ಶಿಕಾರಿಪುರ ಪಟ್ಟಣದ ಚನ್ನಮಲ್ಲಿಕಾರ್ಜುನ ವಿಧ್ಯಾ ಸಂಸ್ಥೆಯ ಮುಖ್ಯಸ್ಥ ಚನಯ್ಯ‌ ವಿಧಿವಶ..!

ಶಿಕಾರಿಪುರ ಪಟ್ಟಣದ ಚನ್ನಮಲ್ಲಿಕಾರ್ಜುನ ವಿಧ್ಯಾ ಸಂಸ್ಥೆಯ ಮುಖ್ಯಸ್ಥ ಚನಯ್ಯ‌ ವಿಧಿವಶ..!

ಶಿಕಾರಿಪುರದ ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಸಹೃದಯಿಗಳು ಸರಳ ಸಜ್ಜನಿಕೆಯ ಅತ್ಮಿಯರಾದ
ಶ್ರೀಯುತ ಚನ್ನಯ್ಯನವರು ( 65) ಇಂದು ಬೆಳಗ್ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಫಲಕಾರಿಯಾಗದೆ ನಿಧನ ರಾಗಿದ್ದಾರೆ ಎಂದು ತಿಳಿದ್ದು ಬಂದಿದೆ.

ಶಿಕಾರಿಪುರ ಪಟ್ಟಣದ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ 30ಕ್ಕೂ ಹೆಚ್ಚು ವರ್ಷಗಳಿಂದ ನಡೆಸಿಕೊಂಡು ಬಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ ಅವರು ಇಂದು ನಿಧಾನರಾಗಿರುವುದು ತಾಲೂಕಿನ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ‌ ನಷ್ಟವಾಗಿದೆ.

ಮೃತ ಚನಯ್ಯ ಅವರ ಪತ್ನಿ ಕೂಡ‌ ಶಿಕ್ಷಕಾರಿದ್ದು ಇವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.

ಅಂತ್ಯಸಂಸ್ಕಾರವನ್ನು ಅವರ ಹುಟ್ಟೂರು ಚಿನ್ನಿಕಟ್ಟೆ ಗ್ರಾಮದಲ್ಲಿ ‌ಕೋವೀಡ್ ನಿಯಮಾನುಸಾರ ನಡೆಸಲಾಯಿತು.

ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಇವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಕೊಡಲಿ ಎಂದು ತಾಲೂಕಿನ‌ ಗಣ್ಯರು ಹಳೇ ವಿಧ್ಯಾರ್ಥಿಗಳು ಪೋಷಕರು ಕಂಬನಿ‌ ಮಿಡಿದಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!