ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-2..!

ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-2..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಮಾನವರ ಆರೋಗ್ಯದ ಮೇಲೆ ಸೂರ್ಯನ ಪ್ರಭಾವ-2

ಭೂತವೇಲ ಕಾಲ”ದ ಪರಿಚಯ
••••••••••••••••••••••••••••••
ಸೂರ್ಯನೇ ಕಾಲವನ್ನು ನಿರ್ಣಯಿಸುವ ಶಕ್ತಿ. ಅವನು ಬರಿಯ ನಕ್ಷತ್ರವಲ್ಲ, ನಮ್ಮ ಜೀವದ ಜೀವ. ಅವನ “ತೇಜಸ್ಸಿನಿಂದಲೇ ನಾವಿಲ್ಲಿ ಜೀವಂತವಾಗಿ ಇದ್ದೇವೆ.”

‘ಆದಿತ್ಯಹೃದಯ’ ಮಂತ್ರವನ್ನು ನಿತ್ಯ ಜಪಿಸಿನೋಡಿದರೆ, ಕೇವಲ 48 ದಿನಗಳಲ್ಲಿ ತೇಜಸ್ಸಿನ‌ ಪ್ರಭಾವ ಪರಿಚಯವಾಗುತ್ತದೆ.

“ತೇಜಸ್ಸು ಶಾಂತವಾದರೆ ಮೃತ್ಯು ; ತೇಜಸ್ಸು ಸ್ವಾಸ್ಥ್ಯದಿಂದ ಇರುವವರೆಗೆ ಅಮರ ಎನ್ನುತ್ತದೆ ಆಯುರ್ವೇದ”

ಈ ಶರೀರದಲ್ಲಿ ಸ್ಥಿತವಾದ ತಾಪಮಾನವೇ ತೇಜಸ್ಸು, ಅದನ್ನು ಕಳೆದುಕೊಂಡ ನಮ್ಮ ಈ ಬೃಹತ್ ಶವ(ಶರೀರ)ವನ್ನು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುವ ಜೀವಿಗಳು ಇಲ್ಲದಂತೆ ಮಾಡಿಬಿಡುತ್ತವೆ..!!!

ಭೂತವೇಲಕಾಲ ಯಾವುದು?

“ಸಂಜೆ 6 ರಿಂದ ರಾತ್ರಿ 9ರ ವರೆಗಿನ‌ಕಾಲವನ್ನು ಭೂತವೇಲಕಾಲ ಎಂದು ಕರೆಯಲಾಗಿದೆ.”

ಭೂತ= ಕಣ್ಣಿಗೆ ಕಾಣದ ಆದರೆ ಬೃಹತ್ತಾಗಿ ಪರಿಣಾಮವನ್ನು ಬೀರುವ ಶಕ್ತಿಗೆ ಭೂತ ಎನ್ನುತ್ತಾರೆ.

ಭೂತವೇಲಕಾಲ ಎಂದರೆ ಸೂಕ್ಷ್ಮ ಜೀವಿಗಳು ಅತ್ಯಂತ ಹೆಚ್ಚು ಕ್ರಿಯಾಶೀಲ ಮತ್ತು ಶಕ್ತಿಯುಕ್ತವಾಗಿ ಇರುವ ಕಾಲ. ನಿಶಾರಂಭಕಾಲ ಅಂದರೆ ರಾತ್ರಿ ಆರಂಭ ಕಾಲವಾದ ಸಂಜೆ 6ರ ನಂತರ ಇದು ಆರಂಭವಾಗುತ್ತದೆ.

