ಬಹುವಾಗಿ ಕಾಡುವ ಸೊಂಟ-ಬೆನ್ನು-ಕತ್ತು ನೋವು ಮತ್ತು ಅದರ ಶಾಶ್ವತ ಪರಿಹಾರ. ಭಾಗ-2

ಬಹುವಾಗಿ ಕಾಡುವ ಸೊಂಟ-ಬೆನ್ನು-ಕತ್ತು ನೋವು ಮತ್ತು ಅದರ ಶಾಶ್ವತ ಪರಿಹಾರ. ಭಾಗ-2

☀️ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ☀️🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🍀

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಬಹುವಾಗಿ ಕಾಡುವ ಸೊಂಟ-ಬೆನ್ನು-ಕತ್ತು ನೋವು ಮತ್ತು ಅದರ ಶಾಶ್ವತ ಪರಿಹಾರ.
ಭಾಗ-2

📖 ಗುರ್ವಂಗಂ ತುದ್ಯತೇ……..|
ಭೇದೋ ಅಸ್ಥಿ ಪರ್ವಾಣಾಂ…..ಮಾಂಸ ಬಲ ಕ್ಷಯಃ ||
-ಚರಕ ಸಂಹಿತಾ

🖌 ಸೊಂಟ-ಬೆನ್ನು-ಕತ್ತು ನೋವುಗಳ ಉತ್ಪತ್ತಿ ಹೇಗೆ ಆಗುತ್ತದೆ?
• ದೊಡ್ಡ ಕರುಳಿನಲ್ಲಿ ಆಹಾರದ ಶೇಷ ದ್ರವ್ಯಗಳನ್ನು ದ್ರವರೂಪದಲ್ಲಿ ಹೀರಿಕೊಳ್ಳುವ ಮತ್ತು ಮಲವನ್ನು ಗಟ್ಟಿಗೊಳಿಸುವ ವ್ಯವಸ್ಥೆ ಇದೆ. ಈ ಕರುಳಿಗೆ ಊತ ಬಂದರೆ, ದ್ರವವನ್ನು ಹೀರಿಕೋಳ್ಳುವ ಸಾಮರ್ಥ್ಯ ಕ್ಷೀಣವಾಗಿ ಪ್ರಾಕೃತ ಮಲೋತ್ಪತ್ತಿಯಾಗುವುದಿಲ್ಲ. ಇಂತಹ ಅವಸ್ಥೆಯಲ್ಲಿ ಕರುಳು ಅಪಕ್ವ ಮಲವನ್ನು ಹಿಡಿದಿಟ್ಟು (“ಅಪಕ್ವಂ ಧಾರಯತಿ” ಗುಣದಿಂದ), ಹೀರಿಕೊಳ್ಳುವ ಬದಲು ಜಲವನ್ನು ಶರೀರದೊಳಕ್ಕೆ ಒತ್ತಡಪೂರ್ವಕವಾಗಿ ತಳ್ಳಲು ಬಲವಾದ ಅಸಹಜ ವಾತವನ್ನು ಉತ್ಪತ್ತಿಮಾಡಿಬಿಡುತ್ತದೆ. ಹೀಗೆ ನಿರಂತರ 14 ದಿನಗಳವರೆಗೆ ಉಂಟಾದ ವಾಯುವು ತನ್ನ ಸ್ಥಾನವಾದ ಕಟಿ(ಸೊಂಟಕ್ಕೆ)ಗೆ ವರ್ಗಾವಣೆಯಾಗುತ್ತದೆ.

ಆಗ ಅಲ್ಲಿರುವ ಮೆದುವಾದ ಮಾಂಸಖಂಡಗಳು ಮತ್ತು ಸ್ನಾಯುಗಳ ಸ್ನೇಹಾಂಶವನ್ನು ಹೀರಿಕೊಂಡು ವಾತವು ಶಾಂತವಾಗುತ್ತದೆ, ಆದರೆ ಸ್ನಾಯುಗಳು ಒಣಗಿ ಕುಗ್ಗುತ್ತವೆ. ಬಲ ಅಥವಾ ಎಡಕ್ಕೆ ಕುಗ್ಗಿದ ಸ್ನಾಯುವಿನ ಕಾರಣ discಗಳ ಮೇಲೆ ಸೂಕ್ಷ್ಮವಾಗಿ ಒತ್ತಡ ಆರಂಭವಾಗುತ್ತದೆ. ಇದೇ ನೋವಿನ ಆರಂಭ, ಇದು ಯಾವ ಸ್ನಾಯುವನ್ನು ಹಿಡಿದುಕೊಂಡಿದೆ ಎಂಬ ಆಧಾರದಲ್ಲಿ ನೋವು ಕತ್ತಿಗೋ, ಬೆನ್ನಿಗೋ ಅಥವಾ ಸೊಂಟಕ್ಕೋ ಬರುತ್ತದೆ.

