ಮಕ್ಕಳ ಬೆಳವಣಿಗೆಯಲ್ಲಿ ನಿದ್ರೆಯ ಪಾತ್ರ- ಭಾಗ-3

ಮಕ್ಕಳ ಬೆಳವಣಿಗೆಯಲ್ಲಿ ನಿದ್ರೆಯ ಪಾತ್ರ- ಭಾಗ-3

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಮಕ್ಕಳ ಬೆಳವಣಿಗೆಯಲ್ಲಿ ನಿದ್ರೆಯ ಪಾತ್ರ
ಭಾಗ-3

ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಗಳು ಮತ್ತು ಇದರೊಟ್ಟಿಗೆ ಸಾಮಾಜಿಕ ಸಾಮರಸ್ಯಗಳ ಬೆಳವಣಿಗೆಗೆ ಸರಿಯಾದ ನಿದ್ದೆ ಬಹು ಮುಖ್ಯ.
•••••••••••••••••••••••••••••••••••••••••••••••

ಸರಿಯಾದ ನಿದ್ದೆ ಎಂದರೇನು?

• ರಾತ್ರಿ 9ರ ಒಳಗೆ ಮಲಗಿ 11ರ ವರೆಗೆ ಒಂದಿಂಚೂ ಅಲುಗಾಡದೇ ಮಲಗುವ ನಿದ್ದೆ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನೂ ಮತ್ತು ಕಷ್ಟಗಳನ್ನು ಸಹಿಸುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

• ರಾತ್ರಿ 11ರ ನಂತರ ಮುಂದುವರಿವ ನಿದ್ದೆ ಶಾರೀರಿಕ ಶ್ರಮವನ್ನು ಪರಿಹರಿಸುತ್ತದೆ.

• ಸರಿಯಾದ ನಿದ್ದೆ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ. ಮಕ್ಕಳು ಚನ್ನಾಗಿ ತಿನ್ನಬೇಕೆಂದು ಬಯಸುವ ಪೋಷಕರು, ಅವರನ್ನು 9 ಗಂಟೆಯೊಳಗೆ ಗಾಢ ನಿದ್ದೆಗೆ ಜಾರುವಂತೆ ನೋಡಿಕೊಳ್ಳಿ.

• ದಿನವೂ ತಡರಾತ್ರಿ ಅಥವಾ 11ರ ನಂತರ ನಿದ್ರಿಸುವ ರೂಢಿಯು ಶರೀರವನ್ನು ಬಲಪಡಿಸಬಲ್ಲದು ಆದರೆ ಶಾಂತ‌ಮನಸ್ಸನ್ನು ದೃಢ, ಸ್ಥಿಮಿತ ನಿರ್ಧಾರವನ್ನು ತೆಗೆದುಕೊಳ್ಳುವ ಮೆದುಳಿನ ಸಾಮರ್ಥ್ಯವನ್ನು ಕ್ಷೀಣಗೊಳಿಸುತ್ತದೆ.

• ರಾತ್ರಿ 9 ಗಂಟೆಯ ಒಳಗೆ ನಿದ್ರಿಸುವ ರೂಢಿ ಇರುವ ಮಕ್ಕಳನ್ನು ರಾತ್ರಿ 11ರ ನಂತರ ಯಾವಾಗ ಎಬ್ಬಿಸಿದರೂ ಸಹ ಅವರು ಗಲಿಬಿಲಿಗೊಳ್ಳುವುದಿಲ್ಲ, ಕೇವಲ ಶಾರೀರಿಕ ಆಯಾಸ ತೋರಿಸುತ್ತಾರೆ.

• ಅದೇ ತಡರಾತ್ರಿ ಮಲಗುವ ಮಕ್ಕಳನ್ನು ಬೆಳಗಿನಜಾವ ಎಬ್ಬಿಸಿದರೂ ಗಲಿಬಿಲಿಗೊಳ್ಳುತ್ತಾರೆ ಮತ್ತು ಪೂರ್ಣ ವಾಸ್ತವಕ್ಕೆ ಬರಲು ಕೆಲ ಸಮಯ ತೆಗೆದುಕೊಳ್ಳುತ್ತಾರೆ. ಹಾಗೆಯೇ ಶಾರೀರಿಕ ಆಯಾಸವನ್ನೂ ತೋರುತ್ತಾರೆ.

