ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-10

ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-10

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-10

ತ್ವಚೆಯ ಸಹಜ ಸೌಂದರ್ಯಕ್ಕೆ “ಭ್ರಾಜಕಪಿತ್ತ” ಬಲವರ್ಧಕ ಭ್ರಾಜಕಪೇಸ್ಟ್ ಬಳಸಿ ಸ್ನಾನಮಾಡಿ.

🥣ಸಂಕ್ಷಿಪ್ತ “ಭ್ರಾಜಕ್ ಪೇಸ್ಟ್” ತಯಾರಿಸುವ ವಿಧಾನ:

📜ಬೇಕಾಗುವ ವಸ್ತುಗಳು:
1) ಪರಿಶುದ್ಧ ಎಳ್ಳೆಣ್ಣೆ 100ಗ್ರಾಂ
(ದೀಪದ ಎಣ್ಣೆಯನ್ನು ಅಥವಾ ಕಲಬೆರಕೆ ಎಳ್ಳೆಣ್ಣೆಯನ್ನು ಯಾವಕಾರಣಕ್ಕೂ ಬಳಸಬೇಡಿ)
2) ಕಲಬೆರಕೆ ರಹಿತ ಕಡಲೆಬೇಳೆ ಹಿಟ್ಟು 150ಗ್ರಾಂ
3 ) ಶುದ್ಧ ಅರಿಶಿಣದ ಪುಡಿ 5ಗ್ರಾಂ
4 ) ಬೇವಿನ ಸೊಪ್ಪು 5ಗ್ರಾಂ

▪️ಎಳ್ಳೆಣ್ಣೆಯನ್ನು ಮಂದ ಉರಿಯಲ್ಲಿ ಹೊಗೆಯಾಡದಂತೆ ಕಾಯಿಸಿ. ಕಾದ ನಂತರ ಚನ್ನಾಗಿ ತೊಳೆದು ಒರೆಸಿದ ಬೇವಿನ ಎಲೆಗಳನ್ನು ಹಾಕಿ ಒಲೆಯಿಂದ ಇಳಿಸಿಬಿಡಿ.

▪️30 ನಿಮಿಷಗಳ ನಂತರ ಅದನ್ನು ಸೋಸಿ ಎಲೆಗಳನ್ನು ಹೊರತೆಗೆಯಿರಿ.

▪️ನಂತರ, ಕಡಲೆಹಿಟ್ಟು ಮತ್ತು ಅರಿಶಿಣವನ್ನು ಆ ಎಣ್ಣೆಯಲ್ಲಿ ಹಾಕಿ ಚನ್ನಾಗಿ ಕಲಸಿದರೆ ಸಂಕ್ಷಿಪ್ತ ಭ್ರಾಜಕ್ ಪೇಸ್ಟ್ ಸಿದ್ಧ.

♾ಬಳಸುವ ವಿಧಾನ:
ಒಂದು ಚಮಚದಷ್ಟು ಭ್ರಾಜಕ್ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು, ಅದಕ್ಕೆ ಒಂದು ಚಮಚದಷ್ಟು ನೀರನ್ನು ಹಾಕಿ ಕಲಸಿಕೊಳ್ಳಿ, ಬೆಣ್ಣೆಯಂತಹ ಮೃದುವಾದ ಪೇಸ್ಟ್ ದೊರೆಯುತ್ತದೆ.
ನಂತರ,
ಮೈ ಮೇಲೆ ನೀರನ್ನು ಹಾಕಿಕೊಂಡು, ನೀರಿನಲ್ಲಿ ಕಲಸಿದ ಭ್ರಾಜಕ್ ಪೇಸ್ಟ್ ಹಚ್ಚಿ ಚನ್ನಾಗಿ ಉಜ್ಜಿಕೊಳ್ಳಿ ಮತ್ತು ನೀರನ್ನು ಹಾಕಿ ತೊಳೆದು ಸ್ನಾನ ಮುಗಿಸಿ. ಯಾವ ಕಾರಣಕ್ಕೂ ಸೋಪನ್ನು ಬಳಸಬೇಡಿ.

🔹ಕೇವಲ ಒಂದುಬಾರಿಯ ಸ್ನಾನದಿಂದಲೇ ಅದ್ಭುತ ಪರಿಣಾಮವನ್ನು ಕಾಣುವಿರಿ.

🔹ಈ ಪೇಸ್ಟ್ ನಿಂದ ಸ್ನಾನ ಮಾಡಿದರೆ, ಖಂಡಿತಾ ಸಹಜ ಕಾಂತಿ ನಿಮ್ಮದಾಗುತ್ತದೆ.

🔹ವಾಸ್ತವವಾಗಿ ಇಲ್ಲಿ ಕೆಲಸಮಾಡುವ ಶಕ್ತಿ ಎಳ್ಳೆಣ್ಣೆಯಲ್ಲಿ ಸ್ಥಿತವಾಗಿರುವ ಸೂರ್ಯನ ತೇಜಸ್ಸು, ಅದು ಎಣ್ಣೆಯ ಮುಖಾಂತರ ನಮ್ಮ ತ್ವಚೆಯನ್ನು ಮೃದುವಷ್ಟೇ ಅಲ್ಲ, ಕಾಂತಿಯಿಂದ ಸಹ ಇಡುತ್ತದೆ.

🔹ಕಡಲೆ ಹಿಟ್ಟು ಶರೀರದ ಕೊಳೆಯನ್ನು ನಿವಾರಿಸುವುದಕ್ಕೆ ಸಹಕಾರಿಯಾಗಿದೆ.

🔹ಬೇವು, ಅರಿಶಿಣ ಔಷಧಿಗಳಾಗಿ ತ್ವಚೆಯನ್ನು ರಕ್ಷಿಸುತ್ತವೆ.

ಹೀಗೆ ನಮ್ಮ ಕಾಂತಿಗೆ ಕಾರಣವಾಗುವ ಸೂರ್ಯನಿಗೆ ನಾವೆಷ್ಟು ಋಣಿಯಾಗಿರಬೇಕು❓

🌥ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ⛅ಹಾಗೆಯೇ 🌤ಸ್ವಾಸ್ಥ್ಯ ಸರ್ವರದ್ದೂ ಆಗಲಿ☀️

ಸಂಪರ್ಕಿಸಿ:📞
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!