ಸಮರ್ಪಕವಾಗಿ ಜಲ ಸೇವಿಸುವ ವಿಧಾನ ಯಾವುದು?

ಸಮರ್ಪಕವಾಗಿ ಜಲ ಸೇವಿಸುವ ವಿಧಾನ ಯಾವುದು?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
💦ಜಲವೇ ಜೀವ💦

🖋 ಸಮರ್ಪಕವಾಗಿ ಜಲ ಸೇವಿಸುವ ವಿಧಾನ ಯಾವುದು?
★ ನಮ್ಮ ಜೀವಕೋಶಗಳು ಬದುಕಿರುವುದೇ, ಜಲದ ಆಧಾರದಲ್ಲಿ. ಎಲ್ಲಾ ಧಾತುಗಳಲ್ಲಿರುವ ದ್ರವಾಂಶವನ್ನೇ ಆಪ್ ಧಾತು ಎಂದು ಕರೆದಿದ್ದಾರೆ ಆಯುರ್ವೇದ ಆಚಾರ್ಯರು.

ನಾವು ಪ್ರತಿ ದಿನ ಅಳತೆಮಾಡಿ ಅಧಿಕ ಪ್ರಮಾಣದಲ್ಲಿ ಜಲ ಸೇವನೆ ಮಾಡುತ್ತಿದ್ದೇವೆ, ಆದರೂ ನಿರ್ಜಲೀಕೃತ ಕಾಯಿಲೆಗಳಾದ ಮೈಗ್ರೇನ್, ಬಿ.ಪಿ, ಆಯಾಸ, ಮೂಳೆ ಸವೆತ, ಕಿಡ್ನಿ ಕಲ್ಲುಗಳು… ಹೀಗೆ ಅನೇಕ ರೋಗಗಳಿಂದ ಕೊರಗುತ್ತಿದ್ದೇವೆ!!

💢 ಸಮರ್ಪಕವಾಗಿ ಜಲ ಸೇವನೆ ಮಾಡದಿರುವುದೇ ಈ ರೋಗಗಳಿಗೆ ಕಾರಣ.

🖋 ಜಲ ಸೇವನೆಯ ವಿಧಾನಗಳಾವುವು?
★ ಆಹಾರದಲ್ಲಿರುವ ಜಲ ಮತ್ತು ಕುಡಿಯುವ ನೀರು ಈ ಎರೆಡು ವಿಧಾನದಿಂದ ಜಲವು ನಮ್ಮ ಶರೀರವನ್ನು ಸೇರುತ್ತದೆ. ಇವುಗಳ ಅಸಮರ್ಪಕ ನಿರ್ವಹಣೆಯೇ ರೋಗೋದ್ದೀಪನಗೊಳಿಸುತ್ತಿವೆ.

1⃣ ಆಹಾರದಲ್ಲಿರುವ ಜಲ:
ಶರೀರದ ಸದೃಢ ಬೆಳವಣಿಗೆಗೆ ಆಹಾರದಲ್ಲಿರುವ ಜಲವೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ಗಮನಿಸಿ-
ಅಕ್ಕಿಯನ್ನು ತಿಂದು ಎಷ್ಟು ನೀರು ಕುಡಿದರೂ ಉದರದಲ್ಲಿ ಅದು ಆಹಾರ(ಅನ್ನ)ವಾಗದು.

ಆದರೆ ಇಂದು ನಾವು, ಬಾಯಿರುಚಿಗೆಂದು ಕಡಿಮೆ ನೀರಿರುವ, ತರಿತರಿಯಾದ ಆಹಾರವನ್ನೂ ಮತ್ತು ಕರಿದ ಅಥವಾ ವಗ್ಗರಣೆ ಕಲಸಿದ ಅಥವಾ ಚಪಾತಿಯಂತಹ ಕಡಿಮೆ ನೀರಿರುವ ಪದಾರ್ಥ ಸೇವಿಸುತ್ತೇವೆ! ಮತ್ತೆ ನೀರು ಒಳ್ಳೆಯದೆಂದು ಮೇಲಿನಿಂದ ಹೆಚ್ಚು ಹೆಚ್ಚು ನೀರನ್ನು ಕುಡಿಯುತ್ತೇವೆ!! ಇದು ಸರ್ವಥಾ ರೋಗಕಾರಕ.

