ಶಿವಮೊಗ್ಗ ಜಿಲ್ಲೆಯ ಸ್ಪರ್ದಾತ್ಮಕ ಕವಿಗೊಷ್ಠಿಗೆ ಆಹ್ವಾನ ಭಾನುವಾರ ಕವಿಗೊಷ್ಠಿ…!

ಶಿವಮೊಗ್ಗ ಜಿಲ್ಲೆಯ ಸ್ಪರ್ದಾತ್ಮಕ ಕವಿಗೊಷ್ಠಿಗೆ ಆಹ್ವಾನ ಭಾನುವಾರ ಕವಿಗೊಷ್ಠಿ…!

ಶಿವಮೊಗ್ಗ : ಸರಿಸುಮಾರು ಐದು ಶತಮಾನಗಳ ದೀರ್ಘ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ ಪುಣ್ಯಗಳಿಗೆಗೆ ಸಾಕ್ಷಿಯಾಗುವ ಸುಯೋಗ ನಮ್ಮದಾಗಿದ್ದು, ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿಯೂ ಶಿವಮೋಗ್ಗ ಜಿಲ್ಲೆಯವರಿಗಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಲಿದೆ.

ಕವಿಗೋಷ್ಠಿಯ ವಿಷಯ ಅಯೋಧ್ಯೆಯಲ್ಲಿ ರಾಮಮಂದಿರ, ಹೃದಯದಲ್ಲಿ ರಾಮಚಂದಿರ ಆಗಿದೆ. ಸ್ಪರ್ಧಾತ್ಮಕವಾದ ಈ ಕವಿಗೋಷ್ಠಿಯು ರಾಜ್ಯದಲ್ಲಿ ಮೂರು ಸುತ್ತುಗಳಲ್ಲಿ ನಡೆಯಲಿದೆ.

ಆಯ್ಕೆಯಾದ ಕವನಗಳಿಗೆ ಬಹುಮಾನಗಳನ್ನು ನೀಡಲಾಗುವುದು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನಲ್ಲದೆ ಏಳು ಸಮಾಧಾನಕರ ಬಹುಮಾನಗಳನ್ನೂ ರಾಜ್ಯ ಮಟ್ಟದಲ್ಲಿ ನೀಡಲಾಗುವುದು.

ಮೊದಲ ಸುತ್ತಿನಲ್ಲಿ ಜಿಲ್ಲೆಯೊಂದರ ಎಲ್ಲಾ ಘಟಕಗಳು ಒಟ್ಟುಗೂಡಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿದೆ.

ಕವಿಗೋಷ್ಠಿ ಕರ್ನಾಟಕ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿದ್ದು, ಎಲ್ಲ ಕನ್ನಡಿಗರಿಗೂ ಮುಕ್ತವಾಗಿರುತ್ತದೆ.

ಶಿವಮೋಗ್ಗ ಜಿಲ್ಲೆಯ ಕವಿಗೋಷ್ಟಿಯಲ್ಲಿ ಭಾಗವಹಿಸುವವರು ಶ್ರೀರಂಜನಿ ದತ್ತಾತ್ರಿ ವಾಟ್ಸ್‌ಪ್ ನಂ 9449998531 ಡಾ. ನೇತ್ರಾವತಿ ವಾಟ್ಸಪ್ ನಂ 9844569694 ಮತ್ತು ಮಹೇಶ ಗೋಖಲೆ ಸೊರಬ 9986409875 maheshgokhale85@gmail.com ಅಥವಾ ranjdat@gmail.com ಗೆ ಕಳುಹಿಸ ಬಹುದು.

ಕವನಗಳಿಗೆ ವಾಚನ ಮತ್ತು ಗಾಯನಕ್ಕೆ ಸಾಗರದಲ್ಲಿ ಫೆಬ್ರವರಿ 7 ರ ಭಾನುವಾರ ನಡೆಯಲಿರುವ ಜಿಲ್ಲಾ ಕವಿಗೋಷ್ಟಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

ಅಲ್ಲಿ ಆಯ್ಕೆಯಾದ 10 ಕವನಗಳನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುವುದು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಂಯೋಜಕ ಮಹೇಶ ಗೋಖಲೆ ಸೊರಬ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!