ಎಚ್ಚರಿಕೆಗಿಂತ ಹೆಚ್ಚು ಆತಂಕ‌ ಮೂಡಿಸುತ್ತಿರುವ “ನಾರ್ಮಲ್ ವ್ಯಾಲ್ಯೂ”ಗಳು..!

ಎಚ್ಚರಿಕೆಗಿಂತ ಹೆಚ್ಚು ಆತಂಕ‌ ಮೂಡಿಸುತ್ತಿರುವ “ನಾರ್ಮಲ್ ವ್ಯಾಲ್ಯೂ”ಗಳು..!

ಇದು ಖಂಡಿತಾ ನಿಮ್ಮ ಆತಂಕವನ್ನು ನಿವಾರಿಸಿ ನೆಮ್ಮದಿ ತರುತ್ತದೆ…!

ಆತಂಕಿತರೊಂದಿಗೆ ಹಂಚಿಕೊಳ್ಳಿ.

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಎಚ್ಚರಿಕೆಗಿಂತ ಹೆಚ್ಚು ಆತಂಕ‌ ಮೂಡಿಸುತ್ತಿರುವ “ನಾರ್ಮಲ್ ವ್ಯಾಲ್ಯೂ”ಗಳು

ಮಾನವನ ಶರೀರ ಒಂದು ಸಂಕೀರ್ಣ ಮತ್ತು ವಿಶಿಷ್ಟ ಸಂರಚನೆಯಾಗಿದೆ.
ಪ್ರಪಂಚದಲ್ಲಿ 750ಕೋಟಿ ಜನರಿದ್ದರೂ ಒಬ್ಬರಂತೆ ಇನ್ನೊಬ್ಬರಿಲ್ಲ, ಒಬ್ಬನ ಕಣ್ಣು, ಒಬ್ಬನ ಕೈ ಗೆರೆಗಳು ಇನ್ನೊಬ್ಬನ ಕಣ್ಣು, ಕೈಗೆರೆಗಳಿಗೆ ಎಷ್ಟೂ ಹೋಲುವುದಿಲ್ಲ.
ಹೊರನೋಟಕ್ಕೇ ಇಷ್ಟು ಭಿನ್ನವಾಗಿರುವ ಮಾನವನ ಆಂತರಿಕ ಅವಯವಗಳು ಒಂದೇ ರೀತಿಯಾಗಿರಲು ಮತ್ತು ಒಂದೇ ನಿರ್ದಿಷ್ಟ ಅಳತೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವೇ?

ರಕ್ತದೊತ್ತಡ
(Blood pressure)
120/80 ಇರಬೇಕು.

ಸಕ್ಕರೆ ಪ್ರಮಾಣ(Glucose)
FBS 70-110
PPBS 90-140 ಇರಬೇಕು

ತಾಪಮಾನ (Temperatures)
97.8°F ಇರಬೇಕು

ನಾಡಿಬಡಿತ(Pulse rate)
72 ಇರಬೇಕು

ರಕ್ತದ ಪ್ರಮಾಣ(Hemoglobin %) 13-15% ಇರಬೇಕು

ಹಾಗೆಯೇ,
ಈ ಆತಂಕಗಳಿಗೆ ಇತ್ತೀಚಿಗೆ ಇನ್ನೆರಡು ಸೇರಿಕೊಂಡಿವೆ, ಅವುಗಳನ್ನು ನೋಡಿ‌ ನಿರಂತರ ಆತಂಕ ಪಡುತ್ತಿರುವೆವು 👉

ರಕ್ತದ ಆಮ್ಲಜನಕ(SpO2 concentration)
95% ಮೇಲೆಯೇ ಇರಬೇಕು
&
ಎದೆಯ ಸಿ.ಟಿ.ಸ್ಕ್ಯಾನ್ ಅಳತೆ
(HRCT of thorax score) 0 ಇರಬೇಕು

ಆತ್ಮೀಯರೇ,
ಆರೋಗ್ಯದ ವಿಷಯದಲ್ಲಿ ಕೆಲವು ಮಾನಗಳನ್ನು ಸಾಮಾನ್ನೀಕರಣಗೊಳಿಸಿ, ಇಷ್ಟಿದ್ದರೇ ಆರೋಗ್ಯ ಇಲ್ಲದಿದ್ದರೆ ರೋಗ ಅಥವಾ ಅಪಾಯ ಎಂದು ಮಾನವರನ್ನು ಹೆದರಿಸುವುದು ವೈದ್ಯಕೀಯ ಲೋಕಕ್ಕೆ ಶೋಭೆಯೇ?
ಅಭಯ ನೀಡುವ ಸ್ಥಳವೇ ಭಯೋತ್ಪಾದನೆ ಮಾಡುತ್ತಿದ್ದರೆ ಎಲ್ಲಿಗೆ ಓಡುವುದು?!