💥 ಇದರ ಪರಿಣಾಮ:
ಯಾವುದೇ ಜೈವಿಕ ಪರಿವರ್ತನೆಯು ಆಹಾರದಲ್ಲಿನ ದ್ರವದ ಅವಸ್ಥೆಯಲ್ಲಿ ಮತ್ತು ಮೆದುವಾದ ಅವಸ್ಥೆಯಲ್ಲಿ ಆಗುತ್ತದೆ.
ಹಾಗೆಯೇ, ನಮ್ಮ ಆಹಾರವು ದೃಢ ಶರೀರವಾಗಿ ಪರಿವರ್ತನೆಯಾಗಲು ಆಹಾರದೊಳಗಿನ ನೀರು ಬಹುಮುಖ್ಯ, ಇಲ್ಲದೇ ಹೋದರೆ ಆರಂಭದಲ್ಲಿ ಆಮ್ಲಪಿತ್ತ, ರಕ್ತಪಿತ್ತ, ಲಿವರ್ ನಲ್ಲಿ ಕೊಬ್ಬು ಶೇಖರಣೆ, ಪಿತ್ತಕೋಶದ ಮತ್ತು ಕಿಡ್ನಿಕಲ್ಲುಗಳು… ಮುಂತಾದವು ಉಂಟಾಗುತ್ತವೆ. ಕ್ರಮೇಣ ಗಂಭೀರ ಸ್ವರೂಪದ ಕಾಯಿಲೆಗಳು ಉಂಟಾಗುತ್ತವೆ.

💥 ಆರಂಭದಲ್ಲೇ ಇದನ್ನು ಗುರುತಿಸಿ:
ೱ ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ
ೱ ಮೂತ್ರ, ಬೆವರು ದುರ್ಗಂಧದಿಂದ ಕೂಡಿದ್ದರೆ
ೱ ತಲೆಯಲ್ಲಿ ಮೊಡವೆಗಳು ಎದ್ದರೆ
ೱ ಹೊಟ್ಟು ಇದ್ದರೆ
ತಿಳಿಯಿರಿ ನಿಮ್ಮ ಶರೀರ ನಿರ್ಜಲೀಕರಣಗೊಳ್ಳುತ್ತಿದೆ.

💥 ಪರಿಹಾರ:
ಎರೆಡು ದಿನ ಕೇವಲ ಅನ್ನದ ಗಂಜಿ ಸೇವಿಸಿ ನಂತರ ಒಂದು ವಾರ ನೀರಾಗಿರುವ ಆಹಾರ ಬಳಸಿ. ಶೇ 80-90 ರಷ್ಟು ಬದಲಾವಣೆಗಳನ್ನು ಕಾಣುತ್ತೀರಿ.

2⃣ ಕುಡಿಯುವ ನೀರು:
ನೀರನ್ನು
• ಹೇಗೆ ಕುಡಿಯಬೇಕು?
• ಯಾವಾಗ ಕುಡಿಯಬೇಕು?
• ಎಷ್ಟು ಕುಡಿಯಬೇಕು?
• ಯಾವ ನೀರನ್ನು ಕುಡಿಯಬೇಕು?
ಈ ಪ್ರಶ್ನೆಗಳು ಬಹಳ ಜನರನ್ನು ಕಾಡುತ್ತಿವೆ, ಕೊನೆಗೆ ತಮಗೆ ತಿಳಿದ ಯಾವುದೋ ಒಂದು ರೂಢಿ ಅಥವಾ ಟಿ.ವಿ ನೋಡಿ ಪದೇ ಪದೇ ಬದಲಾಯಿಸುತ್ತಲೂ ಇರುತ್ತಾರೆ.

▶️ ಇದಕ್ಕೆ ಸರಳ ಉತ್ತರಗಳು:

💥 ಹೇಗೆ ಮತ್ತು ಯಾವಾಗ ನೀರು ಕುಡಿಯಬೇಕು?:
📜 ಸಮ ಸ್ಥೂಲ ಕೃಶಾ ಭುಕ್ತ ಮಧ್ಯ ಅಂತ ಪ್ರಥಮ ಅಂಬು ಪಾನಃ ||15||

  • ಅಷ್ಟಾಂಗ ಹೃದಯ ಸೂತ್ರಸ್ಥಾನ ಅಧ್ಯಾಯ-5
    ★ ಆಹಾರದ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ಜಲಪಾನ ಮಾಡುವುದರಿಂದ “ಸಮ ಶರೀರವೂ”,
    ★ ಆಹಾರದ ನಂತರ ನೀರು ಸೇವನೆಯಿಂದ “ಸ್ಥೂಲ ಶರೀರವೂ”,
    ★ ಆಹಾರಕ್ಕಿಂತ ಮೊದಲೇ ಸೇವಿಸುವ ಜಲವು “ಕೃಶ ದುರ್ಬಲ ಶರೀರ”ವನ್ನು ಉಂಟುಮಾಡುತ್ತದೆ.