ಯಾವುದು ಅಸಹಜ ಗಾಢ ನಿದ್ರೆ?
ನಮ್ಮ ಮಗು ಎಚ್ಚರಗೊಳ್ಳುವುದೇ ಇಲ್ಲ, ಬಹಳ ಗಾಢವಾಗಿ ನಿದ್ರಿಸುತ್ತಾನೆ ಎನ್ನುವವರು, ಅದು ಸಹಜ ಗಾಢ ನಿದ್ರೆಯೇ ಎಂದೊಮ್ಮೆ ಪರೀಕ್ಷಿಸಿಕೊಳ್ಳಿ. ಕೆಳಗಿನ ಅಂಶಗಳನ್ನೊಮ್ಮೆ ಗಮನಿಸಿ

• ರಾತ್ರಿ ಅತಿಪ್ರಮಾಣದ ಆಹಾರ ಸೇವಿಸಿ, ರಾತ್ರಿ ಮೊಸರು, ಸಿಹಿ, ಎಣ್ಣೆ ಪದಾರ್ಥಗಳನ್ನು ಸೇವಿಸಿ ಮತ್ತಿನಿಂದ ಮಾಡುವ ನಿದ್ದೆ ನಿದ್ದೆಯೇ ಅಲ್ಲ. ಮೆದುಳಿಗೆ ವಿಶ್ರಾಂತಿಯ ಬದಲು, ಮೆದುಳಿಗೆ ಮುಸುಕುಹಾಕಿ, ಜೀರ್ಣಕ್ರಿಯೆಗೆಂದು ಕರುಳಿಗೆ ರಕ್ತಪರಿಚಲನೆ ಹೆಚ್ಚುವುದು ಮತ್ತು ಯಕೃತ್ತಿನಲ್ಲಿ ಎಂಜೈಮ್ ಉತ್ಪಾದನೆ ಮೇಲೆ ಒತ್ತಡ ಹೆಚ್ಚುವುದು.

• ಮಕ್ಕಳ ಸಹಜ ನಿದ್ರೆಗೆ ಮೊಬೈಲ್, ಟಿವಿ ವೀಕ್ಷಣೆ ಭಂಗ ತರುತ್ತವೆ.‌ಅವುಗಳ ಪ್ರಖರ ಎಲ್.ಇ.ಡಿ. ಬೆಳಕು ಕಣ್ಣಿನಲ್ಲಿನ ಪಿತ್ತವನ್ನು ಉದ್ದೀಪನಗೊಳಿಸಿ ನಿದ್ದೆಯನ್ನು ಅಸಹಜತೆಯ ಆಯಾಸದೆಡೆಗೆ ನೂಕುತ್ತವೆ.

ಒಟ್ಟಾರೆ ನಿದ್ದೆಯು ಮಾನವನ ಜೀವನದ ಬಹುಮುಖ್ಯ ಅಂಶ, ಮಕ್ಕಳ ಬೆಳವಣಿಗೆಗಂತೂ ಅದು ಅತ್ಯಗತ್ಯ

➡️ “ಮಕ್ಕಳ ಆರೋಗ್ಯ” ನಾಳಿನ ಸಂಚಿಕೆಯಲ್ಲಿ ಮುಂದುವರಿಯುವುದು….

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
🌼🍃🌼
ಹಾಗೆಯೇ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌼🍃🌼

ಧನ್ಯವಾದಗಳು🙏
•••••••••••••••••••••••••••••••••••••••••
ಮಕ್ಕಳ ಸರ್ವಾಂಗೀಣ ಬೆಳಣಿಗೆಗೆ ಮತ್ತು ಅವರ ರೋಗನಿರೋಧಕ ಶಕ್ತಿಗಾಗಿ-
“ಗರ್ಭಿಣಿ ಸ್ವರ್ಣಯೋಜನೆ” ಹಾಗೂ
“ಮಕ್ಕಳ ಸ್ವರ್ಣಬಿಂದು ಯೋಜನೆ” ಅಳವಡಿಸಿಕೊಳ್ಳಿ.

ಸಂಪರ್ಕಿಸಿ:
📞
9148702645
9606616165

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!