ಶಿವಮೊಗ್ಗ :ಶಿವಮೊಗ್ಗದಲ್ಲಿ ನಿರ್ಮಾಣವಾಗಲಿದೆ ಇನ್ನೊಂದು ನೂತನ ಸುಸಜ್ಜಿತ ಕ್ರೀಡಾಂಗಣ ಎಲ್ಲಿ ಗೊತ್ತ…!

ಶಿವಮೊಗ್ಗ :ಶಿವಮೊಗ್ಗದಲ್ಲಿ ನಿರ್ಮಾಣವಾಗಲಿದೆ ಇನ್ನೊಂದು ನೂತನ ಸುಸಜ್ಜಿತ ಕ್ರೀಡಾಂಗಣ ಎಲ್ಲಿ ಗೊತ್ತ…!

ಶಿವಮೊಗ್ಗ: ತ್ಯಾವರೆಕೊಪ್ಪದ ಬಳಿಯಲ್ಲಿ ನೂತನ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಬಳಿಯಲ್ಲಿ ನೂತನ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಇದಕ್ಕೆ ಕೇಂದ್ರ ಸರ್ಕಾರ ಹಣಕಾಸಿನ ಸಹಕಾರ ನೀಡಲಿದೆ ಎಂದಿದ್ದಾರೆ.

ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ನೂತನ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಅಥ್ಲೆಟಿಕ್ಸ್‌, ಫುಟ್ ಬಾಲ್, ವಾಲಿ ಬಾಲ್, ಹಾಕಿ ಊಷೋ, ಜ್ಯೂಡೋ, ಕುಸ್ತಿ, ಕಬ್ಬಡಿ ಮತ್ತು ಖೋಖೋ ಕ್ರೀಡೆಗಳಿಗೆ ಅವಕಾಶವಾಗಲಿದೆ ಎಂದರು.

ಇನ್ನು, ನೆಹರೂ ಕ್ರೀಡಾಂಗಣದಲ್ಲಿ ಹಾಕಿ ಕೋರ್ಟ್ ರಚನೆ ಕುರಿತು ಆಕ್ಷೇಪಣೆ ಇತ್ತು.

ಆದರೆ ಇದರ ಕುರಿತು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹಾರ ಮಾಡಲಾಗಿದ್ದು, ಇಲ್ಲಿಯೇ ಜ್ಯೂನಿಯರ್ ಹಾಕಿ ಮೈದಾನ ಹಾಗೂ ತ್ಯಾವರೆಕೊಪ್ಪದಲ್ಲಿ ಸೀನಿಯರ್ ಹಾಕಿ ಮೈದಾನ ನಿರ್ಮಾಣವಾಗಲಿದೆ ಎಂದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!