ರೋಗ ಬರಬಾರದೆಂದರೆ ಯಾವ ಕಾರಣಗಳನ್ನೂ ಹೇಳದೇ ತಡೆಯಲೇಬೇಕಾದ ವೃತ್ತಿಗಳು..!

ರೋಗ ಬರಬಾರದೆಂದರೆ ಯಾವ ಕಾರಣಗಳನ್ನೂ ಹೇಳದೇ ತಡೆಯಲೇಬೇಕಾದ ವೃತ್ತಿಗಳು..!

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌼🌼🌼🍃🍃🌼🌼🌼

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಧಾರಣೀಯ ವೇಗಗಳು
(ರೋಗ ಬರಬಾರದೆಂದರೆ ಯಾವ ಕಾರಣಗಳನ್ನೂ ಹೇಳದೇ ತಡೆಯಲೇಬೇಕಾದ ವೃತ್ತಿಗಳು)

ಇದುವರೆಗೆ ಆಚಾರ್ಯರು ಹೇಳಿದ ತಡೆಯಬಾರದ ವೃತ್ತಿಗಳನ್ನು ನೋಡಿದೆವು, ಆದರೆ ಇಂದು
ತುರ್ತಾಗಿ ತಡೆಯಲೇಬೇಕಾದ ವೃತ್ತಿಗಳ ಬಗ್ಗೆ ಹೇಳುತ್ತಾರೆ

ಸಹಜವಾಗಿ ಬಂದ ಮಾನಸಿಕ ವೃತ್ತಿಗಳನ್ನು ತಡೆಯದಿದ್ದರೆ ಅತ್ಯಂತ ಅಪಾಯಕರ!!

📜 ಧಾರಯೇತ್ತು ಸದಾ ವೇಗಾನ್ …………… |
ಲೋಭ ಈರ್ಷಾ ದ್ವೇಷ ಮಾತ್ಸರ್ಯ ರಾಗಾದೀನಾಂ ಜಿತೇಂದ್ರಿಯಃ||25||
-ಅಷ್ಟಾಂಗ ಹೃದಯ, ರೋಗ ಅನುತ್ಪಾದನೀಯ ಅಧ್ಯಾಯ-4


ಎಲ್ಲರಿಗೂ ಗೊತ್ತಿರುವಂತೆ
“ಅರಿ ಷಟ್”(ಆರು ವೈರಿಗಳು)ಗಳನ್ನು ಬುದ್ಧಿಪೂರ್ವಕವಾಗಿ ತಡೆಯಲೇಬೇಕು.

★ ಗಮನಿಸಿ: ಜ್ವರಾದಿ ರೋಗಗಳೆಂದೋ ಅಥವಾ ಇನ್ನಾವುದೇ ರೋಗವನ್ನು ಮೊದಲು ಹೇಳದೇ-
ರಾಗಾದಿ ರೋಗಗಳು…. ಎಂದಿದ್ದಾರೆ ಮಹರ್ಷಿ ವಾಗ್ಭಟಾಚಾರ್ಯರು. ಅಂದರೆ ಎಲ್ಲಾ ರೋಗಗಳ ಮೂಲ “ಇಚ್ಛೆ ಅಥವಾ ಆಸೆ”.
ಈ ಹುಟ್ಟು ಸಹ ರೋಗ ಎನ್ನುತ್ತದೆ ವೇದ.
ಇರಲಿ,
ಒಟ್ಟಾರೆ,
“ಇಚ್ಚೆಯು ರೋಗದ ಮೂಲ….”

ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳ ಅರ್ಥ ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.

ಇವುಗಳ ವೃತ್ತಿಯನ್ನು ತಡೆಯದಿದ್ದರೆ ಏನಾಗುತ್ತದೆ ನೋಡೋಣ-
🔅 ಕಾಮ ಶೋಕ ಭಯಾತ್ ವಾಯುಃ
🔅 ಕ್ರೋಧಾತ್ ಪಿತ್ತಮ್
ಅಂದರೆ ಮನದಲ್ಲಿ ಉಂಟಾಗುವ ಕಾಮಾದಿಗಳಿಂದ ವಾತವೂ, ಕ್ರೋಧದಿಂದ ಪಿತ್ತವೂ ವರ್ಧಿಸುತ್ತದೆ.
ಹೀಗೆ ಮನದ ಕಾರಣದಿಂದ ಶರೀರದಲ್ಲಿ ವೃದ್ಧಿಯಾದ ವಾತ-ಪಿತ್ತ ದೋಷಗಳು ಅತ್ಯಂತ ಸಹಜವಾಗಿ ರಕ್ತದ, ರಕ್ತನಾಳಗಳ ರೋಗಗಳನ್ನು ತರುತ್ತವೆ, ಏಕೆಂದರೆ ರಕ್ತವು ಪಿತ್ತ ದ ಅಂಶದಿಂದಲೇ ಆಗಿದೆ ಮತ್ತು ಇದು ಸದಾ ವಾತ ದಿಂದ ಚಲಿಸುತ್ತಿರುತ್ತದೆ.

ರಕ್ತ ಮತ್ತು ರಕ್ತನಾಳಗಳ ವಿಕೃತಿಯು ಅನೇಕ ರೋಗಗಳನ್ನು ಸುಲಭವಾಗಿ ತರುತ್ತವೆ. ಅತ್ಯುತ್ತಮ ಆಹಾರ ಸೇವಿಸಿದರೂ ಆಹಾರವನ್ನು ಸರ್ವಶರೀರದ ಧಾತುಗಳಿಗೆ ಹಂಚುವ ವಾಕಹವಾದ ರಕ್ತವೇ ದೂಷಿತವಾಗಿದ್ದರೆ ಆ ಆಹಾರವೂ ದೂಷಿತವಾಗುತ್ತದೆ.

