ಶಿಕಾರಿಪುರ:ಕಾಳೇನಹಳ್ಳಿ ಶಿವಯೋಗ‌ ಮಂದಿರ ನೂತನ ಶ್ರೀಗಳ ಪಟ್ಟಾಧಿಕಾರ ರೇವಣ್ಣಸಿದ್ದ ಮಹಾಸ್ವಾಮಿಗಳ ಪುಣ್ಯ ಸ್ಮರಣೆ…!

ಶಿಕಾರಿಪುರ:ಕಾಳೇನಹಳ್ಳಿ ಶಿವಯೋಗ‌ ಮಂದಿರ ನೂತನ ಶ್ರೀಗಳ ಪಟ್ಟಾಧಿಕಾರ ರೇವಣ್ಣಸಿದ್ದ ಮಹಾಸ್ವಾಮಿಗಳ ಪುಣ್ಯ ಸ್ಮರಣೆ…!

ಶಿಕಾರಿಪುರ : ನಾಡಿನ ವಿವಿಧ ಭಾಗಗಳಿಂದ ನೊಂದು ಬೆಂದು ಬಂದಂತಹ ಅನೇಕ ಭಕ್ತರಿಗೆ ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಿ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ನೀಡಿ ಆಶೀರ್ವದಿಸಿದ ಮಹಾಪುರುಷರು ಲಿಂಗೈಕ್ಯರಾದ ರೇವಣಸಿದ್ಧ ಮಹಾಸ್ವಾಮಿಗಳು ಎಂದು ತಿಪ್ಪಾಯಿಕೊಪ್ಪ ಶ್ರೀ ಮ ನಿ ಪ್ರ ವಿರೂಪಾಕ್ಷ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

 ಇಂದು ತಾಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದಲ್ಲಿ ಕಾಯಕಯೋಗಿ ಮಹಾಪ್ರಸಾದಿ ಶ್ರೀ ಮ ನಿ ಪ್ರ ಲಿಂಗೈಕ್ಯರಾದ ರೇವಣಸಿದ್ಧ ಮಹಾಸ್ವಾಮಿಗಳವರ ಪ್ರಥಮ ಪುಣ್ಯರಾಧನೆ ಹಾಗೂ ನೂತನ ಗುರುಗಳಾದ ಮಹಾತಪಸ್ವಿ ಶ್ರೀಮಾನ್ ಶ್ರೀ ಮ ನಿ ಪ್ರ ಡಾ, ಸಿದ್ದಲಿಂಗ ಮಹಾಸ್ವಾಮಿಗಳವರ ಪಟ್ಟಾಧಿಕಾರ ಸಮಾರಂಭ ಕಾರ್ಯಕ್ರಮದಲ್ಲಿ ನೂತನ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, ಕಾಯಕಯೋಗಿ ಮಹಾತಪಸ್ವಿ ಗಳಾದ ರೇವಣಸಿದ್ಧ ಮಹಾಸ್ವಾಮಿಗಳು ಕಾಳೆನಳ್ಳಿಯ ಶಿವಯೋಗಾಶ್ರಮದಲ್ಲಿ ಸುಮಾರು ನಲವತ್ತು ವರ್ಷಗಳ ಕಾಲ ಸುದೀರ್ಘ ವಾಗಿ ಸೇವೆಸಲ್ಲಿಸುತ್ತಾ, ಆಗಮಿಸುವ ನೂರಾರು ಭಕ್ತರಿಗೆ ಪ್ರತಿನಿತ್ಯ ದಾಸೋಹ ಹಾಗೂ ಅವರ ಕಷ್ಟ ನಷ್ಟ ಸುಖ ಸಂತೋಷ ಹಾಗೂ ನೊಂದು-ಬೆಂದ ಅಂತಹ ಅನೇಕ ಭಕ್ತರಿಗೆ ಶಾಂತ್ವನ ನೀಡಿ ಸಲಹೆ ನೀಡಿದ ಅವರು, ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಿದ ಕಾಯಕ ಯೋಗಿ ಯಾಗಿದ್ದರು.

 ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿವಯೋಗಾಶ್ರಮದಲ್ಲಿದ್ದ ನೂರು ಎಕರೆ ಜಮೀನಿನಿಗೆ ಇನ್ನೂ ಹತ್ತಾರು ಎಕರೆ ಜಮೀನು ಜಾಗ ಸೇರಿಸುವ ಮೂಲಕ ಆಶ್ರಮ ಪೀಠದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು.

