ಶಿಕಾರಿಪುರ : ಸಿದ್ದರಾಮಯ್ಯನವರ ಕುರಿತು ಸಂಸದ ಬಿ.ವೈ ರಾಘವೇಂದ್ರ ತಾಲೂಕಿನ ಜನತೆಗೆ ಸುಳ್ಳು ಹೇಳುತ್ತಿದ್ದಾರೆ: ಉಳ್ಳಿ ದರ್ಶನ್..!

ಶಿಕಾರಿಪುರ : ಸಿದ್ದರಾಮಯ್ಯನವರ ಕುರಿತು ಸಂಸದ ಬಿ.ವೈ ರಾಘವೇಂದ್ರ ತಾಲೂಕಿನ ಜನತೆಗೆ ಸುಳ್ಳು ಹೇಳುತ್ತಿದ್ದಾರೆ: ಉಳ್ಳಿ ದರ್ಶನ್..!

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ವಿರುದ್ಧ ಸಂಸದ ಬಿ.ವೈ ರಾಘವೇಂದ್ರ ರವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಯುವ ಕಾಂಗ್ರೇಸ್ ಅಧ್ಯಕ್ಷ ದರ್ಶನ್ ಉಳ್ಳಿ ಆರೋಪಿಸಿದರು.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಬಗ್ಗೆ ಹಗುರವಾಗಿ ಸಂಸದರು ಮಾತನಾಡಿದ್ದಾರೆ

ರಟ್ಟಿಹಳ್ಳಿಯಲ್ಲಿ ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಯ ನೀರಾವರಿಗೆ ಜಮೀನು ಕೊಡುತ್ತಿರುವ ರೈತರು ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಯಲ್ಲಿ ರೈತರ ಪರವಾಗಿ ಕೈ ಜೋಡಿಸಿದ್ದಾರೆ. ಆದರೆ ಸಂಸದರು ತಾಲ್ಲೂಕಿನ ಜನತೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿನ ನೀರಾವರಿ ಯೋಜನಗೆಗಳಿಗೆ ಸಿದ್ದರಾಮಯ್ಯರವರು, ಅವರ ಸರ್ಕಾರದ ಅವಧಿಯಲ್ಲಿ ಡಿ ಕೆ ಶಿವಕುಮಾರ್ ರವರು ನೀರಾವರಿ ಸಚಿವರಾಗಿದ್ದಾಗ ಉಡುಗುಣಿ, ತಾಳಗುಂದ, ಹೊಸೂರು ಹೋಬಳಿಯ ನೀರಾವರಿ ಯೋಜನೆಗೆ ಡಿಪಿಆರ್ ತಯಾರಿಸಲು 85 ಲಕ್ಷ ಹಣ ಬಿಡುಗಡೆ ಮಾಡಿದ್ದಾರೆ.

ಕೊಪ್ಪದ ಕೆರೆಯ ಏತ ನೀರಾವರಿಗೆ 12 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗದಿಂದ ತಡಸಾದವರೆಗೆ ರಾಜ್ಯ ಹೆದ್ದಾರಿಯಾಗಿದೆ ಎಂದರೆ ಹೆಚ್ ಸಿ ಮಹಾದೇವಪ್ಪ ರವರು ಲೋಕೋಪಯೋಗಿ ಸಚಿವರಾಗಿದ್ದಾಗ ಆದರೆ, ಸಂಸದರು ರಸ್ತೆಯ ಮಧ್ಯೆ ಹಾಗೂ ಇಕ್ಕೆಲಗಳಲ್ಲಿ ದೀಪ ಹಾಕಿಸಿದ ಮಾತ್ರಕ್ಕೆ ಅದು ತಮ್ಮ ಮತ್ತು ಯಡಿಯೂರಪ್ಪ ರವರ ಕೊಡುಗೆ ಎನ್ನುತ್ತಿದ್ದಾರೆ.

ಯಡಿಯೂರಪ್ಪ ರವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಹಸಿರು ಸಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದ್ದು ಬಿಟ್ಟರೆ, ರೈತರಿಗೆ ಯಾವುದೇ ರೀತಿಯ ಅನುಕೂಲಕರವಾದ ಕೆಲಸ ಮಾಡಲಿಲ್ಲ.

ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿಯಲ್ಲಿ ತಾಲ್ಲೂಕಿನ ಏತ ನೀರಾವರಿಗೆ ಬಿಡುಗಡೆ ಮಾಡಲಾಗಿದ್ದ 850 ಕೋಟಿ ರೂಪಾಯಿಗಳ ಅನುದಾನದ ಹಣವನ್ನು ಈಗ ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪರವರು ಮತ್ತು ಸಂಸದ ಬಿ ವೈ ರಾಘವೇಂದ್ರರವರು ಇದು ತಮ್ಮ ಸರ್ಕಾರದ ಕೊಡುಗೆ ಎಂದು ತಾಲ್ಲೂಕಿನ ಜನತೆಗೆ ಸುಳ್ಳು ಸಂದೇಶ ಸಾರುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ತಾಲ್ಲೂಕಿನ ಸಾರ್ವಜನಿಕರಿಗೆ, ರೈತರಿಗೆ ಸಂಸದರು ಹಾಗೂ ಮುಖ್ಯಮಂತ್ರಿಗಳು ನೀಡಿರುವ ಕೊಡುಗೆ ಶೂನ್ಯವಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಸಬಾ ಬ್ಯಾಂಕ್ ನಿರ್ದೇಶಕ ಬಡಗಿ ಪಾಲಾಕ್ಷಪ್ಪ, ಸುರೇಶ್ ಧಾರವಾಡ, ಅಪ್ಸರ್ ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!