ಮಳೆನೀರು ಶುದ್ಧವಾಗಿರುತ್ತದೆ, ಆದರೆ ಆ ನೀರು ಮಳೆ ಬಿದ್ದ ಸ್ಥಳದ ಮಣ್ಣಿನ ಗುಣವನ್ನು ಹೊಂದುವಂತೆ, ನಮ್ಮ ಆಹಾರ ರಕ್ತದ ಗುಣವನ್ನೇ ಹೊಂದಿ ದೂಷಿತವಾಗಿ ಎಲ್ಲಾ ಧಾತುಗಳಿಗೂ ದೂಷಿತ ಆಹಾರ ತಲುಪುತ್ತದೆ.‌ ಇದೇ ಎಲ್ಲಾ ರೋಗಗಳ ಅತ್ಯಂತ ಹತ್ತಿರದ ಕಾರಣ.
ಇದೇ ಕಾರಣದಿಂದ ಸುಶ್ರುತಾಚಾರ್ಯರು ರಕ್ತವನ್ನು ಪ್ರಧಾನ ದೋಷ ಎಂದು ಕರೆದಿದ್ದಾರೆ.

ಯಾವ ವ್ಯಕ್ತಿಯ ಮನಸ್ಸು ದೂಷಿತವೋ ಆತನ ರಕ್ತ ದೂಷಿತ, ಅದರಿಂದ ರಕ್ತದ ಮೂಲಸ್ಥಾನ ಯಕೃತ್ ದೂಷಿತವಾಗಿ ಆ ಕಾರಣದಿಂದ ವ್ಯಕ್ತಿಯ ಸರ್ವಾವಯವಗಳೂ ದೂಷಿತ, ಅದನ್ನೇ ರಕ್ತಪಿತ್ತ ಎಂಬ ಬಹುದೊಡ್ಡ ಪ್ರಕರಣವನ್ನು ಆಚಾರ್ಯರು ಹೇಳಿದ್ದಾರೆ. ಇಂದಿನ gastritis, oesophagitis, colitis, pancreatitis, hepatitis, sinusitis, cellulites, nephritis, cystitis, meningitis…..
itis, itis, itis !!! ಮುಂತಾದ ಎಲ್ಲವೂ ಈ ರಕ್ತ ಮತ್ತು ಪಿತ್ತದಿಂದಾದ ಊತಗಳು…

ಹಾಗಾಗಿ ಈ
“ರೋಗ ಸಮೂಹಗಳ ಮೂಲವೇ ರಕ್ತ ದುಷ್ಟಿ, ರಕ್ತ ದುಷ್ಟಿಯ ಅತ್ಯಂತ ಹತ್ತಿರದ ಮೂಲವೇ, ಮನೋ ದುಷ್ಟಿ”.

ವಾತ ದೋಷದ ಸಂಪರ್ಕದಿಂದ ರಕ್ತನಾಳಗಳು ತಮ್ಮ ಗಾತ್ರದಲ್ಲಿ (ವ್ಯಾಸದಲ್ಲಿ) ವ್ಯತ್ಯಸ್ಥವಾಗುತ್ತವೆ. ಈ ಸಂಕೋಚ ಮತ್ತು ಅತಿ ವಿಕಸನದಿಂದಲೇ, ಯಕೃತ್ತು, ಹೃದಯ, ಮೆದುಳು, ಮೂತ್ರಪಿಂಡ, ಮಾಂಸಖಂಡ, ಚರ್ಮ, ಇಂದ್ರಿಯ ಮುಂತಾದವುಗಳಿಗೆ ರಕ್ತ, ಗಾಳಿ, ನೀರು, ಆಹಾರ, ಕಶ್ಮಲಗಳ ವ್ಯಾಪಾರ ನಡೆಯದೇ ದಾರುಣ ರೋಗಗಳು ಬರುತ್ತವೆ.
° ಉದಾ: BP, Cardiac problems, Renal problems…… etc.,

📜 ………ತನ್ಯೋ, ಮಹತ್ಯೋ ವಾ ವಾತೇ ಸಿರಾಗತೇ||
-ಚರಕ ಸಂಹಿತಾ

★ ತನುತ್ವ=ಸಂಕೋಚ
★ ಮಹತ್ವ=ವಿಕಸನ

ಇಂದಿನ ಟಿ.ವಿ. ಸುದ್ದಿಗಳು ನಿರಂತರ ಭಯವನ್ನೇ ಹುಟ್ಟಿಸುವಲ್ಲಿ‌ ಅಗ್ರಶ್ರೇಣಿಯಲ್ಲಿ ನಿಲ್ಲುತ್ತವೆ.

ದೂರದ ಅಪರಿಚಿತರಿಗೆ ತೊಂದರೆ ಆದಾಗ, ಕರುಣೆ ಉದಿಸುವಂತೆ ಅಥವಾ ಪ್ರೀತಿಯಿಂದ ಸೇವೆಮಾಡುವಂತೆ ಪ್ರೇರೇಪಿಸುವ ಬದಲು. ಭಯ ಹುಟ್ಟಿಸುವ ರೀತಿಯಲ್ಲಿ ಬರುವ ಸುದ್ದಿಗಳು, ನಮ್ಮ ರಕ್ತನಾಳಗಳಲ್ಲಿ ಒತ್ತಡ ತಂದು BP ಹೆಚ್ಚುತ್ತಿದ್ದು ಅತ್ಯಂತ ಖೇದಕರ❗️

♻️ಆರೋಗ್ಯಕ್ಕಾಗಿ ಆಯುರ್ವೇದ ಅನುಸರಿಸಿ♻️

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!