ಅವರು ಲಿಂಗೈಕ್ಯರಾಗುವ ಮೊದಲು ಅನಾರೋಗ್ಯರಾಗಿದ್ದಾಗ ಮುಂದಾಲೋಚನೆ ಇಟ್ಟುಕೊಂಡು ಈ ಆಶ್ರಮದ ಉತ್ತರಾಧಿಕಾರಿಯಾಗಿ ಶ್ರೀ ಮ ನಿ ಪ್ರ ಡಾ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಮಠದ ಸಮಸ್ತ ಆಸ್ತಿಯನ್ನು ವಿಲ್ ಬರೆದಿರುವುದು ತುಂಬಾ ಅನುಕೂಲಕರವಾಗಿದೆ. ಇನ್ನು ಮುಂದೆ ನೂತನ ಶ್ರೀಗಳು ಮಠದ ಸಮಸ್ತ ಆಸ್ತಿಯನ್ನು ಕಾಪಾಡಿಕೊಂಡು, ಇಲ್ಲಿಗೆ ಆಗಮಿಸುವ ಭಕ್ತರ ಕಷ್ಟ ಕಾರ್ಪಿಣ್ಯಗಳಿಗೆ ಅವರ ನೋವುಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ ಎಂದು ತಿಳಿಸಿದರು.

ಹುಬ್ಬಳ್ಳಿಯ ಮೂರುಸಾವಿರ ಮಠಾಧೀಶರಾದ ಶ್ರೀ ಮ ನಿ ಪ್ರ ಡಾ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದ ಅವರು ತಮಗೂ ಶ್ರೀ ಮ ನೀ ಪ್ರ ರೇವಣಸಿದ್ಧ ಮಹಾ ಸ್ವಾಮಿಯವರಿಗೆ ಅವಿನಾಭಾವ ಸಂಬಂಧವಿತ್ತು ಸಾವಿರದ ಒಂಬೈನೂರ 75 ರಿಂದಲೂ ಅವರೊಡನೆ ಒಡನಾಟ ಹೊಂದಿದೆ ಅವರು ನನಗೆ ತಾಯಿಯು ತನ್ನ ಮಗನಿಗೆ ನೀಡಿದ ಪ್ರೀತಿಗಿಂತಲೂ ಹೆಚ್ಚಿನ ಪ್ರೀತಿ ನೀಡಿ ನನಗೆ ಕಟ್ಟಬೇಕೇ ಪಟ್ಟಾಭಿಷೇಕ ಸಂದರ್ಭದಲ್ಲಿ ಆಶೀರ್ವಾದ ಮಾಡಿದ್ದರು 10ನೇ ತರಗತಿಯಲ್ಲಿ ಓದುತ್ತಿದ್ದ ನನಗೆ ರುದ್ರಮುನಿ ಸ್ವಾಮೀಜಿಯವರು ಇಲ್ಲಿಗೆ ಕಳಿಸಿದ್ದರು ಅಂದಿನಿಂದ ಅವರು ಲಿಂಗೈಕ್ಯರಾಗುವವರೆಗೂ ನಿರಂತರವಾಗಿ ಅವರ ಸಲಹೆ ಸಹಕಾರದಿಂದ ಮೂರುಸಾವಿರ ಮಠದ ಪೀಠಾಧಿಪತ್ಯವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ ಎಂದರು.

ಶಿವಯೋಗಾಶ್ರಮದ ಪೀಠಕ್ಕೆ ಸುಮಾರು ನಾನೂರು ಎಕರೆ ಜಮೀನು ಇತ್ತು ಅದರಲ್ಲಿ ಮುನ್ನೂರು ಎಕರೆ ಜಮೀನು ಕಂದಾಯವನ್ನು ಕಟ್ಟಲಾಗದೆ, ತಾಲ್ಲೂಕಿನ ಕಪ್ಪನಹಳ್ಳಿ ಕಾಳೇನಹಳ್ಳಿ ಹಾಗೂ ಕೊಟ್ಟ ಗ್ರಾಮದ ಮಠದ ಭಕ್ತರಿಗೆ ಧಾನ ಹಾಗೂ ಟೆನೆಂಟ್ ಆಕ್ಟ್ ಮೂಲಕ ನೀಡಲಾಯಿತು.

ಜಿಲ್ಲೆಯಲ್ಲಿ ನೂರಾರು ಮಠಾಧೀಶರು, ಅನೇಕ ಶರಣ ಶರಣೆಯರನ್ನ, ದಾರ್ಶನಿಕನ್ನ, ಸಾಹಿತಿಗಳನ್ನ ಹಾಗೂ ಉತ್ತಮ ರಾಜ್ಯದ ಮುಖ್ಯಮಂತ್ರಿಯವರನ್ನ ಪಡೆದ ಜನತೆ ಭಾಗ್ಯವಂತರು ಅಲ್ಲದೇ, ಇದೀಗ ಕಾಳೇನಹಳ್ಳಿಯ ಶಿವಯೋಗಾಶ್ರಮಕ್ಕೆ ಮಹಾ ತಪಸ್ವಿ ಆಧ್ಯಾತ್ಮಿಕ ಚಿಂತಕರೂ ಆಗಿರುವ ಶ್ರೀ ಮ ನಿ ಪ್ರ ಡಾ ಸಿದ್ದಲಿಂಗ ಮಹಾಸ್ವಾಮಿಗಳನ್ನ ಪಡೆದ ಶಿಕಾರಿಪುರ ತಾಲ್ಲೂಕಿನ ಜನತೆ ಪುಣ್ಯವಂತರು ಎಂದು ತಿಳಿಸಿದರು.