ಸೂರ್ಯನ ತಾಪಮಾನಕ್ಕೆ ನಿಷ್ಕ್ರಿಯ ಅಥವಾ ಅಲ್ಪಕ್ರಿಯೆಗೆ ತುಳಿಯಲ್ಪಟ್ಟು ಸೂಕ್ಷ್ಮ ಜೀವಿಗಳು, ತಾಪಮಾನ ಇಳಿಯಲಾರಂಭಿಸಿದ್ದೇ ತಡ ಶೀಘ್ರ ಕ್ರಿಯಾಶೀಲವಾಗುತ್ತವೆ. ರಾತ್ರಿ ಒಂಭತ್ತರವರೆಗೆ ನಿರಂತರ ಏರುಗತಿಯಲ್ಲಿ ಸಾಗುತ್ತವೆ. ನಂತರ ತಾಪಮಾನ ಇಳಿಯುತ್ತಿದ್ದಂತೆ ಸಹಜವಾಗಿ ಇರುತ್ತವೆ. ಬೆಳಗಿನಜಾವ 3ಗಂಟೆಯ ನಂತರ ಮತ್ತೆ ನಿಷ್ಕ್ರಿಯೆಗೆ ತಳ್ಳಲ್ಪಡುತ್ತವೆ.

ಸಂಜೆ 6ಕ್ಕೆ ವೇಗ ಪಡೆದುಕೊಂಡ ಸೂಕ್ಷ್ಮ ಜೀವಿಗಳು, ನಮ್ಮ ಆಹಾರವನ್ನು, ಜಲವನ್ನು ಆಕ್ರಮಿಸುತ್ತವೆ. ಅದರ ಮುಖಾಂತರ ಶರೀರವನ್ನು ಸೇರುತ್ತವೆ.

ಪ್ರಶ್ನೆ ಉದ್ಭವಿಸಬಹುದು- ಮತ್ತೇಕೆ ದಿನವೂ ರೋಗ ಬರುವುದಿಲ್ಲ?
ಏಕಂದರೆ, ನಮ್ಮ ಒಳಗಿನ ತಾಪಮಾನಕ್ಕೆ ಅವು ನಿಷ್ಕ್ರಿಯೆಗೊಂಡಿರುತ್ತವೆ. ನಮ್ಮ ವಯಸ್ಸು ಸ್ವಲ್ಪ ಇಳಿಮುಖವಾದಂತೆ, ಅಂದರೆ 40ವರ್ಷ ದಾಟಿದ ನಂತರ ತೇಜಸ್ಸು ಕಡಿಮೆಯಾಗುತ್ತದೆ. ಹೊರಪ್ರಕೃತಿಯಲ್ಲಿ ಸಂಜೆಯಾದಂತೆ ಆಂತರಿಕ ಪ್ರಕೃತಿಯ ಸಂಜೆ ಆರಂಭವಾಗುತ್ತದೆ, ಆಗ ಇವುಗಳ ಉಪಟಳ ಆರಂಭವಾಗಿ ರೋಗಗಳನ್ನು ತರುತ್ತಲೇ ಸಾಗುತ್ತವೆ.

ಯಾವರೀತಿಯ ರೋಗ ಬರಬಹುದು?
ಈ ರೋಗಗಳನ್ನು ಸೋಂಕು ರೋಗ ಎಂದು ಪರಿಗಣಿಸುವ ಹಾಗಿಲ್ಲ, ಏಕೆಂದರೆ ಇವು “ಲಯ” ಕಾರಕ ಸ್ಥಾನದಲ್ಲಿ ನಿಂತು, ಈ ಶರೀರ ಯಾವ ದೌರ್ಬಲ್ಯದಿಂದ ಜನಿಸಿದೆಯೋ, ನಿಧಾನವಾಗಿ ಆ ಅವಯವದ ಕ್ರಿಯಾಗತಿಯನ್ನು ತಡೆಯುತ್ತವೆ. ಸಾಮಾನ್ಯವಾಗಿ ಜೀರ್ಣಶಕ್ತಿ ಕುಂದುವುದರಿಂದ ಆರಂಭವಾಗುತ್ತದೆ. ಯಾವುದೋ ಒಂದು ಅವಯವ ಕಡಿಮೆ‌ಕೆಲಸದಲ್ಲಿ ತೊಡಗುತ್ತದೆ, ನಿಧಾನವಾಗಿ ಸಹಾಯಕ ಅವಯವಗಳು ತೊಂದರೆಗೆ ಒಳಗಾಗುತ್ತವೆ.

