ಶಿವಮೊಗ್ಗ: ಗಾಂಧಿ ಬಜಾರ್’ನಲ್ಲಿ ಭಾರೀ ಅಗ್ನಿ ಅನಾಹುತ, ಕಟ್ಟಡ ಬೆಂಕಿಗೆ ಆಹುತಿ..!

ಶಿವಮೊಗ್ಗ: ಗಾಂಧಿ ಬಜಾರ್’ನಲ್ಲಿ ಭಾರೀ ಅಗ್ನಿ ಅನಾಹುತ, ಕಟ್ಟಡ ಬೆಂಕಿಗೆ ಆಹುತಿ..!

ಶಿವಮೊಗ್ಗ: ಭಾರೀ ಸ್ಪೋಟದ ಗಾಬರಿಯಿಂದ ನಗರ ಹೊರಬರುವ ಮುನ್ನವೇ ನಗರದ ಹೃದಯ ಭಾಗ ಗಾಂಧಿ ಬಜಾರ್’ನಲ್ಲಿ ಇಂದು ತಡರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.

ಗಾಂಧಿ ಬಜಾರ್ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದ ಸನಿಹದಲ್ಲಿರುವ ಮಾತೃಶ್ರೀ ನಾವೆಲ್ಟೀಸ್ ಕಟ್ಟಡದಲ್ಲಿ ಇಂದು ತಡರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಇಡಿಯ ಕಟ್ಟಡ ಹೊತ್ತಿ ಉರಿದಿದೆ.

ಕಟ್ಟಡದಲ್ಲಿ ಸಂಭವಿಸಿದ ಶಾರ್ಟ್ ಸಕ್ಯೂರ್ಟ್’ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಅಗ್ನಿಯ ಜ್ವಾಲೆ ಇಡಿಯ ಕಟ್ಟಡವನ್ನು ವ್ಯಾಪಿಸಿದೆ.

ಕಟ್ಟಡದ ತುಂಬಾ ಪಿಒಪಿ ವಕ್ ಮಾಡಿದ್ದರಿಂದ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದೆ ಎಂದು ಹೇಳಲಾಗಿದೆ. ಕಟ್ಟಡದಲ್ಲಿ ಯಾರೂ ವಾಸವಿಲ್ಲದ್ದರಿಂದಾಗಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.

ಲಕ್ಷಾಂತರ ರೂ. ಮೌಲ್ಯದ ಸೌಂದರ್ಯಯುಕ್ತ ವಸ್ತುಗಳು ನಾಶವಾಗಿದೆ ಎಂದು ಹೇಳಲಾಗಿದೆ. ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ ಯಶಸ್ವಿಯಾಗಿದ್ದಾರೆ‌ ಯಾವುದೇ ರೀತಿಯ ಜೀವಹಾನಿ ಆಗಿಲ್ಲ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!