✍ ಸಮ/ಆರೋಗ್ಯಯುತ ಶರೀರಕ್ಕಾಗಿ ಆಹಾರದ ಮಧ್ಯದಲ್ಲಿ ಸ್ವಲ್ಪ-ಸ್ವಲ್ಪ ಜಲಪಾನ ಶ್ರೇಷ್ಠ.

💥 ಎಷ್ಟು ನೀರನ್ನು ಕುಡಿಯಬೇಕು?
ಒಳಗಿನ ದ್ರವಾಂಶದ ಅಗತ್ಯವನ್ನು ನಮ್ಮ ಶರೀರ ಬಾಯಾರಿಕೆಯ ರೂಪದಲ್ಲಿ ಕೇಳುತ್ತದೆ. ಆಗ ಅದು ಕೇಳಿದಷ್ಟು ನೀರನ್ನು, ಕೇಳಿದಾಗ ಕೊಡಬೇಕು. ಸುಮ್ಮನೇ ಲೆಕ್ಕಮಾಡಿ, ಯಾರೋ ಹೇಳಿದರೆಂದು ಲೀಟರ್ ಲೆಕ್ಕದಲ್ಲಿ ಎಣಿಸಿ ಕುಡಿಯಬಾರದು.

💥 ಯಾವ ನೀರನ್ನು ಕುಡಿಯಬೇಕು?
ಆಳದ ಬೋರ್ ವೆಲ್ ನೀರು ನೇರ ಕುಡಿಯಲು ಯೋಗ್ಯವಲ್ಲ. ಅತ್ಯಂತ ಹೆಚ್ಚು ಖನಿಜಗಳಿಂದ ಕೂಡಿದ ಈ ಜಲ ಯೋಗ್ಯವಲ್ಲ, ಹಾಗೆಯೇ ಅತಿಯಾದ ಸಿಹಿ ಇರುವ ನೀರೂ ರೋಗಕಾರಕ(ಉದಾ: ತುಂಗಾ ಪಾನ)❗️

▪️ಶೈಲ ಜಲ(hilly region water) ರೋಗ ನಿವಾರಕ.
▪️ಜಾಂಗಲ ಜಲ(dry land water)ಆರೋಗ್ಯ ಕಾರಕ.
▪️ ಅನೂಪ ಜಲ(water from ever wet area) ಜೀರ್ಣಕ್ಕೆ ಕಷ್ಟ ಮತ್ತು ಆಹಾರವನ್ನೂ ಜೀರ್ಣಿಸುವುದಿಲ್ಲವಾಗಿ ರೋಗಕಾರಕ.
▪️ದಿನಾಂಕ 18.01.2021 ರ ಸಂಚಿಕೆಯಲ್ಲಿ ತಿಳಿಸಿದ ಮಲಯ ಪರ್ವತ, ಹಿಮಾಲಯ ಪರ್ವತದ ಜಲವು ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.

ಆಳದ ಕೊಳವೆಬಾವಿಯ ನೀರನ್ನು ಕುಡಿಯಲು, ಬಳಸಲು ಆಯುರ್ವೇದದಲ್ಲಿ ಎಲ್ಲಿಯೂ ಹೇಳಿರುವುದಿಲ್ಲ. ಅದರ ಖನಿಜಾಂಶಗಳು ಹಾನಿ ಉಂಟು ಮಾಡುತ್ತವೆ, ಅದನ್ನು ಪರಿಹರಿಸಲು ಹುಟ್ಟಿಕೊಂಡದ್ದೇ ಆರ್. ಒ ಜಲ!! ಆದರೆ ಅದನ್ನು ಖನಿಜರಹಿತವಾಗಿಸಿ ಆಹಾರ ಪಚನಕ್ಕೆ ಮತ್ತು ಸ್ವತಃ ನೀರಿನ ಪಚನಕ್ಕೆ ಕಷ್ಟಮಾಡಿಕೊಂಡು ಇಂದು ನೂರಾರು ಕಾಯಿಲೆಗಳಿಗೆ ತುತ್ತಾಗಿದ್ದೇವೆ.

ಹಾಗಾಗಿ
ಅಗತ್ಯ ಪ್ರಮಾಣದ ಖನಿಜಗಳುಳ್ಳ ಅತಿಯಾಗಿ ಸಿಹಿಯಾಗಿರದ ಜಲ ಶ್ರೇಷ್ಠ

ನಿಮ್ಮ ಸಂಪರ್ಕಕ್ಕೆ:
📞 8792290274
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ;
ಸ್ವಾಸ್ಥ್ಯ ಸರ್ವರದ್ದೂ ಆಗಲಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!