ಕಿಡ್ನಿ ಕಲ್ಲುಗಳಿಗೆ ಅತಿಯಾದ ನೀರು ಸೇವನೆಯೇ ಕಾರಣ‼️

ಕಿಡ್ನಿ ಕಲ್ಲುಗಳಿಗೆ ಅತಿಯಾದ ನೀರು ಸೇವನೆಯೇ ಕಾರಣ‼️

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:ಕಿಡ್ನಿ ಕಲ್ಲುಗಳಿಗೆ ಅತಿಯಾದ ನೀರು ಸೇವನೆಯೇ ಕಾರಣ‼️

✨ ವರ್ಷದ ಎಲ್ಲಾ ಕಾಲದಲ್ಲೂ ಅತ್ಯಲ್ಪ ನೀರನ್ನು ಕುಡಿಯಬೇಕು.

👁 ವಿಚಿತ್ರವಾದರೂ ಸತ್ಯ:
ಅತಿಯಾಗಿ ನೀರು ಕುಡಿಯುವುದರಿಂದಲೇ ಕಿಡ್ನಿಯಲ್ಲಿ ಕಲ್ಲುಗಳುಂಟಾಗುತ್ತವೆ.!!

👇 ಈ ಶ್ಲೋಕವನ್ನು ಗಮನಿಸಿ:
📜 ನ ಅಂಬು ಪೇಯಂ ಅಶಕ್ತ್ಯಾ ವಾ ಸ್ವಲ್ಪಂ ಅಲ್ಪಾಗ್ನಿ ಗುಲ್ಮಿಭಿಃ ||13||
ಪಾಂಡು, ಉದರ, ಅತಿಸಾರ, ಅರ್ಶ, ಗ್ರಹಣಿದೋಷ, ಶೋಥಿಭಿಃ |
ಋತೇ ಶರನ್ನಿದಾಘಾಭ್ಯಾಂ ಪಿಬೇತ್ ಸ್ವಸ್ಥೋ ಅಪಿ ಚ ಅಲ್ಪಶಃ ||14||
-ವಾಗ್ಭಟ ಸೂತ್ರಸ್ಥಾನ

◆ ಉಷ್ಣ ಕಾಲದಲ್ಲೂ ಅಂದರೆ,
ಗ್ರೀಷ್ಮ ಋತು (ಮೇ-ಜೂನ್) ಮತ್ತು
ಶರದೃತು(ಅಕ್ಟೋಬರ್-ನವೆಂಬರ್) ಗಳಲ್ಲಿ ಅಗತ್ಯಕ್ಕನುಸಾರ ನೀರನ್ನು ಕುಡಿಯಬಹುದು, ಉಳಿದ ತಿಂಗಳುಗಳಲ್ಲಿ ಅಲ್ಪ ನೀರು ಸಾಕು, ಹೆಚ್ಚು ಕುಡಿದರೆ ಅನೇಕ ರೋಗಗಳು ಬರುತ್ತವೆ!!!

👉 ಹೆಚ್ಚು ನೀರನ್ನು ಸೇವಿಸಿದರೆ-
ನಿಶ್ಯಕ್ತಿ
• ಅಗ್ನಿಮಾಂದ್ಯ
• ಗುಲ್ಮ
• ರಕ್ತಹೀನತೆ
• ಮೂಲವ್ಯಾಧಿ
• ಗ್ಯಾಸ್ಟ್ರೈಟೀಸ್
• ಕೊಲೈಟೀಸ್

ಮುಂತಾದ ಅನೇಕ ರೋಗಗಳು ಬರುತ್ತವೆ!!!

ನಮ್ಮ ಈ ಮಾತು ಸತ್ಯ, ಏಕೆಂದರೆ ಆಚಾರ್ಯರು ನಿಃಸ್ವಾರ್ಥರು, ಅಹಂಕಾರ ರಹಿತರು, ಕೇವಲ ಮನುಜಕುಲದ ಆರೋಗ್ಯ ಅವರ ಆಶಯವಾಗಿತ್ತು ಎನುವುದು ಸ್ಪಷ್ಟ, ಹಾಗಾಗಿ ಅಸತ್ಯವಲ್ಲ ಮತ್ತು
ಪ್ರತ್ಯಕ್ಷವಾಗಿ ಅನುಭವ ಪೂರ್ವಕ ನೋಡಿದರೆ, “ಕಡಿಮೆ ನೀರು ಕುಡಿಯುವವ ಯೋಗಿ, ಹೆಚ್ಚು ಕುಡಿಯುವವ ರೋಗಿ” ಆಗಿದ್ದಾರೋ ಇಲ್ಲವೋ?

ಪ್ರಾಣಿಗಳನ್ನು ಗಮನಿಸಿ ದಿನಕ್ಕೆ ಒಂದುಬಾರಿ ನೀರು ಸೇವಿಸುತ್ತವೆ, ಅದುವೇ ನೈಸರ್ಗಿಕ ಜೀವನ.

📩 ಆಯುರ್ ವಿಜ್ಞಾನ ಏಕೆ ಹೀಗೆ ಹೇಳಿದೆ? ನೋಡೋಣ:
◆ ಆಹಾರ ಸ್ನಿಗ್ಧವೂ, ಮೃದುವೂ ಮತ್ತು ಸುಖೊಷ್ಣವಾಗಿಯೂ ಇರಬೇಕು. ಚನ್ನಾಗಿ ಬೇಯಿಸಿರಬೇಕು. ಇದರಿಂದಲೇ ಶರೀರಕ್ಕೆ ಬೇಕಾದಷ್ಟು ನೀರು ಸೇರುತ್ತದೆ.

