ವಿಷಯ:ಪಿ.ಸಿ.ಒ.ಡಿ(ತಡವಾಗಿ ಆಗುವ ಋತುಚಕ್ರ…!

ವಿಷಯ:ಪಿ.ಸಿ.ಒ.ಡಿ(ತಡವಾಗಿ ಆಗುವ ಋತುಚಕ್ರ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:ಪಿ.ಸಿ.ಒ.ಡಿ(ತಡವಾಗಿ ಆಗುವ ಋತುಚಕ್ರ)⏳

20 ರಿಂದ 40 ವರ್ಷಗಳ ನಡುವಿನ ನಗರವಾಸೀ ಹೆಚ್ವಿನ ಸ್ತ್ರೀಯರ ತಿಂಗಳ ಋತುಚಕ್ರವು 45 ರಿಂದ 60 ದಿನಗಳವರೆಗಿನ ಅಂತರವನ್ನು ಹೊಂದಿರುತ್ತದೆ.
ಇದರೊಂದಿಗೆ,
ಕತ್ತಿನ ಸುತ್ತಲಿನ ಚರ್ಮವು ದಪ್ಪವಾಗುವುದು, ತೂಕ ಹೆಚ್ಚುವುದು, ಮುಖದಲ್ಲಿ ಅನಗತ್ಯ ರೋಮಗಳು ಬೆಳೆಯುವುದು. ಈ ಲಕ್ಷಣಗಳನ್ನು ಹೊಂದಿದ್ದಲ್ಲಿ ಯಾವ ಪರೀಕ್ಷೆಗಳೂ ಇಲ್ಲದೇ ಈ ರೋಗವನ್ನು P.C.O.D ಎಂದು ನಿಖರವಾಗಿ ಹೇಳಬಹುದು.

🔷 ಅಂಡಾಶಯಗಳಲ್ಲಿ ಉಂಟಾಗುವ ನೀರ್ಗುಳ್ಳೆಗಳೇ ಈ ತೊಂದರೆಗೆ ಕಾರಣ. ಹಾರ್ಮೋನ್ ಗಳ ಚಿಕಿತ್ಸೆಯಿಂದ ತಾತ್ಕಾಲಿಕ ಋತುಸ್ರಾವ ಕಂಡರೂ ಉಳಿದ ಲಕ್ಷಣಗಳು ಎಳ್ಳಷ್ಟೂ ನಿವೃತ್ತಿಯಾಗಲಾರವು. ಹಾರ್ಮೋನ್ ಚಿಕಿತ್ಸೆ ಅನೇಕರಲ್ಲಿ ತಾತ್ಕಾಲಿಕ ಪರಿಹಾರವಾಗಿರುತ್ತದೆ.,ಅಂದರೆ ಮಾತ್ರೆಗಳಿಲ್ಲದೇ ಮುಟ್ಟು ಆಗುವುದೇ ಇಲ್ಲ, ಎನ್ನುವಂತೆ ಇರುತ್ತದೆ.
ಹಾಗೆಯೇ,
P.C.O.D ಗೆ ಮಧುಮೇಹಕ್ಕೆ ಕೊಡುವ Metformin ಮಾತ್ರೆ ಕೊಡುವುದರಿಂದ ಇನ್ನೂ ಹೆಚ್ಚಿನ ಅಪಾಯ ಉಂಟಾಗುತ್ತದೆ.

ಆಯುರ್ವೇದದಲ್ಲಿ ಹೇಳಿರುವ ಕಾಯ ಅಥವಾ ಅಗ್ನಿ ಚಿಕಿತ್ಸೆಯಿಂದ ಮೇದೋಧಾತುವನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದರೆ ಋತುಚಕ್ರ ತಂತಾನೇ ಸರಿಹೋಗುವುದು ಮತ್ತು ಮುಖದ ಕೂದಲುಗಳವರೆಗಿನ ಎಲ್ಲಾ ಲಕ್ಷಣಗಳನ್ನು ಬೇರು ಸಮೇತ ಗುಣಪಡಿಸಬಹುದು.

🔺P.C.O.D ಗೆ ಕಾರಣಗಳೇನು? ಎಂಬುದನ್ನು ಕಂಡುಕೊಳ್ಳದೇ ಚಿಕಿತ್ಸೆಗೆ ಮುಂದಾದರೆ ಅದರಿಂದ ಪೂರ್ಣ ಲಾಭವಾಗುತ್ತದೆಯೇ?
🔺ಮುಂದುವರಿದಂತೆ ಅಪಾಯಕಾರಿ ಹಂತವನ್ನು ತಲುಪುವುದು ಸತ್ಯವೇ ಎಂದಾದರೆ, ಕೇವಲ ಮಾತ್ರೆಗಳಿಂದ ಋತುಸ್ರಾವ ಮಾತ್ರವಾದರೆ ಸಾಕೇ?
🔺ಮಾತ್ರೆಗಳಿಲ್ಲದೇ ಋತುಚಕ್ರ ಸರಿಯಾಗುವುದು ಬೇಡವೇ?
🔺ಸ್ತ್ರೀಯ ಸ್ವಂತ ಆರೋಗ್ಯ ಸದೃಢವಾಗುವುದು ಬೇಡವೇ?
🔺ಉಳಿದ ಲಕ್ಷಣಗಳೂ ನಿವೃತ್ತಿಯಾಗುವುದು ಬೇಡವೇ?
🔺ಗರ್ಭಧಾರಣೆಯಾದರೆ ಸಾಕೆ?
🔺ಆರೋಗ್ಯವಂತ, ಸ್ಥೂಲರಲ್ಲದ, ದೃಢಕಾಯದ ಮಕ್ಕಳನ್ನು ಪಡೆಯುವುದು ಬೇಡವೇ?

ಹಾಗಾಗಿ, ಕಾರಣಗಳನ್ನು ನೋಡಲೇಬೇಕು, ನಂತರ ಮಾತ್ರವೇ ಪೂರ್ಣಚಿಕಿತ್ಸೆ ಸಾಧ್ಯ.

🔜ನಾಳಿನ ಸಂಚಿಕೆಗೆ ಮುಂದುವರಿಯುವುದು…

•••••••••••••••••••••••••••••••••••••••
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
🦋🦋
•••••••••••••••••••••••••••••••••••••••ಸಂಪರ್ಕಿಸಿ:📞 9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda

Admin

Leave a Reply

Your email address will not be published. Required fields are marked *

error: Content is protected !!