ಆಸ್ಪತ್ರೆ ರಹಿತ ಜೀವನ: ಮಧುಮೇಹ ಎಷ್ಟು ಸತ್ಯ?!

ಆಸ್ಪತ್ರೆ ರಹಿತ ಜೀವನ: ಮಧುಮೇಹ ಎಷ್ಟು ಸತ್ಯ?!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಮಧುಮೇಹ ಎಷ್ಟು ಸತ್ಯ?!

🤯 ಪ್ರಮೇಹ, ಇದು ಸಿಹಿ ಮೂತ್ರದ ರೋಗ, ಸಿಹಿ ರಕ್ತದ ರೋಗವಲ್ಲ.
ಚರಕಾಚಾರ್ಯರ ಈ ಶ್ಲೋಕಗಳನ್ನು ಗಮನಿಸಿ, ಎಲ್ಲಾ ಶ್ಲೋಕಗಳಲ್ಲೂ ಲಕ್ಷಣವಾಗಿ ಮೂತ್ರವನ್ನು ವಿವರಿಸಿದ್ದಾರೆಯೇ ಹೊರತು ರಕ್ತವನ್ನಲ್ಲ. ಮೂತ್ರ ಪ್ರಗಾಢವಾಗಿದೆಯೇ….? ಹಳದಿ-ದುರ್ಗಂಧದಿಂದ ಕೂಡಿದೆಯೇ….? ನೊರೆಯುಕ್ತವಾಗಿದೆಯೇ……?
ಎಂಬುದರ ಆಧಾರದಲ್ಲಿ ಚಿಕಿತ್ಸಾ ಸಾಧ್ಯ ಪ್ರಮೇಹವೂ ಅಲ್ಲವೋ ಎಂದು ನಿರ್ಧರಿಸಿದ್ದಾರೆ.

ಆಧುನಿಕ ಪದ್ಧತಿ ಏನೇ ಹೇಳಲಿ, ಅದು ಸರ್ವ ಪ್ರಕೃತಿಯ ಜನರಿಗೂ ಒಂದೇ ಅಳತೆಗೋಲನ್ನಿಟ್ಟುಕೊಂಡು, ಅದಕ್ಕೆ ಹೊಂದಿಕೊಳ್ಳದ ಎಲ್ಲರೂ ರೋಗಿಗಳೆಂದು ಹಣೆಪಟ್ಟಿ ಕಟ್ಟಿದೆ.

👉ಶ್ರೋತಸ್ಸುಗಳು ಎಂಬ ಆಯುರ್ವೇದದ ಒಂದು ಭಾವ ಎಷ್ಟು ಘನತ್ವದಿಂದ ಕೂಡಿದೆ ಗೊತ್ತೇ?

ಪ್ರತಿ ಧಾತುಗಳನ್ನು ಉತ್ಪತ್ತಿ ಮಾಡಲು ಮತ್ತು ಅದರ ಪ್ರಮಾಣವನ್ನು ಒಂದೇ ರೀತಿಯಾಗಿಟ್ಟಿರಲು ಬೇಕಾದ ಘಟಕಗಳೇ ಶ್ರೋತಸ್ಸುಗಳು.
ನಮ್ಮ ಮನೆ ಮೇಲಿನ ನೀರಿನ ಟ್ಯಾಂಕ್ ಗೆ ತುಂಬಲು ಒಂದು ಹೊರಹೋಗಲು ಒಂದು ಮಾರ್ಗ ಇದೆ ಹಾಗಾಗಿ ನೀರಿನ ಅಳತೆ ಒಂದೇ ಸಮನಾಗಿ ಇರುತ್ತದೆ, ಇಲ್ಲವಾದರೆ ಉಕ್ಕಿಉಕ್ಕಿ ಹರಿಯುತ್ತದೆ.
ಹಾಗೆಯೇ ನಮ್ಮ ಶರೀರದ ರಸ, ರಕ್ತ, ‌ಮಾಂಸ, ಮೇದ, ಅಸ್ಥಿ, ಮಜ್ಜಾ, ಶುಕ್ರ ಧಾತುಗಳು ಉಪಧಾತು ಮತ್ತು ಮಲಗಳು ಪ್ರಮಾಣದಿಂದ ಕ್ಷಯವಾದರೂ, ವೃದ್ಧಿಯಾದರೂ ಕಾಯಿಲೆ ಬರುತ್ತವೆ, ಅವುಗಳ ನಿರ್ಧಿಷ್ಟ ಪ್ರಮಾಣವನ್ನು ತಿಳಿಸಿದ ಆಚಾರ್ಯರು ಅದನ್ನು ಸಮತೋಲನದಿಂದ ಇರಿಸಲು ಶ್ರೋತಸ್ಸುಗಳನ್ನು ಹೇಳಿದ್ದಾರೆ.‌ ಇರಲಿ ಇದನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.