ಆತ್ಮೀಯರೇ,
ನನ್ನ ಸ್ನೇಹಿತ ಡಾ.ಕಾಂತರಾಜ್ T.M ಇವರು ಶಿವಮೊಗ್ಗದ ಕೊವಿಡ್ ಕೇಂದ್ರದಲ್ಲಿ ಸುಮಾರು 50 ಜನರ ಆಕ್ಸಿಜನ್ ನೋಡಿ ನಮ್ಮೊಂದಿಗೆ ಫೋನ್ ನಲ್ಲಿ ಹಂಚಿಕೊಂಡ ನುಡಿಗಳನ್ನು, ಜನರ ಆತಂಕ ನಿವಾರಣೆಗಾಗಿ ಇಲ್ಲಿ ನಮ್ಮ ಮೊಬೈಲ್ ಸಂಭಾಷಣೆಯ ಧ್ವನಿಮುದ್ರಣವನ್ನು ಹಂಚಿಕೊಳ್ಳಲಾಗಿದೆ. ದಯಮಾಡಿ ಕೇಳಿ.

ಈ ಎಲ್ಲಾ ನಾರ್ಮಲ್ ವ್ಯಾಲ್ಯೂಗಳನ್ನು ಪಾಶ್ಚಾತ್ಯ ಜಗತ್ತಿನ ಒಂದೆರಡು ಗುಂಪಿನ ಸರಾಸರಿಯಲ್ಲಿ ನಿರ್ಧರಿಸಲಾಗಿದೆ. ದುರಾದೃಷ್ಟ ಎಂದರೆ ನಾವೂ ಅದನ್ನೇ ನಂಬಿ ನಿತ್ಯ ಆತಂಕಿತರಾಗುತ್ತಿದ್ದೇವೆ.

ಈ ಅಳತೆಗಳು ಮನುಷ್ಯರನ್ನು ಆತಂಕದ ಅಗ್ನಿಕೂಪಕ್ಕೆ ತಳ್ಳುತ್ತಿವೆ.‌ ಅವುಗಳನ್ನು ನೋಡಿ ಹೆದರಬೇಡಿ

ನಮ್ಮ ಈ 20ವರ್ಷಗಳ ವೈದ್ಯಕೀಯ ಅನುಭವಗಳು ಈ ನಾರ್ಮಲ್ ವ್ಯಾಲ್ಯೂಗಳಿಗೆ ಅತ್ಯಂತ ಭಿನ್ನವಾಗಿವೆ.

ನಾವು ನೋಡಿದಂತೆ,
ರಕ್ತದೊತ್ತಡ(Blood Pressure)
230/130 BP and 50/20 BP

ಸಕ್ಕರೆ ಪ್ರಮಾಣ(Blood Glucose)
57 ರಿಂದ 900

ನಾಡಿ ಮಿಡಿತ(Pulse rate)
45 ರಿಂದ 140

ರಕ್ತದ ಪ್ರಮಾಣ(Hemoglobin %)
2% ನಿಂದ 20%

ಆಮ್ಲಜನಕ(Oxygen level)
75%-95%

HRCT score
15+

ಇದ್ದೂ ಯಾವುದೇ ತೊಂದರೆ ಇಲ್ಲದೇ, ಲಕ್ಷಣಗಳಿಲ್ಲದೇ ಆರೋಗ್ಯದಿಂದ ಇರುವ ನೂರಾರು ಜನರನ್ನು ನೋಡಿದ್ದೇವೆ. ವಿಶೇಷ ಎಂದರೆ ಅವರಿಗೆ ಈ ವ್ಯಾಲ್ಯೂಗಳ ಬಗ್ಗೆ ಏನೂ ತಿಳಿಯದವರೇ ಅತ್ಯಂತ ಆರೋಗ್ಯದಿಂದ ಇದ್ದಾರೆ.