ಶೀತಲ ಭೂಮಿಯ ಆಹಾರಗಳು ಪಚನಕ್ಕೆ ಕಷ್ಟವಾಗಿ ರೋಗ ತರುತ್ತವೆ, ಕಾರಣ ಅದರಲ್ಲಿರುವ ಹೆಚ್ಚಿನ ನೀರು. ಹಾಗೇ ಉಷ್ಣವಲಯದ ಆಹಾರಗಳು ಪಚನಕ್ಕೆ ಹಗುರ ಹಾಗಾಗಿ ಆರೋಗ್ಯ ತರುತ್ತವೆ, ಕಾರಣ ಅದರಲ್ಲಿರುವ ಅಲ್ಪ ನೀರಿನ ಪ್ರಮಾಣ.

🔥 ನಮ್ಮ ಶರೀರದ ಒಳಗೆ ಅಗ್ನಿ ಇದ್ದು, ಇದು ಅನೇಕ ಸ್ಥೂಲ-ಸೂಕ್ಷ್ಮ ಎಂಜೈಮ್ ರೂಪದಲ್ಲಿದೆ. ಇದಕ್ಕೆ ಹೆಚ್ಚು ನೀರು ಬೆರೆತರೆ ಏನಾಗುತ್ತದೆ? ಅದರ ಪಾಚನ ಶಕ್ತಿ ಕುಂದುತ್ತದೆ. ಈ ಹಂತದಲ್ಲಿ ಸೇವಿಸುವ ಆಹಾರ ಯಾವುದೇ ಇದ್ದರೂ ಸರಿಯಾಗಿ ಪಚನವಾಗದು ಅದರ ಪರಿಣಾಮ, ಉದರದ ಊತ(ಗ್ಯಾಸ್ಟ್ರೈಟೀಸ್…) ಮಲಬದ್ಧತೆ, ಮೂಲವ್ಯಾಧಿ, ಗುಲ್ಮ ಇವುಗಳಿಂದ ರಕ್ತದ ಕೊರತೆ ಉಂಟಾಗಿ ಪಾಂಡು ಅಥವಾ ಅನಿಮಿಯಾ ಉಂಟಾಗುತ್ತದೆ. ಶರೀರದಲ್ಲಿ “ಆಮವಿಷ”(unseparated molecules of food) ಸಂಚಯವಾದ ಕಾರಣ ಸದಾ ನಿಶ್ಯಕ್ತಿ ಮೈಭಾರ ಇರುತ್ತದೆ. ಕೆಲ ಕಾಲ ಕಳೆದರೆ ಹೈಪೋಥೈರಾಯ್ಡಿಸಮ್ ಆಗಿ ಶರೀರ ಮತ್ತಷ್ಟು ದುರ್ಬಲಗೊಳ್ಳುತ್ತದೆ.

👉 ಇನ್ನು ಕಿಡ್ನಿ ಕಲ್ಲುಗಳ ಬಗ್ಗೆ ನೋಡೋಣ:
ಮೂತ್ರಮಾರ್ಗದಲ್ಲಿ ಈಗಾಗಲೇ ಸಿಕ್ಕಿಹಾಕಿಕೊಂಡ ಕಲ್ಲುಗಳನ್ನು ಕ್ಷಾಲನ(washout) ಮಾಡಲು ಚಿಕಿತ್ಸೆಯಾಗಿ ಜಲಸೇವನೆ ಸರಿ. ಆದರೆ ಕಿಡ್ನಿ ಕಲ್ಲುಗಳನ್ನು ತಡೆಯುವ ಸಲುವಾಗಿ ನೀರನ್ನು ಕುಡಿದರೆ ಅದು ನಮ್ಮನ್ನು ಮೂರ್ಖರನ್ನಾಗಿಸುತ್ತದೆ. ಅತಿ ಜಲಪಾನದಿಂದ ಅಗ್ನಿಮಾಂದ್ಯವಾಗುವ ಕಾರಣ ಅವಿಭಜಿತ(ಜೀರ್ಣವಾಗದ) ಲವಣಗಳು ನೆಫ್ರಾನ್ಗಳಲ್ಲಿ ಸಂಚಯವಾಗಿ ಮಾರ್ಗದಲ್ಲಿ ಕಟ್ಟಿಕೊಂಡ ಪರಿಣಾಮ ಕಿಡ್ನಿ ಕಲ್ಲುಗಳು ಪದೆ ಪದೆ ಮರುಕಳಿಸುತ್ತವೆ.

ಬಹಳ ವಿವರ ಕೊಡಬಹುದು, ಆದರೆ ಇಷ್ಟು ಸಾಕು. ಗಮನಿಸಿ ನಿಮ್ಮ ಸುತ್ತ ಇರುವ ತೊಂಭತ್ತು- ನೂರು ವರ್ಷದ ವೃದ್ಧರ ನೀರಿನ ಪ್ರಮಾಣ ಗಮನಿಸಿ ಮತ್ತು ಹಿಂದಿನಿಂದ ಅವರು ಪಾಲಿಸಿದ ಪ್ರಮಾಣ ಗಮನಿಸಿ ಅವರ ಆರೋಗ್ಯದ ಗುಟ್ಟು ಅಲ್ಪ ಜಲಪಾನ ಎಂದು ಗೊತ್ತಾಗುತ್ತದೆ.

ಹಾಗಾಗಿ,
ವರ್ಷದ ಎಲ್ಲಾ ಕಾಲದಲ್ಲೂ ಅತ್ಯಲ್ಪ ನೀರನ್ನು ಕುಡಿಯಬೇಕು.

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
ಸ್ವಾಸ್ಥ್ಯ ಸರ್ವರದ್ದೂ ಆಗಲಿ

ನಿಮ್ಮ ಸಂಪರ್ಕಕ್ಕೆ:
📞 8792290274
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!