ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-11..!

ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-11..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-11

“ಪಿತ್ತಜ ಕಾಲದ”ದ ಪರಿಚಯ
(ಮಾನವನ ಜೀವಿತಾವಧಿಯ 25 ವರ್ಷಗಳಿಂದ 50ವರ್ಷಗಳವರೆಗೆ)
•••••••••••••••••••••••••••••••••••
ತೇಜಸ್ಸಿನ ಶಕ್ತಿಯ ರೂಪದಲ್ಲಿ ಪ್ರಕಟವಾಗುವ ಪಿತ್ತವು ಜೀವಿಯಲ್ಲಿ 5 ವಿಧಗಳಲ್ಲಿ ವ್ಯಕ್ತವಾಗುತ್ತದೆ. ಹಿಂದಿನ ಸಂಚಿಕೆಯಲ್ಲಿ ನಾಲ್ಕನೆಯದಾದ “ಆಲೋಚಕಪಿತ್ತ”ವನ್ನು ನೋಡಿದ್ದೇವೆ. ಮುಂದಿನ ಶಕ್ತಿ ಸ್ವರೂಪವಾದ “ಸಾಧಕಪಿತ್ತ”ವನ್ನು ಇಂದು ನೋಡೋಣ.

💥 ಸಾಧಕ ಪಿತ್ತ:

✨ ಜೀವಿಯೊಂದು ಆತ್ಮವಿಶ್ವಾಸದಿಂದ ಜೀವನದ ಹೆಜ್ಜೆಯನ್ನು ಹಾಕಲು ಯಾವ ತೇಜಸ್ಸು ಅದರ ಮನದೊಳಗೆ ಮನೆಮಾಡಿರುತ್ತದೋ ಅದನ್ನೇ “ಸಾಧಕಪಿತ್ತ” ಎಂದು ಕರೆಯುತ್ತಾರೆ🔝

ಹಾರುವ ಪಕ್ಷಿಗೆ ಬೀಳುವ ಭಯವಿಲ್ಲ, ನೀರಿನ ಮೀನಿಗೆ ಮುಳುಗುವ ಭಯವಿಲ್ಲ. ಹಾಗೇ, ಸಹಸ್ರಕೋಟಿ ಜೀವರಾಶಿಗಳಿಗೆ ಜೀವನ ಸಾಗಿಸಲು ಭೂಮಿಯೋ, ಆಕಾಶವೋ, ನೀರೋ ಮನೆ ಮಾಡಿಕೊಟ್ಟಿದೆ. ಅಲ್ಲಿ ಆ ಜೀವಿಗಳು ನಿರ್ಭಯವಾಗಿ ಆತ್ಮವಿಶ್ವಾಸದಿಂದ ಜೀವನದ ಹೆಜ್ಜೆಗಳನ್ನು ಹಾಕುತ್ತಾ ಸಾಗುತ್ತವೆ. ಈ ಧೈರ್ಯ ಅಥವಾ ಆತ್ಮವಿಶ್ವಾಸವನ್ನು ರವಿಯು ಜೀವಿಗಳಗೆ ಕರುಣಿಸಿರುವ ಕೃಪೆಯಾಗಿದೆ☀️

ಸಾಧಕಪಿತ್ತದ ಅಭಾವವಿದ್ದ ಜೀವಿಗಳು ಜೀವನವನ್ನು ಅಧೈರ್ಯದಿಂದ ಅಥವಾ ಅವಿಶ್ವಾಸದಿಂದ ಸಾಗಿಸುತ್ತವೆ. ಭಿನ್ನಭಿನ್ನ ಮನುಜರ ಧೈರ್ಯ ಮತ್ತು ವಿಶ್ವಾಸ ಭಿನ್ನಭಿನ್ನವಾಗಿರುತ್ತದೆ. “ಯಾರಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚೋ ಅವರ ಜೀವನದ ಹೆಜ್ಜೆಗಳು ದೃಢವಾಗಿರುತ್ತವೆ ಮತ್ತು ನಿರಂತರ ಏರುಗತಿಯಲ್ಲಿ ಸಾಗುತ್ತವೆ.” ಹಾಗೆಯೇ, ಧೈರ್ಯ ಮತ್ತು ಆತ್ಮವಿಶ್ವಾಸ ಕಡಿಮೆಯಿರುವವರ ಜೀವನ ನಿಂತ ನೀರಿನಂತೆ ಅಥವಾ ಇಳಿಮುಖವಾಗಿ ಒದ್ದಾಡುತ್ತಾ ಸಾಗುತ್ತದೆ.

