವರ್ಣ ಗಡ್ಡೆ ಹೊರತುಪಡಿಸಿ ವಿವಿಧ ತರಕಾರಿಗಳ ಸಾಂಬಾರು ಮಾತ್ರ ಸೇವಿಸಿ.

ಚಿಕಿತ್ಸಾ ನಂತರ, ಇನ್ನು ಜ್ವರ, ಮೈಕೈ ನೋವು, ಶೀತ, ಕೆಮ್ಮು ಕನಿಷ್ಟ ಒಂದು ವಾರದಿಂದ ಇಲ್ಲ ಎಂದಮೇಲೆ-

ಸದ್ಯೋವಿರೇಚನ:
(ಸುಖ/ಮೃದುವಾದ ಬೇಧಿ ಪ್ರಕ್ರಿಯೆ)
ಅಂದರೆ, ಬೆಳಿಗ್ಗೆ ಸಹಜವಾಗಿ, ಸುಲಭವಾಗಿ 1-2 ಬಾರಿ ಮಲಪ್ರವೃತ್ತಿ ಆಗುವ ಕ್ರಿಯೆಗೆ ಮೃದು ವಿರೇಚನ ಎನ್ನುತ್ತಾರೆ.

ಪ್ರಯೋಜನವೇನು?: ಬೇಧಿಯನ್ನು ಕೊಟ್ಟು ಅಳಿದುಳಿದ ಕಶ್ಮಲಗಳನ್ನು ಅಂದರೆ ಜ್ವರದಲ್ಲಿ ಸೋಂಕಿನ ಜೊತೆಗಿನ‌ ಹೋರಾಟದಲ್ಲಿ ರೋಗಾಣುಗಳಷ್ಟೇ ಅಲ್ಲ ರಕ್ತಕಣಗಳೂ, ಜೀವಕೋಶಗಳೂ ಸಾಕಷ್ಟು ಸಂಖ್ಯೆಯಲ್ಲಿ ಸತ್ತುಹೋಗಿರುತ್ತವೆ. ಈ ಸಾಯುವಿಕೆಯಿಂದಾಗಿ ಉತ್ಪತ್ತಿಯಾದ ಹೊಲಸನ್ನು ಹೊರಹಾಕುವ ಪ್ರಕ್ರಿಯೆ “ಸದ್ಯೋ ವಿರೇಚನ”
ಯುದ್ಧಾನಂತರ ಯುದ್ಧ ಭೂಮಿಯನ್ನು ಸ್ವಚ್ಛಗೊಳಿಸಿದಂತೆ.

ಯಾರೆಲ್ಲಾ ಈ ಬೇಧಿ ಪ್ರಕ್ರಿಯೆಗೆ ಒಳಗಾಗಿದ್ದಾರೋ ಅವರಿಗೆ ಅತ್ಯಂತ ಹಿತ ಉಂಟಾಗಿರುವುದು ಕಂಡುಬರುತ್ತದೆ.

ಅಂದರೆ,
ನನಗೆ ಏನೇನೂ ಆಗಿರಲೇ ಇಲ್ಲ, ಕೊರೋನಾ ಬಂದೇ ಇರಲಿಲ್ಲ ಎನ್ನುವಷ್ಟು ಶರೀರ ಮನಸ್ಸುಗಳು ಹಗುರವಾಗಿ ಬಿಡುತ್ತವೆ.

ಸದ್ಯೊವಿರೇಚನ(ಬೇಧಿ) ಆಗಲು
“ಅವಿಪತ್ತಿಕರ ಚೂರ್ಣ”ವನ್ನು 1 ಚಮಚ ಪ್ರಮಾಣದಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಆಹಾರಕ್ಕಿಂತ 15 ನಿಮಿಷ ಮೊದಲೇ ಅರ್ಧ ಲೋಟ ಬಿಸಿ ನೀರಿನೊಂದಿಗೆ ಸೇವಿಸಬೇಕು.
ಹೀಗೆ ಮೂರು ದಿನ‌ ಮಾಡಿ.
ಇದೇನೂ ದಿನಕ್ಕೆ 5-10ಬಾರಿ ಬೇಧಿಯನ್ನು ಉಂಟುಮಾಡದು, ಇದರಿಂದ-
• ಗ್ಯಾಸ್‌ಟ್ರೈಟೀಸ್ ನಿವಾರಣೆಯಾಗಿ ಉದರ ಕರುಳುಗಳು ಹಿತವನ್ನು ಅನುಭವಿಸುತ್ತವೆ.
• ಬೆಳಿಗ್ಗೆ ಒಂದು ಹೆಚ್ಚೆಂದರೆ ಇನ್ನೊಂದು ಬಾರಿ ಸುಖವಾಗಿ ಮಲಪ್ರವೃತ್ತಿ ಆಗುತ್ತದೆ.
ಹೀಗೆ ಮೂರು ದಿನ ಆಗುತ್ತದೆ.

