ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
      ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌷🌷🌷🌷🌷🌷🌷🌷

ಆಸ್ಪತ್ರೆ ರಹಿತ ಆರೋಗ್ಯಕ್ಕೆ
ಆಯುರ್ವೇದ

✍️: ಇಂದಿನ ವಿಷಯ: ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

• ಸಹಜ ಓಜಸ್ಸು
• ಕಾಲಕೃತ ಓಜಸ್ಸು
• ಯುಕ್ತಿಕೃತ ಓಜಸ್ಸು

❄️ ಕಾಲಕೃತ ಓಜ ಅಥವಾ ಕಾಲಜ ಬಲ:
(ಕಾಲ+ವಯಸ್ಸನ್ನು ಅವಲಂಬಿಸಿ ದೊರೆಯುವ ಬಲ)

ಕಾಲಜ ಓಜಸ್ಸು, ಋತುವನ್ನೂ ಮತ್ತು ಶರೀರದ ವಯಸ್ಸನ್ನೂ ಆಶ್ರಯಿಸಿರುವ ಕಾರಣ, ಇದು ನಮ್ಮ ಪ್ರಯತ್ನದಿಂದ ದೊರೆಯುವುದಲ್ಲ.
ಆದರೂ ಕಾಲಕ್ಕೆ ಮತ್ತು ನಮ್ಮ ವಯಸ್ಸಿಗೆ ಪೂರಕವಾಗಿ ನಡೆದುಕೊಳ್ಳದಿದ್ದರೆ ಯಾವ ಲಾಭವೂ ದೊರೆಯದು. ಹಾಗಾಗಿ ಈ ಬಲದ ಗಳಿಕೆಯಲ್ಲಿ ಅದು ಹೇಳಿದಂತೆ ನಡೆದುಕೊಳ್ಳುವಷ್ಟರ ಮಟ್ಟಿಗೆ ನಮ್ಮ ಪ್ರಯತ್ನದ ಅವಶ್ಯಕತೆ ಇದೆ.

ಹೇಮಂತ ಮತ್ತು ಶಿಶಿರ ಋತುಗಳು(ಚಳಿಗಾಲದಲ್ಲಿ) ಪೃಥ್ವಿಗೂ ಮತ್ತು ಇಲ್ಲಿನ ಜೀವಗಳಿಗೂ ಸಹಜವಾಗಿ ಬಲವನ್ನು / ಓಜಸ್ಸನ್ನು, ನೀಡುತ್ತವೆ. ಇದಕ್ಕೆ ಎರೆಡು ಕಾರಣಗಳಿವೆ-
• ಈ ಕಾಲದಲ್ಲಿ ರಾತ್ರಿ ದೀರ್ಘವಾಗಿರುತ್ತದೆ, ಜೀವಿಗಳಿಗೆ ಹೆಚ್ಚು ವಿಶ್ರಾಂತಿ ದೊರೆಯುತ್ತದೆ.
ಮತ್ತು
• ಬೆವರು ಹೆಚ್ಚಾಗಿ ಬರದ ಕಾರಣ ಜೀರ್ಣಶಕ್ತಿ ಅತ್ಯುತ್ತಮವಾಗಿರುತ್ತದೆ, ಸೇವಿಸಿದ ಸರ್ವರೀತಿಯ ಆಹಾರ ಪ್ರಕಾರಗಳು(ಕುಡಿಯುವ, ಕಚ್ಚುವ, ನೆಕ್ಕುವ, ಚಪ್ಪರಿಸುವ ಆಹಾರಗಳು) ಪಚನವಾಗಿ ಧಾತುಗಳಿಗೆ ಉತ್ತಮ ಬಲವನ್ನು ಕೊಡುತ್ತವೆ.

🔺 ಸೂಚನೆ: ಆದರೆ ಇದು ಅವನ ವಯಸ್ಸನ್ನು ಅವಲಂಬಿಸಿರುತ್ತದೆ. ಚಳಿಗಾಲ ವೃದ್ಧರಿಗೆ ಬಲವನ್ನು ಕೊಟ್ಟರೂ ಅದು ಅವರಿಗೆ ಸಹಕಾರಿಯಾಗಿರುವುದಿಲ್ಲ, ಆಗ ಅವರ ಸಂಧುಗಳು ಬಲವನ್ನು ಸ್ವೀಕರಿಸದೇ ಹಿಡಿದುಕೊಂಡು ನೋವನ್ನು ಕೊಡುತ್ತವೆ, ಅದೇ ಚಳಿಗಾಲ ಯುವಕನಿಗೆ ಸದೃಢತೆಯನ್ನು, ಹೆಚ್ಚು ಕೆಲಸ ಮಾಡುವಂತೆ ಬಲವನ್ನು ಕೊಡುತ್ತದೆ.
ಈ ಕಾಲದಲ್ಲಿ, ವೃದ್ಧರಿಗೆ ರಕ್ತನಾಳಗಳ ಸಂಕೋಚದಿಂದ ಸ್ವಲ್ಪ ಬಲ ಬಂದಂತೆ ಕಂಡು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ, ಆದರೆ ಕೆಲವು ವೃದ್ಧರಿಗೆ ರಕ್ತನಾಳಗಳು ಕಟ್ಟಿಕೊಳ್ಳುವ ಸಾಧ್ಯತೆಯೂ ಇರುತ್ತದೆ, ಆದರೆ ಯುವಕರಿಗೆ ಆಗುವ ರಕ್ತನಾಳಗಳ ಸಂಕೋಚ ಹಸಿವನ್ನೂ ಹೆಚ್ಚಿಸಿ ಮತ್ತೆ ಮತ್ತೆ ಆಹಾರ ಸೇವಿವಂತೆ ಅಥವಾ ಗರಿಷ್ಠ ಪ್ರಮಾಣದ ಆಹಾರ ಸೇವಿಸುವಂತೆ ಮಾಡುತ್ತದೆ ಮತ್ತು ಉತ್ಸಾಹವನ್ನು ವರ್ಧಿಸುತ್ತದೆ, ಹಾಗಾಗಿ ಇದು ಬಲವರ್ಧನೆಗೆ ಸಹಕರಿಸುತ್ತದೆ.

