ಬ್ಲ್ಯಾಕ್ ಫಂಗಸ್..!

ಬ್ಲ್ಯಾಕ್ ಫಂಗಸ್..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಬ್ಲ್ಯಾಕ್ ಫಂಗಸ್

ಇದೊಂದು ಶಿಲೀಂದ್ರ ಜೀವಿ, ಇದರ ಅಸ್ತಿತ್ವ ಬೆಳವಣಿಗೆ ಏನಿದ್ದರೂ, ತಾಪಮಾನ ಕಳೆದುಕೊಂಡ ನಿರ್ಜೀವ ವಸ್ತು ಅಥವಾ ಜೀವಕೋಶಗಳ ಮೇಲೆ ಮಾತ್ರ.

ಹಾಗಾದರೆ, ನಮ್ಮ ಶರೀರದ ಕೆಲ ಅವಯವಗಳು ಜೀವ ಕಳೆದುಕೊಳ್ಳುತ್ತಿವೆಯೇ? ಎಂದರೆ, ಹೌದು ಎಂದು ಒಪ್ಪಿಕೊಳ್ಳದೇ ಅನ್ಯ ಮಾರ್ಗವೇ ಇಲ್ಲ.

ಇತ್ತೀಚಿಗೆ ವರದಿಯೊಂದು ಬಂದಿದೆ, ಬ್ಲ್ಯಾಕ್ ಫಂಗಸ್ ತೊಳೆಯದೇ ತೊಡುವ ಮಾಸ್ಕ್ ನಿಂದ ಹೆಚ್ಚಾಗಿ ಬರುತ್ತಿದೆ ಎಂದು!?

ನಿರಂತರವಾಗಿ ತೊಡುವ ಮಾಸ್ಕ್ ತೇವ ಉಂಟುಮಾಡುತ್ತದೆ ನಿಜ, ಆದರೆ ಅದು ಉಸಿರ್ನಾಳದ ಆಳದ ವರೆಗೆ ಫಂಗಸ್ ಉಂಟುಮಾಡಲು ಸಾಧ್ಯವೇ ಇಲ್ಲ.
ವರ್ಷಗಟ್ಟಲೇ ಮೂಗು ಸೋರುವ ಮಕ್ಕಳು ಯುವಕರು ಇದ್ದಾರಲ್ಲ ಅವರಿಗೆ ಏಕೆ ಫಂಗಸ್ ಅಂಟಿಕೊಂಡಿಲ್ಲ?!

ಎರಡೇ ಕಾರಣ ಎಂದರೆ-
• ಸ್ಟಿರಾಯ್ಡ್ ಬಳಕೆ
• ಆಮ್ಲಜನಕವನ್ನು ಹಸಿಮಾಡುಲು ಬಳಸುವ ಸೋಂಕು ಮಿಶ್ರಿತ ಜಲ.

ಪರಹಾರ:
ಫಂಗಸ್ ಬಂದ ಮೇಲೆ ಪರಿಹರಿಸುವ ಮೊದಲು ತಡೆಯೋಣ, ಬಂದರೂ ಧೃತಿಗೆಡದೇ ಎದುರಿಸೋಣ.

ಉಪಾಯಗಳು:
• ಆರೋಗ್ಯವಂತರೆಲ್ಲರೂ ಆಹಾರ ನಿಯಮ ಪಾಲಿಸೋಣ
• ರೋಗ ನಿರೋಧಕತೆಯನ್ನು ಹಾಳು ಮಾಡುವ ಬೇಕರಿ, ಜಂಕ್, ಎಣ್ಣೆ ತಿನಿಸುಗಳಿಂದ ದೂರ ಅಥವಾ ಮಿತಿಯಲ್ಲಿರೋಣ.
• ತರಕಾರಿಗಳನ್ನು ಬೇಯಿಸಿಕೊಂಡು ಯಥೇಚ್ಛವಾಗಿ ಬಳಸೋಣ
• ಎಲ್ಲಕ್ಕಿಂತ ಮುಖ್ಯವಾಗಿ- ಶಾರೀರಿಕವಾಗಿ ಬೆವರು ಬರುವಂತೆ ನಿತ್ಯವೂ ಕೆಲಸ ಮಾಡೋಣ.