ಶರೀರದ ತಾಪಮಾನ ಮಾತ್ರ ಸ್ವಲ್ಪ ಭಿನ್ನವಾಗಿ ವರ್ತಿಸಿದೆ
105°F ಗಿಂತ ಹೆಚ್ಚಿದ್ದವರೂ ಅರಾಮವಾಗಿ ಸ್ವಲ್ಪ ಜ್ವರ ಎಂದು ವಿಶ್ರಾಂತಿಯಲ್ಲಿ ಇದ್ದವರನ್ನೂ ಮತ್ತು 100°F ಗೇ ಆಕ್ಷೇಪ( febrile seizures) ಬಂದವರನ್ನೂ ನೋಡಿದ್ದೇವೆ.

87 ವರ್ಷದ ಆ ತಾಯಿಯನ್ನು ಮಗ ಮೊಮ್ಮಗ ಒತ್ತಾಯದಿಂದ ಕರೆತಂದಿದ್ದರು, ಆಕೆ ಚನ್ನಾಗಿ ಉತ್ತಮ ಪ್ರಮಾಣದಲ್ಲಿ ಊಟ ಮಾಡುತ್ತಿದ್ದರು, ದೊಡ್ಡ ಬಾಯಿಯಿಂದ ಎಲ್ಲರೊಂದಿಗೆ ಜಗಳಕಾಯುತ್ತಿದ್ದರು, ಅವರ ಚರ್ಮದ ಬಣ್ಣ‌ನೋಡಿ ಪರೀಕ್ಷೆ ಮಾಡಿದರೆ ಹಿಮೋಗ್ಲೋಬಿನ್ 2% ಇತ್ತು!!

ತಲೆಸುತ್ತು,‌ ಕಣ್ಣು ಕತ್ತಲು ಆಗಲ್ವಾ ಅಜ್ಜೀ ಎಂದರೆ, ಏ ನನಗೆಂತಾ ಆಗಿದೆ, ಕನ್ನಡಕ‌ ಇಲ್ಲದೇ ಓದುತ್ತೇನೆ..
ಎಂದರು!!!

ಒಟ್ಟಾರೆ ಅಭಿಪ್ರಾಯ ಏನೆಂದರೆ:

ವ್ಯಕ್ತಿಯಿಂದ ವ್ಯಕ್ತಿ ಭಿನ್ನವಾಗಿರುತ್ತಾನೆ, ಹಾಗಾಗಿ ಅವನ ಎಲ್ಲಾ ಅವಯವಗಳೂ ವಿಭಿನ್ನ ಅಳತೆಯಿಂದ ಕಾರ್ಯನಿರ್ವಹಣೆ ಮಾಡುತ್ತಿರುತ್ತವೆ.

ನಮ್ಮ ತಿಳುವಳಿಕೆ ಮತ್ತು ಆತಂಕವೇ ನಮ್ಮ ದೊಡ್ಡ ಶತ್ರು

ಏನೊಂದೂ ಪೂರ್ವಾಗ್ರಹ ಇಲ್ಲದೇ, ಶರೀರದಲ್ಲಿ ಆಗುವ ನಿಜವಾದ ವ್ಯತ್ಯಾಸಗಳನ್ನು ಗುರುತಿಸಿ ನಿಜವಾದ ವೈದ್ಯರಿಗೆ ತಿಳಿಸಿದರೆ ಸಾಕು, ಅವರ ಕೆಲಸವನ್ನು ಅವರು ಮಾಡಿ ನಿರ್ವಹಿಸುತ್ತಾರೆ.

ಅತ್ಯುತ್ತಮ ಆಹಾರ-ಶಾರೀರಿಕ ಶ್ರಮ-ಆತಂಕ ರಹಿತ ಜೀವನ
ಇವು ಶಕ್ತಿಯನ್ನು ವರ್ಧಿಸಬಲ್ಲವು, ಅದರಿಂದ ಈ ಶರೀರ ಅನಾರೋಗ್ಯಗಳ ಹೊಡೆತದ ಅತ್ಯಂತ ದಾರುಣ ದುಷ್ಪರಿಣಾಮಗಳನ್ನೂ ತಡೆದುಕೊಳ್ಳ ಬಲ್ಲದು.

ಎಲ್ಲರೂ ಆರೋಗ್ಯದಿಂದ ಇರೋಣ

9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!