▪️ ಓಜಸ್ಸು ಅಥವಾ ಬಲವು ಶರೀರದಲ್ಲಿ ಪ್ರಮುಖ ಮೂರು ಗುಣಗಳ ರೂಪದಲ್ಲಿ ಸಂಗ್ರಹವಾಗಿರುತ್ತದೆ-

  1. ಸ್ನಿಗ್ಧ(lubricant and nourishing in nature)
  2. ಗುರು(High calories in nature)
  3. ಶೀತ(cool in nature)

ಶೀತ ಋತುಗಳಲ್ಲಿ ಸಹಜವಾಗಿ ಈ ಮೂರೂ ಗುಣಗಳು ನಮ್ಮ ಶರೀರದ ವಿವಿಧ ಧಾತುಗಳಲ್ಲಿ ಸಂಗ್ರಹವಾಗುತ್ತವೆ. ಈ ಗುಣಗಳೇ ಶಕ್ತಿಯ ಆಕರಗಳು ಮತ್ತು ಅಗತ್ಯ ಬಂದಾಗ ಇವು ಕರಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತಿರುತ್ತವೆ. ಹಾಗೆ ಶಕ್ತಿ ಬಿಡುಗಡೆ ಮಾಡಿದ ನಂತರ, ಶಾರೀರಿಕ‌‌ ಶ್ರಮದ ಆಧಾರದಲ್ಲಿ ನಿಧಾನವಾಗಿ, ಮಧ್ಯಮ ವೇಗದಲ್ಲಿ ಅಥವಾ ಶೀಘ್ರವಾಗಿ ಆ ಗುಣಗಳನ್ನು ಕಳೆದುಕೊಳ್ಳುತ್ತವೆ. ಆಗ ನಮಗೆ ಮತ್ತೆ ಶಕ್ತಿ‌ಸಂಗ್ರಹ ಸೂಚಕವಾಗಿ ಹಸಿವಾಗುತ್ತದೆ.

👇 ಇದು ಈ‌ ಕೆಳಗಿನಂತೆ ಇರುತ್ತದೆ.
★ ಸ್ನಿಗ್ಧ ಗುಣವು ಕರಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತಾ ರೂಕ್ಷದ ಕಡೆಗೆ ತಿರುಗುತ್ತದೆ.

★ ಗುರು ಗುಣವು ಕರಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತಾ ಲಘು ಗುಣದ ಕಡೆಗೆ ತಿರುಗುತ್ತದೆ.

★ ಶೀತ ಗುಣವು ಕರಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತಾ ಉಷ್ಣದ ಕಡೆಗೆ ತಿರುಗುತ್ತದೆ.

ಸ್ನಿಗ್ಧ, ಗುರು, ಶೀತ ಗುಣಗಳು ಶಕ್ತಿ ಸಂಗ್ರಹದ ರೂಪದಲ್ಲಿ ಇದ್ದು ಬಲ ಅಥವಾ ಓಜಸ್ಸು ಎನ್ನಿಸಿಕೊಳ್ಳುತ್ತವೆ. ಹಾಗಾಗಿ ಶಕ್ತಿಗೆ ಸಂಗ್ರಾಹಕ ಗುಣಗಳನ್ನೇ ಹೊಂದಿರುವ ಶೀತ ಋತುವು ಸಹಜವಾಗಿ ಬಲ / ಓಜೋಕಾರಕ ಕಾಲ.‌

ಈ‌ ಕಾರಣದಿಂದಲೇ ಶೀತ ಋತುವಿನಿಂದ ಸಿಗುವ ಬಲವನ್ನು “ಕಾಲಜ ಬಲ” ಎನ್ನುವರು.

ಆದರೆ ಶೀತ ಕಾಲದಲ್ಲಿ ಎಲ್ಲರೂ ಸಮಾನ‌ ಪ್ರಮಾಣದ ಓಜಸ್ಸನ್ನು ಪಡೆಯಲು ಅಸಾಧ್ಯ!! ಹಿಡಿಯುವ ಪಾತ್ರೆಯ ಸಾಮರ್ಥ್ಯದಷ್ಟು ಶಕ್ತಿ ತುಂಬಿಕೊಳ್ಳುತ್ತದೆ. ಹಾಗಾಗಿ
ಶೀತ ಕಾಲ ಯುವಕನಿಗೂ, ವೃದ್ಧನಿಗೂ ಒಂದೇ ರೀತಿಯ ಬಲವನ್ನು ಕೊಡಲು ಸಾಧ್ಯವೇ‌ ಇಲ್ಲ.

ಒಟ್ಟಾರೆ
ಶೀತಕಾಲ ಬಲಕಾರಕ ಮತ್ತು ವಯೋ ಅವಲಂಬಿತ.

🌿ಎಲ್ಲವೂ ಒಳ್ಳೆಯದಾಗುತ್ತದೆ ; ಎಲ್ಲರಿಗೂ ಒಳಿತಾಗುತ್ತದೆ🌿

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!