ಮಾನವನ ಜೀವನ ಊರ್ಧ್ವಮುಖಿಯೋ ಅಥವಾ ಅಧೋಗತಿಯೋ ಎಂಬುದು ಅವರವರ ಮನಸ್ಸಿನಲ್ಲಿ ಇರುವ ಸಾಧಕಪಿತ್ತದ ಪ್ರಮಾಣ ಮತ್ತು ಬಲವನ್ನು ಅವಲಂಭಿಸಿರುತ್ತದೆ📊

ಯೌವನದಲ್ಲಿ ಸೂರ್ಯನ ತೇಜಸ್ಸು ಪೂರ್ಣಪ್ರಮಾಣದಲ್ಲಿ ಸಾಧಕಪಿತ್ತದ ರೂಪದಲ್ಲಿ ವ್ಯಕ್ತವಾಗುತ್ತದೆ. ಹಾಗಾಗಿ, ಆ ಕಾಲದಲ್ಲಿ ವ್ಯಕ್ತಿಯು ತನ್ನ ಸಂಸ್ಕಾರ ಮತ್ತು ಗಳಿಸಿದ ಜ್ಞಾನಕ್ಕೆ ಅನುಗುಣವಾಗಿ ಅಂಧವಿಶ್ವಾಸವೋ ಪೂರ್ಣವಿಶ್ವಾಸವೋ ಅಂತೂ ಜೋರಾಗಿ ಹೆಜ್ಜೆಹಾಕುತ್ತಾನೆ🌞

ನಾವೆಲ್ಲಾ ವಿಶೇಷವಾಗಿ ಗಮನಿಸಬೇಕಾದ ಅಂಶ ಎಂದರೆ, ಯೌವನದಲ್ಲಿ ಸಾಧಕಪಿತ್ತ ತಾನೇತಾನಾಗಿ ಸ್ವತಂತ್ರವಾಗಿ ಆವಿರ್ಭವಿಸುವುದಿಲ್ಲ. ಬೇಳಗುವ ಜ್ಯೋತಿಯನ್ನು ಸಾಧಕಪಿತ್ತಕ್ಕೆ ಹೋಲಿಸಿದರೆ ಅದು ತೈಲದ ಪ್ರಮಾಣ ಮತ್ತು ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಹಾಗೆಯೇ, ಯೌವನದ ಪ್ರಭಾಜ್ಯೋತಿಯು ಅಥವಾ ಸಾಧಕಪಿತ್ತವು ‘ಅವಲಂಬಕ ಕಫ’ ಎಂಬ ತೈಲದಮೇಲೆ ನಿರ್ಧಾರವಾಗುತ್ತದೆ.