🖌 ಸಾಮನ್ಯವಾಗಿ ಸೊಂಟ-ಬೆನ್ನು-ಕತ್ತು ನೋವುಗಳು ಯಾವಾಗಲೂ ಮೂಳೆ ತೊಂದರೆಗೇ ಸಂಬಂಧಿಸಿರುವುದಿಲ್ಲ:
● ಬೆನ್ನಿನಲ್ಲಿರುವ ಮಾಂಸಖಂಡಗಳ, ಸ್ನಾಯುಗಳು ನಮ್ಮ ಶಿರಸ್ಸಿನಿಂದ(skull) ಆರಂಭವಾಗಿ ಭುಜದ ಕೆಳಗೆ ಇರುವ ಅಂಶಾಸ್ಥಿ(Scapula) ಮತ್ತು ಕಟಿಯಲ್ಲಿರುವ ಅಗಲವಾದ ಭಗಾಸ್ಥಿ(Hip bone)ಗಳವರೆಗೆ ಹರಡಿಕೊಂಡಿವೆ ಮತ್ತು ಪ್ರತಿ ಕಶೇರುಕ ಮೂಳೆಗೂ ಬಲವಾಗಿ ಅಂಟಿರುವ ಶಕ್ತಿಯುತ ಸ್ನಾಯುಗಳು ಕತ್ತಿನ 7 + ಬೆನ್ನಿನ12 + ಕಟಿಯ5 + ತ್ರಿಕಾಸ್ಥಿಯ 1 (ಪರಸ್ಪರ ಅಂಟಿಕೊಂಡ 5) ಕಶೇರುಕ ಮಣಿಗಳನ್ನು ಒಂದು ನಿರ್ದಿಷ್ಟ ಅಂತರದಲ್ಲಿ ನೇರವಾಗಿ ಹಿಡಿದಿರಿಸಿರುತ್ತವೆ.

*ಈ ಸ್ನಾಯುಗಳಲ್ಲಿ ಉಂಟಾಗುವ ಬಹುಕಾಲದ ಸಂಕೋಚವೇ ಕತ್ತು, ಬೆನ್ನು ಅಥವಾ ಸೊಂಟದ ನೋವುಗಳಿಗೆ ಕಾರಣವೇ ಹೊರತು, discಗಳು ಅಲ್ಲ, ನೇರವಾಗಿ ಮೂಳೆಗಳಂತೂ ಅಲ್ಲವೇ ಅಲ್ಲ!
ದಾರುಣ ಹಂತದಲ್ಲಿ, ಅಪಘಾತಾದಿ ಕಾರಣಗಳಲ್ಲಿ ಮಾತ್ರ ಕಶೇರುಕ ಮೂಳೆಗಳ ನೇರ ಪಾತ್ರ ಇರುತ್ತದೆ.

ಇಲ್ಲಿ ಮೂಳೆ ತಜ್ಞರ, ಚಿಕಿತ್ಸಕರ ಪಾತ್ರ ಬಹಳ ಕಡಿಮೆ. ಏಕೆಂದರೆ ಸಾಮಾನ್ಯವಾಗಿ ಇದಕ್ಕೆ ಕೊಡುವ ಮಾತ್ರೆಗಳೆಂದರೆ ಸ್ನಾಯುಗಳ ಬಿಗಿತವನ್ನು ಬಿಡಿಸುವ Muscles relaxants, NSAID ಮಾತ್ರೆಗಳು. ಇವುಗಳ ಸೇವನೆಯಿಂದ ತತ್ಕ್ಷಣದ ಪರಿಣಾಮ ತೋರಿದರೂ, ಆ ನೋವು ನಿವಾರಕ ಮತ್ತು ಊತನಿವಾರಕ ಮಾತ್ರೆಗಳ ಕಾರಣದಿಂದಲೇ ಕರುಳಿನಲ್ಲಿ ಹೆಚ್ಚು ಊತ ಬಂದು ಮತ್ತೆ ಗ್ಯಾಸ್ ಉತ್ಪತ್ತಿ ಹೆಚ್ಚುವುದರಿಂದ ಬೆನ್ನುನೋವು ಮೊದಲಿಗಿಂತ ಹೆಚ್ಚಾಗುತ್ತದೆ!! ವಿಟಮಿನ್ ಮಾತ್ರೆಗಳು ಸ್ವಲ್ಪ ಬಲ ಕೊಟ್ಟಂತೆ ಕಂಡರೂ, ಇರುವ ಮೂಲ ಕಾರಣವನ್ನು ನಿವೃತ್ತಿ ಮಾಡಲಾರವು! ಕೆಲವೇ ದಿನಗಳಲ್ಲಿ ಮತ್ತೆ ನೋವು ಬಂದೇ ಬರುತ್ತದೆ.


