ಶಿವಮೊಗ್ಗ:ರೈತನ ಸಂಕಷ್ಟಕ್ಕೆ ಸಾವು ಪರಿಹಾರನಾ..? ಬೆಳೆಗೆ ಬೆಲೆ ಇಲ್ಲ ಸಾಲಬಾಧೆ ಇಬ್ಬರು ರೈತರ ಆತ್ಮಹತ್ಯೆ…!

Story By: Raghu Shikari
ಶಿವಮೊಗ್ಗ: ರೈತರ ಆತ್ಮಹತ್ಯೆಯ ಪ್ರಕರಣ ದಿನೇ ದಿನೇ ಹೆಚ್ವಾಗುತ್ತಿದ್ದು ಮುಖ್ಯಮಂತ್ರಿಗಳ ಸ್ವಕ್ಷೇತ್ರ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ.
ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯ ನಾಗೇಶದ ನಾಯ್ಕ್ (32) ಬಿನ್ ಮಂಜಾನಾಯ್ಕ್ ಅವರು ಬಗರ್ ಹುಕಂ 2 ಎಕ್ಕರೆ ಮತ್ತು ಗುತ್ತಿಗೆ 5 ಎಕ್ಕೆರೆ ಸೇರಿ ಜಮೀನು ಮೆಕ್ಕೆಜೊಳ್ಳ 2 ಎಕ್ಕರೆ ಶೋಂಠಿ 5 ಎಕ್ಕರೆ ಭತ್ತ ಕೃಷಿ ಮಾಡಿದ್ದು ಈ ಎಲ್ಲಾ ಜಮೀನುಗಳು ಗುತ್ತಿಗೆ ಪಡೆದು ಸುಮಾರು 10-15 ಲಕ್ಷ ಸಾಲ ಮಾಡಿಕೊಂಡಿದ್ದು.

ಬೆಳೆ ಬೆಳೆದಿದ್ದು ಬೆಳೆಗೆ ಬೆಲೆ ಸಿಗದೆ ಮಾಡಿಕೊಂಡ ಸಾಲವನ್ನು ತಿರಿಸಲಾಗದೆ 11/01/2021 ಸೊಮವಾರ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮೃತನಿಗೆ ಪತ್ನಿ ಇಬ್ಬರು ಮಕ್ಕಳು ಇದ್ದರು.
ತಾಲೂಕಿನ ಇನೋರ್ವ ರೈತ ತಾಲ್ಲೂಕಿನ ಮಟ್ಟಿಕೋಟೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಅಶೋಕಪ್ಪ (41) ಎಂಬ ರೈತನೋರ್ವ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶುಂಠಿ ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಆತ ಬೆಳೆದಿದ್ದ ಬಾಳೆ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ 4 ಎಕರೆ ಜಮೀನನ್ನು ಮಾರಟ ಮಾಡಿದರು ಅರ್ಧ ಎಕರೆಯಲ್ಲಿ ಸಾಗುವಳಿ ಮಾಡುತ್ತಿದ್ದನು.
ಶಿಕಾರಿಪುರದ ಅರ್ಬನ್ ಬ್ಯಾಂಕಿನಲ್ಲಿ 8 ಲಕ್ಷ ಹಾಗೂ ಸ್ಥಳೀಯ ಶಿವ ಸಹಕಾರಿ ಬ್ಯಾಂಕಿನಿಂದ 2ಲಕ್ಷ ಹಾಗೂ ಕೈ ಸಾಲ ಸೇರಿದಂತೆ ಬಡ್ಡಿ ಕಟ್ಟಲಾಗದ ದುಃಸ್ಥಿತಿಯಲ್ಲಿದ್ದ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈತ ಪತ್ನಿ ಹಾಗೂ 2 ಮಕ್ಕಳನ್ನು ಬಿಟ್ಟು ಆಗಲಿದ್ದು ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಅತೀ ಹೆಚ್ಚು ರೈತರು ಸಾಲವನ್ನು ಮಾಡಿಕೊಂಡು ಲಾಭದಯಾಕ ಶೋಂಠಿ ಬೆಳೆಯನ್ನು ಬೆಳೆದು ಮಾಡಿದ ಖರ್ಚಿಗೂ ಬೆಳೆ ಸಿಗದೇ ಸಾಲವನ್ನು ತಿರಿಸಲಾಗದೆ ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಲಗಾರ ಕಾಟ:
ಇತ್ತ ಬೆಳೆ ಬೆಳೆಯಲು ರೈತರು ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದಾರೆ ಅನೇಕರು ಬಡ್ಡಿ ಸಾಲವ ಕೆಲವರು ಬ್ಯಾಂಕ್ ಸಾಲ ಇದನ್ನು ಬೆಳೆಯನ್ನು ಮಾರಟಮಾಡಿ ಸಾಲ ತಿರಿಸೊಣ ಎಂದರೆ ಬೆಳೆಗೆ ಸರಿಯಾದ ಬೆಲೆ ಇಲ್ಲ.
ಅಕಾಲಿಕ ಮಳೆ ಕಾಯಿಲೆಗಳ ಕಾಟ:
ಅಕಾಲಿಕ ಮಳೆ ಕೊರೋನದಂತ ಮಹಾಮಾರಿ ಕಾಯಿಲೆಯಿಂದ ರೈತರ ಬೆಳೆಗೆ ಬೆಲೆ ಸಿಗದಂತಾಗಿದೆ ಮಾಳೆಯಿಂದ ಬೆಳೆ ಕೊಳೆತು ಕೈಸಿಗಂದಂತಾಗಿದೆ ಕೊರೋನ ಸಂದರ್ಭ ಲಾಕ್ ಡೌನ್ ಯಾವುದೇ ಮಾರುಕಟ್ಟೆ ಇರಲಿಲ್ಲ .

