ರಕ್ತದ ಕಾಮಾಲೆ ಆಸ್ಪತ್ರೆ ರಹಿತ ಜೀವನ…!

ರಕ್ತದ ಕಾಮಾಲೆ ಆಸ್ಪತ್ರೆ ರಹಿತ ಜೀವನ…!

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
🍀🍀☀️🍀🍀

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ರಕ್ತದ ಕಾಮಾಲೆ

ಸಾಮಾನ್ಯ ಕಾಮಾಲೆ ಯಕೃತ್ತಿನಿಂದ ಆಗುತ್ತದೆ, ಎಂದು ಕೇಳಿದ್ದೇವೆ, ಆದರೆ
ಏನಿದು? “ರಕ್ತದ ಕಾಮಾಲೆ?”
ಇಂದಿನಿಂದ ಕೆಲ ಸಂಚಿಕೆಗಳಲ್ಲಿ ಇದರ ಬಗ್ಗೆ ನೋಡೋಣ.

“ಲಿವರ್ ಫಕ್ಷನ್”(Liver Function Test LFT) ಎಂಬ ರಕ್ತ ಪರೀಕ್ಷೆಯಲ್ಲಿ “ಬಿಲಿರುಬಿನ್” ಅಂಶ ಹೆಚ್ಚಾದರೆ ಅದನ್ನು ಕಾಮಾಲೆ ಎಂದು ದೃಢಪಡಿಸಲಾಗುತ್ತದೆ.

ಆದರೆ, ಹೆಚ್ಚಿನ ಜನರಿಗೆ ಅದರ ಒಳಗಿನ ವಿಭಾಗಗಳು ತಿಳಿದಿರುವ ಸಾಧ್ಯತೆ ಇಲ್ಲ.

ಬಿಲಿರುಬಿನ್ ಎಂಬ ಅಂಶ ನೇರ ಯಕೃತ್ತಿನಿಂದ ಉತ್ಪತ್ತಿಯಾಗುತ್ತದೆ (ಇದನ್ನು ನೇರ ಪಿತ್ತ ಅಥವಾ direct bilirubin ಎಂದು ಕರೆಯಲಾಗುತ್ತದೆ) ಹಾಗೆಯೇ ಈ ಬಿಲಿರುಬಿನ್ ಅಂಶ ರಕ್ತಕಣಗಳ ವಿಭಜನೆಯಿಂದಲೂ ಉತ್ಪತ್ತಿಯಾಗುತ್ತದೆ(ಇದನ್ನು ಪರೋಕ್ಷ ಪಿತ್ತ ಅಥವಾ indirect bilirubin ಎಂದು ಕರೆಯಲಾಗುತ್ತದೆ)

ನೇರ ಪಿತ್ತ + ಪರೋಕ್ಷ ಪಿತ್ತ ಎರಡೂ ಸೇರಿ 1mg/dl(ಅಂದರೆ 1 ಡೆಸಿಲೀಟರ್ ರಕ್ತದಲ್ಲಿ 1 ಮಿಲಿಗ್ರಾಂ ಇದ್ದರೆ ಅದು ನಾರ್ಮಲ್)


ನೇರ ಪಿತ್ತ ಹೆಚ್ಚಿ ಬರುವ ಕಾಮಾಲೆಯನ್ನು ಆಯುರ್ವೇದ ಸುಲಭವಾಗಿ ಚಿಕಿತ್ಸೆ ಮಾಡುತ್ತದೆ, ಕೆಲವೇ ಕೆಲವು ಗಿಡಮೂಲಿಕೆಗಳಿಂದ ಅದನ್ನು ಸರಿಪಡಿಸಬಹುದು, ಹಾಗಾಗಿಯೇ ಪಾರಂಪರಿಕ ವಿಧಾನದಲ್ಲಿ ಕೆಲವು ಗಿಡಮೂಲಿಕೆ ಬಳಸಿ ಕೇವಲ ವಾರದಲ್ಲಿ ಎರಡುಬಾರಿ ಔಷಧಿ ಯೋಜಿಸಿ ಚಿಕಿತ್ಸೆಮಾಡುವ ಅನೇಕರನ್ನು ಈ ದೇಶದ ಹಳ್ಳಿಹಳ್ಳಿಗಳಲ್ಲಿ ನೋಡುತ್ತೇವೆ. ಆದರೆ ಅಲೋಪತಿ ವಿಜ್ಞಾನದ ಔಷಧಿಗಳಲ್ಲಿ ಇದಕ್ಕೆ ಚಿಕಿತ್ಸೆ ಇಲ್ಲ ಬದಲಾಗಿ ಸ್ವತಃ ಸರಿಯಾಗಲು ಸಹಕಾರಿಯಾಗುವಂತೆ ಫ್ಯಾಟ್ ಅಂಶಗಳನ್ನು ನಿಲ್ಲಿಸಲು ತಿಳಿಸುತ್ತಾರೆ ಅಷ್ಟೆ.


ಇಂದಿನ ಸಂಚಿಕೆಯ ಪ್ರಮುಖ ವಿಚಾರ ಎಂದರೆ “ಪರೋಕ್ಷ ಪಿತ್ತ” ದಿಂದ ಬರುವ “ರಕ್ತದ ಕಾಮಾಲೆ” ಇದು ಸುಲಭದಲ್ಲಿ ಚಿಕಿತ್ಸೆಮಾಡುವಂತದ್ದಲ್ಲ, ಏಕೆಂದರೆ ರಕ್ತಕಣಗಳ ಅಸಹಜ ವಿಭಜನೆಯು ಮನುಷ್ಯನಿಗೆ ಎಂತಹ ಆಪತ್ತನ್ನು ತರಬಲ್ಲದು ಗೊತ್ತೇ?!!

“ಇದರ ಅರಿವು ರೋಗಿ, ಪರಿಚಾರಕ ಮತ್ತು ಚಿಕಿತ್ಸಕನಿಗೆ ಇರಲೇಬೇಕು”

ಕೆಂಪು ರಕ್ತಕಣಗಳ ಆಳದ ತೊಂದರೆ ಇದಕ್ಕೆ ಕಾರಣವಾಗುತ್ತದೆ.

ದುರಾದೃಷ್ಟವಶಾತ್ ಎಲ್ಲೆಡೆ ಇಂದು ಈ ತರಹದ “ರಕ್ತದ ಕಾಮಾಲೆ” ಯಿಂದ ಬಳಲುವ ರೋಗಿಗಳನ್ನೇ ನಾವು ಹೆಚ್ಚು ಹೆಚ್ಚು ಕಾಣುತ್ತಿದ್ದೇವೆ.

ಇದರ ಹೆಚ್ವಿನ ಮಾಹಿತಿಯನ್ನು ನಾಳೆ ನೋಡೋಣ.

ನಿಮ್ಮ ಸಂಪರ್ಕಕ್ಕೆ:
📞 8792290274
       914870264

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!