ವಾತ ಕಡಿಮೆಯಾಗಿ ನಮ್ಮ ಸ್ನಾಯುಗಳಲ್ಲಿ ಹಿಗ್ಗುವ ಶಕ್ತಿ ಮರಳಿದರೆ ಫಿಜಿಯೋಥೆರಪಿ ಬಹಳ ಉಪಕಾರ ಮಾಡುವುದಾದರೂ, ಒಣಗಿದ ಸ್ನಾಯುಗಳನ್ನಿಟ್ಟುಕೊಂಡು ಫಿಜಿಯೋಥೆರಪಿ ಮಾಡಿದರೆ ಅವು ಹರಿಯುವ(tear) ಸಾಧ್ಯತೆ ಹೆಚ್ಚು ಮತ್ತು ಸ್ನಾಯುಗಳನ್ನು ಒಣಗಿಸುವ ಮೂಲಕಾರಣ ನಿವಾರಣೆಯಾಗದೇ ಇರುವುದರಿಂದ ಸಮಸ್ಯೆ ಮತ್ತೆ ಮೊದಲಿಗಿಂತ ಜೋರಾಗಿ ಮರುಕಳಿಸುತ್ತದೆ!!

♨️ ದಾರುಣತೆಯ ಹಂತ:
ಮೂಳೆಗಳ ನಡುವೆ ಇರುವ ಮೆತ್ತನೆಯ ಸ್ಪಂಜಿನಾಕಾರದ inter vertebral discಗಳಿಗೆ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ. ಹಾಗಾಗಿ, ಬೆನ್ನಿನ ಸ್ನಾಯುಗಳ ಸಂಕೋಚ discಗಳನ್ನೂ ಮತ್ತು discಗಳು ನರಗಳನ್ನು ಒತ್ತುತ್ತವೆ, ದೀರ್ಘ ಕಾಲ ಉಪಶಮನಗೊಳಿಸದಿದ್ದರೆ discಗಳು ಒಡೆದು ಕಶೇರುಕಗಳ ಅಂತರವನ್ನು ಕಡಿಮೆ ಮಾಡುವುದರಿಂದ ಗೃಧ್ರಸಿ(sciatica)ಯಂತಹ ತೀವ್ರ ತೊಂದರೆಗಳು ಬರುತ್ತವೆ. ಈ ಹಂತದಲ್ಲಿ ಕುಳಿತರೂ ನಿಂತರೂ ಕೆಲವೊಮ್ಮೆ ಮಲಗಿದರೂ ತಡೆಯಲಾರದ ದಾರುಣ ಸ್ಥಿತಿ ತಲುಪುತ್ತೇವೆ.

🖌 ಶಸ್ತ್ರಚಿಕಿತ್ಸೆ ಅನಗತ್ಯ:
ಸ್ನಾಯುಗಳ ಹಂತದಲ್ಲೇ ಇರಲಿ, ದಾರುಣ ಸ್ಥಿತಿ ಇರಲಿ, ನೇರವಾಗಿ ಶಸ್ತ್ರಚಿಕಿತ್ಸೆಗೆ ಹೋಗದೇ ತಾಳ್ಮೆಯಿಂದ ಆಯುರ್ವೇದ ಚಿಕಿತ್ಸೆ ಮಾಡಿಸಿಕೊಂಡರೆ ಶಾಶ್ವತ ಪರಿಹಾರವನ್ನು ಕಾಣಬಹುದು. ಶಸ್ತ್ರಚಿಕಿತ್ಸೆಯಿಂದ ಕೇವಲ ತೊಂದರೆ ಎಂದು ಕಂಡುಬರುವ 1-2 ಸ್ಥಾನಗಳನ್ನು ಮಾತ್ರ ಸರಿಗೊಳಿಸಲು ಯತ್ನಿಸುತ್ತಾರೆ, ಆದರೆ ಅನ್ಯ ಕಶೇರುಕಗಳ ಸ್ಥಾನಗಳು ಮತ್ತು ಉತ್ಪತ್ತಿಯ ಮೂಲ ಹಾಗೇ ಉಳಿದುಕೊಳ್ಳುವುದರಿಂದಲೂ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ತನ್ನದೇ ಆದ ಅನೇಕ ದುಷ್ಪರಿಣಾಮಗಳು ಇರುವುದರಿಂದಲೂ ಯೋಚಿಸಿ ನಿರ್ಧರಿಸುವುದೊಳಿತು.

🚫 ಮಸಾಜ್ ಬೇಡ ಎಚ್ಚರಿಕೆ!:
ಕತ್ತು, ಬೆನ್ನು, ಸೊಂಟಕ್ಕೆ ಎಣ್ಣೆ ಮಸಾಜ್ ಮಾಡಿಸಿದರೆ ಸ್ನಾಯುಗಳು ಮತ್ತಷ್ಟೂ ಊದಿಕೊಂಡು ಸಮಸ್ಯೆ ಅತ್ಯಂತ ದಾರುಣಸ್ಥಿತಿಗೆ ತಲುಪುತ್ತದೆ!!

ಇಷ್ಟೊಂದು ಕಷ್ಟ ಕೊಡುವ ಈ ನೋವುಗಳನ್ನು ಆರಂಭಿಕ ಹಂತದಲ್ಲಿ ಅತ್ಯಂತ ಸರಳವಾಗಿ ಮನೆಯಲ್ಲಿಯೇ ವಾಸಿಮಾಡಿಕೊಳ್ಳಬಹುದು.

🔜 ನಾಳಿನ ಸಂಚಿಕೆಯಲ್ಲಿ ನೋಡೋಣ……

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!