ಕೈ ಕೊಟ್ಟ ಶೋಂಠಿ ಬೆಳೆ:
ಪ್ರವೃತಿಯೊಂದಿಗೆ ಸೆಣಸಾಡಿ ಶೋಂಠಿಯನ್ನು ಎಕ್ಕರೆಗೆ 3-4 ಲಕ್ಷ ಖರ್ಚು ಮಾಡಿ ಬೆಳೆದರೆ ಏಕ ಏಕಿ ಬೆಳೆ ಕುಸಿತ ಕಂಡು ರೈತರು ದಿಕ್ಕು ತೊಚದೆ ಆತ್ಮಹತ್ಯೆ ಮಾರ್ಗ ಹಿಡಿಯುತ್ತದ್ದಾರೆ.
ರೈತರ ಸಂಕಷ್ಟ ಬೇಕಿದೆ ಸರ್ಕಾರ ನೆರವು:
ರೈತರು ಈಗಾಗಲೇ ಸಾಕಷ್ಟು ನಷ್ಟವನ್ನು ಅನುಭಿಸುತ್ತಿದ್ದು ಬಡ್ಡಿ ಸಾಲಗಾರ ಕಾಟ ಬ್ಯಾಂಕ್ ಸಾಲಗಳ ರೈತರಿಗೆ ತೊಂದರೆ ಕೊಡದಂತೆ ತುರ್ತು ಆದೇಶ ನೀಡಬೇಕಾಗಿದೆ
ಸರ್ಕಾರ ಈ ಬಗ್ಗೆ ಗಮನ ನೀಡಿ ರೈತರ ಸಂಕಷ್ಟಗಳ ಬಗ್ಗೆ ಪರಿಶೀಲನೆ ನಡೆಸಿ ಆತ್ಮಹತ್ಯೆಗಳು ಆಗದಂತೆ ತಡೆಯಬೇಕಾಗಿದೆ.
raghu Shikari -7411515737