ಉದಾಹರಣೆಗೆ:
ತೇಜಸ್ಸನ್ನು ಲೆಕ್ಕಿಸದೇ, ತಿನ್ನುವ ಪರಿಪಾಠ ನಮ್ಮಲ್ಲಿ ರೂಢಿಯಾಗಿದೆ. ಇದರಿಂದ ಯಕೃತ್ತು ಫ್ಯಾಟೀ ಲಿವರ್ ಎಂಬ ಕೊಬ್ಬನ್ನು ಶೇಖರಿಸಿಕೊಳ್ಳುವ ಸಂಕಷ್ಟಕ್ಕೆ ಗುರಿಯಾಗುತ್ತದೆ. ಅದರ ಸಹಾಯಕ ಅವಯಾವವಾದ ಪ್ಯಾಂಕ್ರಿಯಾಸ್ ಕೊಬ್ಬನ್ನು ನಿಯಂತ್ರಿಸುವ ಕೆಲಸಕ್ಕೆ ಕೈಹಾಕುತ್ತದೆ, ಆಗ ಬಾಯಾರಿಕೆ ಉಂಟಾಗುತ್ತದೆ, ಸೆಖೆ ಆರಂಭವಾಗುತ್ತದೆ. ಈ ಹಂತದಲ್ಲಿ ಎಣ್ಣೆ ಪದಾರ್ಥಗಳನ್ನು ನಿಲ್ಲಿಸಿದರೆ ಮರಳಿ ಎಲ್ಲವೂ ಸರಿಯಾಗುತ್ತದೆ, ಇಲ್ಲದೇ ಹೋದಲ್ಲಿ “ಮಧುಮೇಹ” ಕಟ್ಟಿಟ್ಟಬುತ್ತಿ.

ಏನು ಮಾಡಬೇಕು?

• ಸಂಜೆ 6ರ ನಂತರ ಬಾಯಿಗೆ ಏನನ್ನೂ ತುರುಕಬೇಡಿ.

• 40 ವಯಸ್ಸಿನ ನಂತರ ದಿನಕ್ಕೆ ಎರಡೇ ಊಟಕ್ಕೆ ಇಳಿಸಿಬಿಡಿ.

ಆಗ,
ನಿಮ್ಮ ಉತ್ಸಾಹ ಯೌವನದಂತೆ ಶಾಶ್ವತವಾಗಿ ಉಳಿದುಬಿಡುತ್ತದೆ. ಈ ದೇಹ ತ್ಯಜಿಸುವ ಸಮಯ ಬಂದಾಗಲೂ ಮನೋತ್ಸಾಹ ಕುಗ್ಗುವುದಿಲ್ಲ. ಧೈರ್ಯದಿಂದ ಪ್ರಾಣತ್ಯಾಗ ಮಾಡುತ್ತದೆ.

ಹೀಗೆ ರಾತ್ರಿ ಆಹಾರ ಸೇವಿಸದಂತೆ ಮತ್ತು ದಿನಕ್ಕೆ ಎರಡು ಬಾರಿ ಆಹಾರಸೇವನೆಯಿಂದ ನಮ್ಮ ಆಂತರಿಕ ಪ್ರಕೃತಿಯಲ್ಲಿ ಬೇಗ ಸಂಜೆಯಾಗದಂತೆ, ಅಂದರೆ ಅದು ಅನಿಚ್ಛಾ ವೇಗ ಪಡೆದುಕೊಳ್ಳುವುದನ್ನು ತಡೆಯಬಹುದು, ಆಗ ಸಂಜೆಯಾಗುವುದು 60ಕ್ಕೆ ಏರುತ್ತದೆ. 60ರ ನಂತರ ಮುಪ್ಪು ಆರಂಭವಾಗಬೇಕು, ದುರಾದೃಷ್ಟವಶಾತ್ ಈಗ 30ಕ್ಕೇ ಮುಪ್ಪು ಆರಂಭವಾಗುವಂತೆ ತೇಜಸ್ಸನ್ನೂ ಓಜಸ್ಸನ್ನೂ ಕಳೆದುಕೊಳ್ಳುತ್ತಿದ್ದೇವೆ.
•••••••••••••••••••••••••••••••••••••••••••••••

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
🌼🍃🌼
ಹಾಗೆಯೇ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌼🍃🌼

“ದಿನಕ್ಕೆರಡು ಊಟ-ಆರೋಗ್ಯದ ಪಾಠ”

ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!