🗣ದಯಮಾಡಿ ಗಮನಿಸಿ:
ಕೆಲ ಪ್ರಶ್ನೆಗಳನ್ನು ಹಾಕಿಕೊಳ್ಳಿ ನೀವು ಮಧುಮೇಹಿಗಳು ಹೌದೋ ಅಲ್ಲವೋ ಎಂಬುದು ಸಿದ್ಧವಾಗುತ್ತದೆ.

1.ಮಧುಮೇಹವು ಮೇದ ಧಾತುವಹ ಶ್ರೋತಸ್ಸಿನ ವಿಕಾರವಾಗಿದೆ, ಅದರ ಮಲ “ಕ್ಲೇದ” ಹೊರ ಹೋಗಲು ಬೆವರು-ಮೂತ್ರ ಸಹಾಯಕ. ಶರೀರದಲ್ಲಿ ಕ್ಲಿನ್ನ ಸಕ್ಕರೆ ಅಂಶ ಅದರ ಅಗತ್ಯಕ್ಕಿಂತ ಹೆಚ್ಚಾದರೆ ಮೂತ್ರದಿಂದ ಹೊರಹೋಗಬೇಕು. ಒಂದುವೇಳೆ ಒಳಗೆ ಯಾವುದೋ ಕಾರಣಕ್ಕೆ ಹೆಚ್ಚಿನ ಸಕ್ಕರೆ ಅಗತ್ಯ ಇದ್ದು ಅದು ಹೆಚ್ಚಿದ್ದರೂ ಮೂತ್ರದಿಂದ ಹೊರಹೋಗುತ್ತಿಲ್ಲ ಎಂದಾದರೆ ಅದನ್ನು ಮಧುಮೇಹ ಎಂದು ಹೇಗೆ ಕರೆಯುವಿರಿ?

  1. ಶಾರೀರಿಕ ಶ್ರಮಕ್ಕಿಂತ ಮೆದುಳಿನ ಶ್ರಮಕ್ಕೆ ಹೆಚ್ಚು ಗ್ಲುಕೋಸ್ ಬೇಕು, ಇದು ಗೊತ್ತಿರುವ ಸಿದ್ಧಾಂತ. ಮತ್ತು ಇಂದು ಅತಿ ಹೆಚ್ಚಿನ ಜನ ಬೆವರಿಗಿಂತ ಮೆದುಳನ್ನೇ ಬಳಸಿ ದುಡಿಮೆ ಮಾಡುತ್ತಿದ್ದಾರೆ, ಹಾಗಾಗಿ ರಕ್ತದಲ್ಲಿ ಸಕ್ಕರೆ ಅಂಶ ಇಬ್ಬರಿಗೂ ಒಂದೇ ಇದ್ದರೆ, ಮೆದುಳಿಗೆ ಘಾಸಿಯಾಗುವುದಿಲ್ಲವೇ? ಅದಕ್ಕಾಗಿ ರಕ್ತದಲ್ಲಿ ಹೆಚ್ಚಿದ್ದರೂ, ಮೆದುಳಿಗೆ, ನರಗಳಿಗೆ ಅಗತ್ಯ ಇರುವ ಕಾರಣ ಅದು ಮೂತ್ರದಿಂದ ಹೊರಹೋಗುತ್ತಿಲ್ಲ, ಎಂದಾದರೆ ಮೂತ್ರ ಪರೀಕ್ಷೆಯಿಂದ ಮಧುಮೇಹವನ್ನು ನಿರ್ಧರಿಸುವುದೋ ಅಥವಾ ರಕ್ತಪರೀಕ್ಷೆಗಳಿಂದಲೋ?!🙍‍♂

