ಶಿವಮೊಗ್ಗ :ಎರಡು ವರ್ಷದಲ್ಲಿ ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ: ಬಿ.ಎಸ್.ವೈ..!

ಶಿವಮೊಗ್ಗ :ಎರಡು ವರ್ಷದಲ್ಲಿ ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ: ಬಿ.ಎಸ್.ವೈ..!

ಶಿವಮೊಗ್ಗ ಜಿಲ್ಲೆಯ ತಮ್ಮ ಸ್ವಕ್ಷೇತ್ರದಲ್ಲಿ ಕಸಬಾ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ ಅ.21 ರಂದು ನೆರೆ ಸಮೀಕ್ಷೆ ನಡೆಸುವುದಾಗಿ ತಿಳಿಸಿದ್ದರು.

ಉತ್ತರ ಕರ್ನಾಟಕ ಅನೇಕ ಜಿಲ್ಲೆಗಳು ಮೆಳೆಯಿಂದ ನೆರೆ ಹಾವಳಿ ಎದುರಾಗಿದ್ದು ಅ.21 ರಂದು ನೆರೆ ಭಾಗಕ್ಕೆ ವೈಮಾನಿಕ ನಡೆಸಲಿದ್ದೆನೆ ಎಂದರು.

ಕೋವಿಡ್ ಮತ್ತು ಇತರೆ ಕಾರಣಕ್ಕಾಗಿ ಇಷ್ಟು ದಿನ ಬೆಂಗಳೂರು ಬಿಟ್ಟು ಎಲ್ಲೂ ಹೊರಗೆ ಹೋಗಿರಲಿಲ್ಲ ಇಂದು ತಮ್ಮ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ್ದೇನೆ ಎಂದರು.

ಸುಮಾರು 198 ಕೋಟಿ ರೂ ವೆಚ್ಚದಲ್ಲಿ ಬಹು ವರ್ಷದ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆನೆ ಶಿಕಾರಿಪುರ ಮತ್ತು ಸೊರಬದ ನೀರಾವರಿ ಯೋಜನೆ ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ.

ಶಿವಮೊಗ್ಗದ ಎಲ್ಲಾ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಅಭಿವೃದ್ಧಿಗೂ ಬದ್ಧವಾಗಿದ್ದು, ಇದು ಕೂಡ ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ.‌ ಕೋವಿಡ್ -19 ಮತ್ತು ಪ್ರವಾಹದ ನಡುವೆಯೂ ಅಭಿವೃದ್ಧಿ ನಿಲ್ಲಬಾರದು ಎಂಬುದು ನನ್ನ ಅನಿಸಿಕೆ ಹೀಗಾಗಿ ಎಲ್ಲರ ಸಹಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು

ಮುಂದಿನ 2 ವರ್ಷದಲ್ಲಿ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಬಾಕಿ ಉಳಿದಿರಬಾರದು ಎಂದರು.

ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಪಣತೊಟ್ಟಿದ್ದೆನೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ ರೈತರ ಬದುಕು ಬಂಗಾರವಾಗಬೇಕಿದೆ ಎಂದರು.

Admin

Leave a Reply

Your email address will not be published. Required fields are marked *

error: Content is protected !!