ಈ ವಿರೇಚನ ಎಂಬ ಚಿಕಿತ್ಸೆಯಲ್ಲಿ ಒಂದೇ ದಿನಕ್ಕೆ 30-40ಬಾರಿ ಬೇಧಿ ಆಗುವ ಔಷಧಗಳಿವೆ, ಇಲ್ಲಿ ಅವುಗಳ ಅವಶ್ಯಕತೆ ಇಲ್ಲ.

✅ ಆಹಾರ ಸೇವನೆ:

ಮೃದು ವಿರೇಚನದ ನಂತರದ ವಿಷಯಕ್ಕೆ ಬರೋಣ:
1) ಅನ್ನದ ಗಂಜಿ
2) ಮೆದುವಾದ ತಾಜಾ ಅನ್ನ
3) ಹೆಸರು ಬೇಳೆ ಕಟ್ಟು
(ಸ್ವಲ್ಪವೇ ಬೇಳೆ ಬಳಸಬೇಕು)
4) ಹೆಸರು ಬೇಳೆ ಸಾಂಬಾರು
(ಸ್ವಲ್ಪವೇ ಬೇಳೆ ಬಳಸಬೇಕು)
5) ಹೆಸರು ಬೇಳೆ ಮತ್ತು ತರಕಾರಿ ಮಿಶ್ರಿತ ಸಂಬಾರು
6) ಮೆದುವಾದ ಬಿಸಿ ರೊಟ್ಟಿ(ಜೋಳ, ರಾಗಿ, ಸಜ್ಜೆ, ಮೆಕ್ಕೆಜೋಳ ಹೀಗೆ ಅವರವರ ಶರೀರಕ್ಕೆ ಈಗಾಗಲೇ ರೂಢಿಯಾಗಿರುವ ಯಾವುದಾದರೂ ಒಂದು ಹಿಟ್ಟಿನ ರೊಟ್ಟಿ)
7) ಆಲೂ, ಗೆಣಸು, ಸುವರ್ಣಗಡ್ಡೆ ಹೊರತು ತರಕಾರಿ ಪಲ್ಯಗಳು
8) ಹೆಚ್ಚು ತರಕಾರಿಗಳಿರುವ ಹೆಚ್ಚು ನೀರು ಹಾಕಿ ಮೆದುವಾಗಿ ಬೇಯಿಸಿದ ತಾಜಾ ಪಲಾವ್
9) ಸ್ವಲ್ಪ ಹೆಸರು ಬೇಳೆ ಹೆಚ್ಚು ಅಕ್ಕಿ ಬಳಸಿ ತಯಾರಾದ ಮೃದುವಾದ ಖಿಚಡಿ.
10) ನೀರುದೋಸೆ-ತರಕಾರಿ ಪಲ್ಯೆಗಳು
11) ಕಾಫಿ ಟೀ ಬದಲಾಗಿ ಕಷಾಯಕ್ಕೆ Viropyrine ಬಳಸಿ
12) ಪಚನವಾಗುವಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಿ.
12) ಬೆಳಿಗ್ಗೆ 7-8 ಮಧ್ಯಾಹ್ನ 12:30-1.00 ಮತ್ತು ಸಂಜೆ 6-7 ಸಮಯದಲ್ಲಿ ಆಹಾರ ಸೇವನೆ ಮಾಡಿ.

13) ರಾತ್ರಿ 9:30ಕ್ಕೆ ಮಲಗಿ ಮತ್ತು ಬೆಳಿಗ್ಗೆ 5:30ಕ್ಕೆ ಹಾಸಿಗೆಯಿಂದ ಏಳಿ.
14) ಮನಸ್ಸಿನಿಂದ ಎಲ್ಲರೊಂದಿಗೆ ಹಿತವಾಗಿ ಖುಷಿಯಿಂದ ಇರಿ,‌ಕಾಯಿಲೆ ಬಗ್ಗೆ ಚಿಂತೆ ಬೇಡ.
15) ಕಾಯಿಲೆಗೆ ವೈರಾಣು ಕಾರಣವಲ್ಲ. ನಮ್ಮ ಆಹಾರದ ಎಣ್ಣೆ ತಿಂಡಿಗಳೇ ಕಾರಣ ಎಂಬುದನ್ನು ಸ್ಪಷ್ಟವಾಗಿ ಮನನ ಮಾಡಿಕೊಳ್ಳಿ.
ಮತ್ತು ಕೊನೆಯದಾಗಿ
16) ಕುಟುಂಬದ ಸದಸ್ಯರು, ಸಂಬಂಧಿ-ಸ್ನೇಹಿತರಲ್ಲಿ ಎಣ್ಣೆ ಆಹಾರದ ಬಗ್ಗೆ ಎಚ್ಚರ ವಹಿಸಲು ತಿಳಿಸಿ. ತನ್ಮೂಲಕ, ಅವರಿಗೆ ರೋಗಬಾರದಂತೆ ತಡೆದರೆ ನಿಮಗೆ ಬಹಳಷ್ಟು ಒಳಿತಾಗುತ್ತದೆ. ನಮಗೆ ಅಷ್ಟು ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ.

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!