3.ಆಯ್ತು , ರಕ್ತದ ಸಕ್ಕರೆ ನಿಯಂತ್ರಿಸಿದರೂ 10ವರ್ಷಗಳಲ್ಲಿ ಮೆದುಳು ಮತ್ತು ನರಗಳೇಕೆ ಊದಿಕೊಂಡು, ನ್ಯೂರೈಟೀಸ್ ಆಗುತ್ತವೆ, ಕಣ್ಣಿನ ರೆಟಿನಾ ಏಕೆ ಹಾಳಾಗುತ್ತದೆ. ನಮ್ಮ ನಿಯಂತ್ರಣ ಸಿದ್ಧಾಂತ ಮತ್ತು ಪದ್ಧತಿ ಸರಿಯಾಗಿದ್ದುದೇ ಆಗಿದ್ದರೆ ಈ ಉಪದ್ರವರೂಪಿ ರೋಗಗಳೇಕೆ ಬರಬೇಕು? ಇಲ್ಲಿ ಆಧುನಿಕ ಪದ್ಧತಿ ಎಡವಿರುವುದು ಸ್ಪಷ್ಟ ಅಲ್ಲವೇ?🙎‍♀

4.ಆಯುರ್ವೇದದ ರೀತಿ ಔಷಧಿ ಮಾಡಿದರೆ, ರಕ್ತದ ಸಕ್ಕರೆ ಅಂಶ 150+-100 ಆಚೆ ಈಚೆ ಇರುತ್ತದೆ ಮತ್ತು ಇದು ಅತ್ಯಗತ್ಯ, ಅಮೇರಿಕಾ ಕೂಡ ಹೇಳಿದೆ, RBS 250 ಸರಿ ಎಂದು, ಇದೇ ಆಧಾರದ ಮೇಲೆ ಸಣ್ಣ ಹೆಜ್ಜೆ ಇರಿಸಿದ್ದಾರೆ, ಆದರೆ ಅವರದೇ ವಿಜ್ಞಾನಿಗಳ ನಿರ್ಧಾರವನ್ನು ಇನ್ನೂ ಕೆಲ ಲ್ಯಾಬ್ ಗಳು, ವೈದ್ಯರು ಒಪ್ಪುತ್ತಿಲ್ಲ ಎನ್ನುವುದು ಆಶ್ಚರ್ಯ!!ಇದಕ್ಕೆ ನಾವು ಬಲಿಯಾಗಬೇಕೇ?🙅‍♂

ಇನ್ನೂ ಅನೇಕ ಪ್ರಶ್ನೆಗಳಿವೆ ಇರಲಿ.

ಒಟ್ಟಾರೆಯಾಗಿ, ನಾವು ನಿರಂತರ ಪರೀಕ್ಷೆಗೊಳಗಾಗುವ ಬದಲು, ನಮ್ಮ ಎಲ್ಲಾ ಶಕ್ತಿಯನ್ನು ನಮ್ಮ ನಮ್ಮ ಕೆಲಸಗಳಿಗೆ ಹಾಕೋಣ, ಸಮಯವೇ ಇರದಂತೆ ಕೆಲಸ ಮಾಡುತ್ತಿರೋಣ, ಹಸಿವು, ಬಾಯಾರಿಕೆ, ನಿದ್ರೆಯನ್ನು ಶರೀರ ತಾನೇ ಹೇಗೆ ಗೊತ್ತು ಮಾಡುತ್ತದೋ ಹಾಗೆ ರೋಗವನ್ನೂ ತಾನೇ ಹೇಳುತ್ತದೆ. ಮುನ್ನೆಚ್ಚರಿಕೆಗೆಂದು ಚೆಕಪ್ ಪ್ಯಾಕೇಜ್ ಗಳನ್ನು ಮಾಡಿಸುವ ಅಗತ್ಯ ಇಲ್ಲ ಮಾಡಿಸಿದರೂ, ಅದರಲ್ಲಿ ದೋಷ ಕಂಡು ಬಂದರೂ ಆಯುರ್ವೇದ ವೈದ್ಯರನ್ನು ಕಂಡರೆ ಆಹಾರದ-ಜೀವನದ ಪದ್ದತಿಯನ್ನು ಸರಿಪಡಿಸಿಕೊಡುತ್ತಾರೆ. ಅಷ್ಟು ಸಾಕು. ಇದುವರೆಗೂ ಯಾವುದೇ ತೊಂದರೆ ಇಲ್ಲದ ಮನುಷ್ಯ ಒಂದು ಪರೀಕ್ಷೆಯ ನಂತರ ರೋಗಿ ಎಂದು ಭಯಪಡುವುದು ಎಂತಹ ವಿಪರ್ಯಾಸ🤦‍♂ ಎಷ್ಟು ಕಾಲಗಳಿಂದ ನಿಮ್ಮ ರಕ್ತದ ಆ ಅಂಶ ಹೆಚ್ಚೋ ಕಡಿಮೆಯೋ ಇದ್ದುಕೊಂಡು ಕಾರ್ಯನಿರ್ವಹಿಸಿದೆ!!!! ಈಗ ನಮ್ಮ ಕೆಟ್ಟ ಔಷಧಿಗಳಿಂದ ನಿಯಂತ್ರಿಸಲು ಹೋಗಿ ಆಗಬಾರದ, ಬರಬಾರದ ಅನೇಕ ಹೊಸ ತೊಂದರೆಗಳನ್ನೇಕೆ ಮಾಡಿಕೊಳ್ಳುವುದು?

