ಸೋಂಕಿನಿಂದ ಶೀಘ್ರವಾಗಿ ಸಾಯುತ್ತಿರುವವರು ಯಾರು? ಏಕೆ?

ಸೋಂಕಿನಿಂದ ಶೀಘ್ರವಾಗಿ ಸಾಯುತ್ತಿರುವವರು ಯಾರು? ಏಕೆ?

ಆಸ್ಪತ್ರೆ ರಹಿತ ಆರೋಗ್ಯಕ್ಕೆ
ಆಯುರ್ವೇದ

📝 ವಿಷಯ: ಸೋಂಕಿನಿಂದ ಶೀಘ್ರವಾಗಿ ಸಾಯುತ್ತಿರುವವರು ಯಾರು? ಏಕೆ?

ಈ ಸಂದೇಶವನ್ನು ಕಡೆಗಣಿಸದೇ ಓದಿ.

ನಿತ್ಯವೂ ನಮಗೆ ಕನಿಷ್ಠ ಐವತ್ತು ರೋಗಿಗಳು ಕರೆ ಮಾಡಿ ಆಯುರ್ವೇದ ಪರಿಹಾರ ಕೇಳುತ್ತಿರುವ ಈ ಸಂದರ್ಭದಲ್ಲಿ ಯಾರಿಗೆ ಹೆಚ್ಚಿನ ಚಿಕಿತ್ಸೆ ಬೇಕಿದೆ, ಯಾರು ಗುಣಮುಖರಾಗದೇ ಮಸಣದ ಹಾದಿ ಹಿಡಿದಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದುಬರುತ್ತಿದೆ.

ಈಗ ನಾವು ಹೇಳಹೊರಟ ಈ ಕಾರಣಕ್ಕೆ ಪುರಾವೆ ಬೇಕೆಂದರೆ, ನಿಮ್ಮ ಸುತ್ತಮುತ್ತ ಪ್ರಾಣ ಕಳೆದುಕೊಂಡ ಯುವ ಜನರ ಜೀವನವನ್ನೊಮ್ಮೆ ಗಮನಿಸಿ ಸಾಕು.

ಇದು ವೈಜ್ಞಾನಿಕ ಕಾರಣ ಇಲ್ಲ ಎನ್ನುವ ಮೂರ್ಖರಿಗೆ ಉತ್ತರ ಹೇಳುತ್ತಾ ಕೂಡುವ ಸಮಯವಲ್ಲ! ಪ್ರತ್ಯಕ್ಷ ಅನುಭವಕ್ಕಿಂತ ದೊಡ್ಡ ವಿಜ್ಞಾನವೆಲ್ಲಿದೆ?!!
ಯಾವ ನಿಖರ ಔಷಧಗಳಿಲ್ಲದ ಈ ಸೋಂಕಿನಲ್ಲಿ, ರಕ್ಷಣೆ ಮಾಡುವ ಆಹಾರವನ್ನು ಪಾಲನೆ ಮಾಡುವುದು ಅನ್ಯಾಯವೇ? ಅಪಚಾರವೇ?
ಪ್ರಾಣಹೋದಮೇಲೆ ಯಾವ ಕಾರಣ ವೈಜ್ಞಾನಿಕ ಕೊಟ್ಟರೆ ಏನು ಸಾವು ಸಾವೇ ತಾನೆ?!!!

ಗಮನಿಸಿ:
ಯಾರು,
• ಹೆಚ್ಚು ಹೆಚ್ಚು ವಗ್ಗರಣೆ ಕಲಸಿದ ಚಿತ್ರಾನ್ನ, ಪುಳಿಯೊಗರೆ, ಫ್ತೈಡ್ ರೈಸ್, ಎಗ್ ರೈಸ್ ಮುಂತಾದವುಗಳನ್ನು ಸೇವಿಸಿದ್ದಾರೋ ಅವರು,
• ಯಾರು ಪದೇಪದೇ ಕರಿದ ಪದಾರ್ಥಗಳ ಭೋಕ್ತರೋ ಅವರು,
• ಯಾರು ಮೈದಾದಿಂದ ತಯಾರಿಸಿದ ಬೇಕರಿ ಪದಾರ್ಥಗಳ ದಾಸರೋ ಅವರು
• ಯಾರು ರಾತ್ರಿ ನೆನೆಸಿ ಹುಳಿಬರಿಸಿದ ಇಡ್ಲಿ, ದೋಸೆ, ಪಡ್ಡುಗಳನ್ನು ನಿತ್ಯವೂ ತಿನ್ನುವರೋ ಅವರು,
• ಯಾರು ಅಗತ್ಯಕ್ಕಿಂತ ಅತಿ ಪ್ರಮಾಣದ ಆಹಾರ ಸೇವಿಸುತ್ತಿರುವರೋ ಅವರುಗಳು..

