ಶಿಕಾರಿಪುರ: ಸರ್ಕಾರ ಯೋಜನಗೆಗಳನ್ನು ಅನುಷ್ಠಾನಗೊಳ್ಳಿಸಲು ಸರ್ಕಾರಿ ನೌಕರರ ಸೇವೆ ಅತ್ಯಂತ ಶ್ರೇಷ್ಠವಾದದ್ದು: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ: ಸರ್ಕಾರ ಯೋಜನಗೆಗಳನ್ನು ಅನುಷ್ಠಾನಗೊಳ್ಳಿಸಲು ಸರ್ಕಾರಿ ನೌಕರರ ಸೇವೆ ಅತ್ಯಂತ ಶ್ರೇಷ್ಠವಾದದ್ದು: ಸಂಸದ ಬಿ.ವೈ ರಾಘವೇಂದ್ರ..!


ಶಿಕಾರಿಪುರ: ಸರ್ಕಾರದ ಎಲ್ಲಾ ರೀತಿಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಸೇವೆ ಅತ್ಯಂತ ಅಮೂಲ್ಯವಾದದ್ದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.


ಶಿಕಾರಿಪುರ ಪಟ್ಟಣ ತಾಲೂಕ್ ಕಛೇರಿ ಆವರಣದಲ್ಲಿ ಸರ್ಕಾರಿ ನೌಕರರ ಸಂಘದ ಕ್ಯಾಲೇಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಕಾರ್ಯ ಶ್ಲಾಘನೀಯವಾಗಿದೆ.


ನಿಮ್ಮ ಸ್ವಾಭಿಮಾನ ಗೌರವದಿಂದ ಕೆಲಸ ಮಾಡಿ ಒಳ್ಳೆಯ ರೀತಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ನಮ್ಮ ಬೆಂಬಲ ಎಂದಿಗೂ ಇರುತ್ತದೆ ಸರ್ಕಾರಿ ನೌರರ ಸಂಘದ ರಾಜಕೀಯ ಎಂದಿಗೂ ಬಾರಬಾರದ್ದು ಯಾವುದೇ ಪ್ರತಿಭಟನೆ ಇಲ್ಲದೇ ನೌಕರ ಸಂಘದ ಎಲ್ಲಾ ಭೇಡಿಕೆಗಳನ್ನು ಪೂರೈಹಿಸಲಾಗಿದೆ ಎಂದರು.


ಶಿಕಾರಿಪುರ ತಾಲೂಕಿನ ಎಲ್ಲಾ ಕೇರೆ ಕಟ್ಟೆಗಳ ತುಂಬಿಸುವ ಕಾರ್ಯದಿಂದ ತಾಲೂಕಿನ ರೈತರ ಋಣ ತಿರಿಸುವ ನೀರಾವರಿ ಯೋಜನೆಗಳು ರಾಜಕೀಯ ಅಡೆತಡೆಗಳ ನಡುವೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ.


ಕೋರೋನ ಸಂಕಷ್ಟದ ಸಮಯ ಎಲ್ಲಾರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ನೌಕರರ ಅನೇಕ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು ಎಂದರು ಸರ್ಕಾರ ನೌಕರರ ಹಿತಕಾಯಲು ಎಂದಿಗೂ ಬದ್ದರಿದ್ದೇವೆ ಎಂದರು.


ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷರಾದ ಕ್ಷಡಾಷರಿ ಅವರು ವಿವಿಧ ನಿಗಮ ಮಂಡಳಿಗೆಗಳಿಗೆ ನೇಮಕವಾದ ಅಧ್ಯಕ್ಷರು ಹಾಗೂ ನಿರ್ಧೇಶಕರು ಸದಸ್ಯರುಗಳಿಗೆ ಸಸ್ಮಾನ ನಡೆಸಿದರು.


ಇದೆ ವೇಳೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪೂರಸೃತರಿಗೂ ಪುರಸಭಾ ಅಧ್ಯಕ್ಷರಿಗೂ ಹಾಗೂ ಪ್ರಾಥಮಿಕ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ನೂತನ ನಿರ್ಧೇಶಕರಗೆ ವಿವಿಧ ನೌಕರ ವೃಂದದವರಿಗೆ ಸನ್ಮಾನ ನಡೆಸಿದರು,


ಈ ಸಂದರ್ಭದಲ್ಲಿ ಶಿಕಾರಿಪುರ ತಾಲೂಕ್ ನೌಕರ ಸಂಘಧ ಅಧ್ಯಕ್ಷರಾದ ಎ.ಚಿನ್ನಪ್ಪ,ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಎಂ.ಬಿ ಚನ್ನವೀರಪ್ಪ, ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ವಿವಿಧ ನಿಗಮ ಮಂಡಳಿಯ ಸದಸ್ಯರು ನೌಕರರ ಸಂಘದ ಸದಸ್ಯರು ಇದ್ದರು,

Admin

Leave a Reply

Your email address will not be published. Required fields are marked *

error: Content is protected !!