ಔಷಧಿಗಳು:
ಆರೋಗ್ಯವಂತರೂ ಸಹ ನಿತ್ಯವೂ ಕೇವಲ ಅರ್ಧ ಗ್ರಾಂ ನಷ್ಟು Viropyrine powder ಬಳಸುತ್ತಾ ಬಂದರೆ ಸಾಕು, ಖಂಡಿತವಾಗಿ ತಡೆಯಬಹುದು.

ಹೇಗೆಂದರೆ
ಈ ಕಷಾಯ ಚೂರ್ಣದಲ್ಲಿನ 38 ಔಷಧಿ ದ್ರವ್ಯಗಳು ಸೂಕ್ಷ್ಮ ಜೀವಾಣುಗಳಿಂದ ನಮ್ಮ ಜೀವಕೋಶಗಳನ್ನು ಸಂರಕ್ಷಿಸುತ್ತವೆ.
(ಎಲ್ಲಾ ದ್ರವ್ಯಗಳ ವಿವರಗಳನ್ನು ಮತ್ತು ಅವುಗಳ ವೈಜ್ಞಾನಿಕವಾಗಿಕ ಕಾರ್ಯಗಳನ್ನು ನಾಳೆ ನೋಡೋಣ)

ಕೊರೋನಾ ಸೋಂಕು ತಗುಲದಂತೆ ನಮ್ಮನ್ನು ಸಂರಕ್ಷಿಸುವ ಈ ಔಷಧಿ ಮೂಲಿಕೆಗಳು ಅದರ ಮುಂದಿನ ಹಂತಕ್ಕೆ ನಮ್ಮನ್ನು ತಳ್ಳುವುದಾದರೂ ಹೇಗೆ?

ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆದು ಮನೆಗೆ ಬಂದವರ ಆರೈಕೆ ಹೇಗೆ.?

• ನಿತ್ಯವೂ Viropyrine drops ಅನ್ನು ಅಥವಾ ಅಣುತೈಲದ 2-2 ಹನಿಗಳನ್ನು ನಾಸಿಕಾ ದ್ವಾರಕ್ಕೆ ಎರಡು ಬಾರಿ ಹಾಕುವುದು.
ತೈಲ ಮಾಧ್ಯಮದಲ್ಲಿ ಫಂಗಸ್ ಬೆಳೆಯುವುದಿಲ್ಲ. ಈಗಾಗಲೇ ಬೆಳೆದಿದ್ದರೆ ಇಲ್ಲವಾಗುವುದು‌
( ಆದರೆ ಈ ಪ್ರಕ್ರಿಯೆಗೆ ಕೊರೋನಾ ಸೋಂಕು ಪೂರ್ಣ ನಿವಾರಣೆಯಾಗಿರುವ ಬಗ್ಗೆ ಖಾತ್ರಿ ಇರಬೇಕು )
• ಸ್ವಲ್ಪ ಕಷ್ಟವಾದರೂ ಗುಡಾರ್ದ್ರಕ ಸ್ವರಸ ನಸ್ಯ ಸೂಕ್ತ ವಿಧಾನವಾಗಿದೆ, ಆದರೆ ಇದನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಮಾಡಬೇಕು.

ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಬೇಕಾದ ಪ್ರಸಂಗ ಬಂದರೆ ಆ ಕ್ಷಣದಿಂದಲೇ ಸ್ವರ್ಣ ಯೋಗ‌ಗಳನ್ನು ನಿತ್ಯವೂ ಬಳಸಿ, ಅಂದರೆ-
1.ಸ್ವರ್ಣ ವಸಂತ ಮಾಲತಿ
ಅಥವಾ