ಹಾಗಾಗಿ,
ಬಾಲ್ಯದಲ್ಲಿಯೇ “ಅವಲಂಬಕ ಕಫ” ಎಂಬ ಶಕ್ತಿಯ ಆಕರವನ್ನು ಶುದ್ಧ ಮತ್ತು ತಾಜಾ ಆಹಾರಗಳ ಮೂಲಕ ತುಂಬುತ್ತಾ ಇರಬೇಕು. ಇಲ್ಲದೇ ಹೋದಲ್ಲಿ ದುರ್ಬಲ ಕಫದೋಷವು ಮನಸ್ಸನ್ನು ಪೋಷಣೆ ಮಾಡುತ್ತದೆ, ಹಾಗಾದಾಗ ಅದು ಶಕ್ತಿಯುತ ಬೆಂಕಿಯನ್ನು ಅಥವಾ ಮಹಾಪ್ರಭೆಯ ಬೆಳಕನ್ನು ಕೊಡಲು ಸಾಧ್ಯವೇ ಇಲ್ಲ. ಅದರ ಬದಲು ಹುಂಬುತನವನ್ನೋ ಅಥವಾ ಬೇಜವಾಬ್ದಾರಿಯ ಮಾತು ಕೃತಿಗಳನ್ನೋ ಮಂಕುಬಡಿದ ದೀಪದ ಸೊಡರಿನಂತೆ ಹೊರಹಾಕಿ ಅಲ್ಪಮಾತ್ರ ಪ್ರಮಾಣದ ಶಕ್ತಿ ಅಥವಾ ಬೆಳಕನ್ನು ಕೊಡುತ್ತದೆ.

ಒಟ್ಟಾರೆ,
ಸೂರ್ಯನ ತೇಜಸ್ಸು ಕಲಬೆರಕೆರಹಿತ ನೈಸರ್ಗಿಕವಾಗಿ ಬೆಳೆದ ತಾಜಾ ಆಹಾರಗಳ ಮುಖಾಂತರ ಜೀವಿಯ ಮನಸ್ಸನ್ನು ಸೇರುತ್ತದೆ. ಅದನ್ನೇ, ಅವಲಂಬಕ ಕಫ ಎಂದು ಕರೆಯುತ್ತೇವೆ. ಈ ಸಶಕ್ತ ಕಫದಿಂದ ಹೊರಬರುವ ತೇಜಸ್ಸೇ ಧೈರ್ಯದ ಮತ್ತು ಆತ್ಮವಿಶ್ವಾಸದ ರೂಪದಲ್ಲಿ ಮಾನವನ ಮನಸ್ಸಿನಿಂದ ವ್ಯಕ್ತವಾಗುತ್ತದೆ. ಹಾಗೆಂದು ಕೇವಲ ಶುದ್ಧ ತಾಜಾ ಆಹಾರವನ್ನಷ್ಟೇ ತಿನ್ನಿಸುವುದಲ್ಲ‌, ನಿರಂತರ ಚಟುವಟಿಕೆಗಳು ಎಂಬ ಅಗ್ನಿಯ ಕಿಡಿಯನ್ನು ಮಕ್ಕಳು ಮತ್ತು ತರುಣರಲ್ಲಿ ಹೊತ್ತಿಸುತ್ತಿರಬೇಕು🔥

❄️ ಆತ್ಮೀಯರೇ,
ಮಕ್ಕಳಿಗೆ ಶಕ್ತಿಯುತ ತಾಜಾ ಆಹಾರಗಳನ್ನು ಮಾತ್ರ ಕೊಡಿ ಮತ್ತು ಅವರನ್ನು ನಿರಂತರ ಶಾರೀರಿಕ ಚಟುವಟಿಕೆಗಳಲ್ಲಿ ಇಡಿ. ಇದರಿಂದ ಮಾತ್ರ ಅವರ ಜೀವನ ಆತ್ಮವಿಶ್ವಾಸದಿಂದ ಊರ್ಧ್ವಮುಖವಾಗಿ ಸಾಗುತ್ತದೆ. ತತ್ಪರಿಣಾಮ ತಮ್ಮ ಸರ್ವ ಇಚ್ಛೆಗಳನ್ನೂ ಸಾಧಿಸಿಕೊಳ್ಳುತ್ತಾರೆ.

🪔ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🪔 🌷ಸ್ವಾಸ್ಥ್ಯ ಸರ್ವರದ್ದೂ ಆಗಲಿ🌷ಸಂಪರ್ಕಿಸಿ:📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!