ಸುಖಮಯ ಜೀವನ ನಿಮ್ಮದಾಗಲಿ🧚‍♀
*ಮೂತ್ರದಿಂದ ಸಕ್ಕರೆ ಹೊರಹೋಗುತ್ತಿದ್ದರೆ ಅದು ರಕ್ತದಲ್ಲಿ ಅಗತ್ಯಕ್ಕಿಂತ ಹೆಚ್ಚಿದೆ ಆಗ ನಿಯಂತ್ರಣಕ್ಕೆ ಔಷಧಿ ಬೇಕೇ ಬೇಕು, ಇಲ್ಲವೆಂದಾದಲ್ಲಿ ನಿತ್ಯವೂ ಶ್ರಮವಹಿಸಿ ನಮ್ಮ ನಮ್ಮ ಕೆಲಸ ನೋಡಿಕೊಂಡು ಸುಖಾಯುವಾಗಿ ಬಾಳೋಣ ಅನ್ಯರಿಗೂ ಹಿತಕರವಾಗಿ ಇರೋಣ, ಅಲ್ಲವೇ?

😳ಆಶ್ಚರ್ಯ ಎಂದರೆ ಮೂತ್ರದ ಸಕ್ಕರೆ ಪರೀಕ್ಷೆ ನಿಧಾನವಾಗಿ ಮಾಯವಾಗುತ್ತಿದೆ! ಅದೊಂದು ಅಳತೆಗೋಲೇ ಅಲ್ಲ ಎನುವಷ್ಟು!!

ಅನುಭವದಲ್ಲಿ ನಾವು ನೋಡಿದ ಸಕ್ಕರೆ ಅಂಶ ಅಂದರೆ RBS-900 ಇದ್ದು ಹಲವು ವರ್ಷಗಳಿಂದ ಸುಖವಾಗಿ ಆರೋಗ್ಯದಿಂದ ಕಾರ್ಯನಿರ್ವಹಿಸಿಕೊಂಡು ಧೈರ್ಯವಾಗಿ ಇದ್ದಾರೆ.

ಹಾಗೆಯೇ ಬಿ.ಪಿ 60/40 ನೋಡಿದ್ದೇವೆ, 280/120 ನೋಡಿದ್ದೇವೆ ಯಾವುದೇ ಅವಘಡ ಇಲ್ಲದೇ ಬಾಳುತ್ತಿದ್ದಾರೆ ಧೈರ್ಯವಾಗಿ.

🪁 ಯಾವುದೇ ವೈದ್ಯ ಮತ್ತವರ ಪದ್ಧತಿ ಮಾನವನ ಆತ್ಮವಿಶ್ವಾಸ ಕುಗ್ಗಿಸುವಂತೆ ಇರಬಾರದು.

ನಿಮ್ಮ ಸಂಪರ್ಕಕ್ಕೆ:
📞 8792290274
9148702645

🌿ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌿☀️ಸ್ವಾಸ್ಥ್ಯ ಸರ್ವರದ್ದೂ ಆಗಲಿ.

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!