  1. ಸ್ವರ್ಣ ಭಸ್ಮ ಮಾತ್ರೆ

ಎರಡೂ ದುಬಾರಿಯಾಗಿ ಕಂಡರೂ, ಅತ್ಯಂತ ಶ್ರೇಷ್ಠ ಪರಿಣಾಮಕಾರೀ ಸಂರಕ್ಷಕಗಳು.
ಆರಂಭದಿಂದ ಇವುಗಳನ್ನು ಬಳಸಿದ್ದೇ ಆದಲ್ಲಿ ಶೇ 99% ಗಿಂತ ಹೆಚ್ಚು ಖಚಿತತೆಯನ್ನು ಕೊಡಬಹುದಾದಂತಹ ಅತ್ಯಂತ ಶ್ರೇಷ್ಠ ದ್ರವ್ಯಗಳು.
(ಗಮನಿಸಿ: Shree Dhootpapeswara company ಯ ಸ್ವರ್ಣ ಔಷಧಿಗಳನ್ನು ಬಳಸಲು ನಾವು ಅನುಮೋದಿಸುತ್ತೇವೆ. ಏಕೆಂದರೆ ಇವುಗಳಲ್ಲಿ ಬಳಸುವ ಸ್ವರ್ಣದ ಪ್ರಮಾಣವನ್ನು ನಾವು ಖುದ್ಧಾಗಿ ಲ್ಯಾಬ್ ನಲ್ಲಿ ಪರೀಕ್ಷಿಸಿದ್ದೇವೆ, ಶೇ 98% ಗಿಂತಲೂ ಹೆಚ್ಚು ಸ್ವರ್ಣಭಸ್ಮ ಇರುವ ಈ ಕಂಪನಿಯ ಸ್ವರ್ಣಯೋಗಗಳು ನಾವು ಕೊಡುವ ಹಣಕ್ಕೆ ಸಮನಾದ ಮೌಲ್ಯ ಉಳ್ಳವುಗಳಾಗಿವೆ.)

ಸ್ವರ್ಣ ಯೋಗಗಳು ಜೀವಕೋಶಗಳನ್ನು ಆಳದಿಂದ ಪೋಷಣೆ ಮಾಡುತ್ತವೆ. ಗ್ಯಾಂಗ್ರೀನ್ ತಡೆಯಲು ಅನೇಕ ರೋಗಿಗಳಲ್ಲಿ ಸ್ವರ್ಣ ಪ್ರಯೋಗ ಮಾಡುತ್ತೇವೆ.

ಫಂಗಸ್ ಬಂದಿದೆ ಎಂದು ಖಚಿತವಾದರೆ ಏನು ಮಾಡಬೇಕು?
ತಕ್ಷಣ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ, ಅವರು ಸಿಗುವ ಮುನ್ನ ಗುಗ್ಗುಲು ತಿಕ್ತಕ ಕಷಾಯ ವನ್ನು ದಿನಕ್ಕೆ ಮೂರು ಬಾರಿ 10ml ಪ್ರಮಾಣದಲ್ಲಿ ನೀರಿನೊಂದಿಗೆ ಪ್ರಾರಂಭಿಸಿರಿ.
ಹಾಗೂ ತಾಜಾ ಆಹಾರವನ್ನು ಮಾತ್ರ ಕೊಡಿ.

ಬ್ರೆಡ್ ಕೊಡಲೇ?
ಬಿಸ್ಕೆಟ್ ?
ಕಾಫೀ-ಟೀ?
ಹಣ್ಣುಗಳು?! ಕೊಡಬಾರದೇ ಎಂದು ಕೇಳಬೇಡಿ ಏಕೆಂದು ನಂತರ ತಿಳಿಯೋಣ, ಸಧ್ಯಕ್ಕೆ ಹೀಗೆ ಮಾಡಿ

ಸಿರಿಧಾನ್ಯಗಳಾದ ನವಣೆ, ಹಾರಕ, ಊದಲು, ಬರ್ಗು, ಸಜ್ಜೆ, ಸಾಮೆ, ರಾಗಿ,.. ಮತ್ತು ಅಕ್ಕಿ ಜೋಳ ಬಳಸಿ ಅಂಬಲಿ, ಅನ್ನ ಮಾಡಿಕೊಡಿ.
ಸಾಂಬಾರು ತಯಾರಿಕೆಗೆ ಎಲ್ಲ ವಿಧದ ತರಕಾರಿಗಳನ್ನು ಬಳಸಿ, ಅತ್ಯಲ್ಪ ಬೇಳೆಕಾಳುಗಳನ್ನು ಬಳಸಬಹುದು.

ಚನ್ನಾಗಿ ನಿದ್ದೆ ಮಾಡಿ, ಯಾವ ಲೌಕಿಕ ಅಥವಾ ಪ್ರಾಪಂಚಿಕ ಚಿಂತನೆಗಳನ್ನೂ ಗುಣವಾಗುವವರೆಗೆ ಮಾಡಲೇಬೇಡಿ.

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!