ಸೋಂಕಿನ ತೀವ್ರತೆಗೆ ಸಾಯುತ್ತಿರುವುದು ಕಣ್ಮುಂದೆ ನಡೆಯುತ್ತಿರುವ ಸತ್ಯ.

ಆಯುರ್ವೇದ ವೈದ್ಯರಾಗಿ ನಾವು ಅನೇಕ ವರ್ಷಗಳಿಂದ ಈ ಸತ್ಯವನ್ನು ಹೇಳುತ್ತಾ ಬಂದಿದ್ದರೂ, ಆಯುರ್ವೇದ ಎಂದರೆ ‘ಪಥ್ಯ’ ‘ಔಷಧ ಮುಗಿಸುವವರೆಗೆ ಮಾತ್ರ ಆಹಾರ ಪಾಲನೆ’ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ.
ಆಹಾರ ಪಾಲನೆಗೆ ವೈಜ್ಞಾನಿಕ ಕಾರಣ ಇಲ್ಲ ಎಂದು ಅನೇಕ ಬಾರಿ ಅಪಹಾಸ್ಯಕ್ಕೆ ಒಳಗಾಗಿದ್ದೇವೆ.
“ಏನಾದರೂ ತಿನ್ನಿ” ಯಾವುದಕ್ಕೂ ಪಥ್ಯಾಹಾರ ಇಲ್ಲ ಎನ್ನುವ ಆಧುನಿಕ ವೈದ್ಯರ ನುಡಿಗಳು ಬಹಳ ಜನರನ್ನು ಹಾದಿ ತಪ್ಪಿಸುತ್ತಿವೆ.
ಬಾಣಂತಿಗೆ ಹೇಳುತ್ತಾರೆ- “ನೀನೇನು ರೋಗಿಯೇ ಹೋಗಿ ಎಲ್ಲವನ್ನೂ ತಿನ್ನು” ಎಂದು, ಇದನ್ನು ನಂಬಿ ಪಡಬಾರದ ಕಷ್ಟವನ್ನು ಬಾಣಂತಿ ಮತ್ತು ಹಸುಗೂಸು ಅನುಭವಿಸಿದ್ದನ್ನು ಚಿಕಿತ್ಸಿಸಿದ್ದೇವೆ.

ಏನಾದರೂ ಇರಲಿ ಸಧ್ಯಕ್ಕೆ- ಶರೀರ ಸೊರಗಲಿ, ಸಣ್ಣದಾಗಲಿ, ಸ್ವಲ್ಪ ದುರ್ಬಲ ಎನ್ನಿಸಲಿ,‌ ಮೊದಲು ಬದುಕೋಣ ನಂತರ ಬೆಳೆಯೋಣ.

“ಕೇವಲ ಅನ್ನ ಮತ್ತು ತರಕಾರಿ ಮತ್ತು ಅತ್ಯಲ್ಪ ಹೆಸರು ಬೇಳೆ ಬೆರೆಸಿದ ಸಂಬಾರು ಮಾತ್ರ ಸೇವಿಸಿ” ಬದುಕಿ ಉಳಿಯೋಣ.

•••••
ನಿಮ್ಮ ಪ್ರತ್ಯಕ್ಷ ಅನುಭವಕ್ಕಾಗಿ,

ದಯಮಾಡಿ ಸುತ್ತಮುತ್ತಲಿನ ಸಾವುಗಳ ಶೋಧನೆ ಮಾಡಿ ನೋಡಿ-
ಪ್ರತ್ಯಕ್ಷ ಉತ್ತರ ಸಿಕ್ಕೇ ಸಿಗುತ್ತದೆ.

ಇದು ನೆಮ್ಮದಿ ತರುವ ಬದಲು ಭಯ ಹುಟ್ಟಿಸುತ್ತದೆ ಎನ್ನಿಸಬಹುದು, ಆದರೆ ಅದರ ಪರಿಣಾಮ-
ಜೀವನದಲ್ಲಿ ಮತ್ತೆಂದೂ ಸಿಕ್ಕ ಸಿಕ್ಕಂತೆ ಆಹಾರ ತಿನ್ನಬಾರದೆಂಬ ನೀತಿಯನ್ನು ಮನಸ್ಸು ತಂತಾನೇ ಅನುಸರಿಸುತ್ತದೆ.

• ತಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಎಂದು ಹೆಚ್ಚಿನ‌ತಾಯಂದಿರು ಮಾಡುತ್ತಿರುವ ಮೊತ್ತಮೊದಲ ತಪ್ಪೆಂದರೆ, ಸಿಹಿ, ಎಣ್ಣೆ ಪದಾರ್ಥಗಳಿಗೆ ಅವಕಾಶ ಮಾಡಿ ಕೊಡುತ್ತಿರುವುದು.

ಆತ್ಮೀಯರೇ,
ದಯಮಾಡಿ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ. ಆರೋಗ್ಯದಿಂದ ಇರಿ.

ಹೆಚ್ಚಿನ ಸಹಕಾರಕ್ಕೆ:
9148702645
8792290274

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!