 ಸಂಸದ ಬಿ ವೈ ರಾಘವೇಂದ್ರರವರು ಮಾತನಾಡಿ ಶಿವಮೊಗ್ಗ ಮೂಲದ ತುಂಗಭದ್ರಾ ಹಾಗೂ ತಾಲ್ಲೂಕಿನ ಕುಮುದ್ವತಿ ನದಿ ನೀರು ಸಂಗಮದಿಂದ ತಾಲ್ಲೂಕಿನ ಜನತೆ ಭಾಗ್ಯವಂತರಾಗಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಏತ ನೀರಾವರಿಯ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆ ಮಾಡಲಾಗುದ್ದರೆ, ಇತ್ತ ಶಿವಯೋಗಿ ಮಠಕ್ಕೆ ಗೋಣಿಬೀಡಿನ ಶ್ರೀಗಳಾದ ಶ್ರೀ ಮ ನಿ ಪ್ರ ಡಾ, ಸಿದ್ದಲಿಂಗ ಮಹಾಸ್ವಾಮಿಗಳನ್ನ ಪೀಠಾಧಿಪತಿಯಾಗಿ ಮಾಡಲಾಗುತ್ತಿದೆ. 

ಶಿಕಾರಿಪುರ ತಾಲ್ಲೂಕು ಧಾರ್ಮಿಕ ಕ್ಷೇತ್ರದಲ್ಲಿ ಮೊದಲನೇ ಹೆಜ್ಜೆ ಇಟ್ಟು, ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದ ನೇತೃತ್ವದಲ್ಲಿ ತಾಲ್ಲೂಕಿನವರೇ ಆದ ಅಲ್ಲಮ ಪ್ರಭುಗಳೇ ಮೊದಲು ಅದೇರೀತಿ ಮಹಿಳಾ ವಚನಗಾರರಲ್ಲಿ ಅಕ್ಕಮಹಾದೇವಿಯವರೇ ಮೊದಲು ಹಾಗೆಯೇ ಶಾಸನಗಳಲ್ಲಿ ಹಾಸನದ ಸಿಂಹ ಕಟಂಜನ ಶಾಸನ ಮೊದಲು ಎಂದು ಹೇಳಲಾಗುತ್ತಿತ್ತು ಆದರೆ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ದೊರೆತ ಶಾಸನ ಸಿಂಹಕಟಂಜನ ಶಾಸನಕಿಂತಲೂ ಹಲ್ಮಿಡಿ ಶಾಸನ ಮೊದಲು ಎಂದು ಹೇಳಲಾಗುತ್ತಿದೆ.ಹೀಗೆ ಅನೇಕ ರೀತಿಯಲ್ಲಿ ಶಿಕಾರಿಪುರ ಮೊದಲಾಗುತ್ತಿದೆ.

ಧರ್ಮ ಯೋಗಿ ಕಾಯಕಯೋಗಿ ಶ್ರೀ ಮ ನಿ ಪ್ರ ಡಾ ರೇವಣಸಿದ್ಧ ಮಹಾಸ್ವಾಮಿಗಳ ಆಶಯದಂತೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಇಲ್ಲಿ ಒಂದು ಗ್ರಂಥಾಲಯ ತೆರೆಯುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಆನಂದಪುರ ಮುರುಘಾಮಠದ ಶ್ರೀ ಮ ನಿ ಪ್ರ ಡಾ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು, ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕೊಟ್ಟೂರೇಶ್ವರ ಸಂಸ್ಥಾನದ ಹಾಲಕೆರೆಯ ಶ್ರೀ ಮ ನಿ ಪ್ರ ಡಾ ಸಂಗನಬಸವ ಮಹಾಸ್ವಾಮಿಗಳು, ಹುಕ್ಕೆರಿ, ಅಕ್ಕಿ ಆಲೂರು, ಮುಪ್ಪಿನ ಮಠ, ತೊಗರ್ಸಿ ಸೇರಿದಂತೆ ವಿವಿಧ ಮಠಾಧೀಶರು, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ ಸೇರಿದಂತೆ ವಿವಿಧ ತಾಲೂಕುಗಳಿಂದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತ ಸಮೂಹ ಹಾಗೂ ಅನೇಕರು ಇದ್ದರು.

ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳಿಗೆ ಡೊಳ್ಳು ಕುಣಿತ ವೀರಗಾಸೆ ನೃತ್ಯ ಹಾಗೂ ವಿವಿಧ ಕಲಾ ತಂಡಗಳಿಂದ ಕಾಳೇನಹಳ್ಳಿ ಗ್ರಾಮದ ವಿವಿಧ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.

Admin

Leave a Reply

Your email address will not be published. Required fields are marked *

error: Content is protected !!