ಮೆಣಸಿನಕಾಯಿ ಚಟ್ನಿ ಅನಾರೋಗ್ಯಕಾ(ಖಾ)ರಕ🔥..!

ಮೆಣಸಿನಕಾಯಿ ಚಟ್ನಿ ಅನಾರೋಗ್ಯಕಾ(ಖಾ)ರಕ🔥..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಮೆಣಸಿನಕಾಯಿ ಚಟ್ನಿ ಅನಾರೋಗ್ಯಕಾ(ಖಾ)ರಕ🔥..!

ಅಡುಗೆಗೆ ಬಳಸುವ ಮೆಣಸಿನಕಾಯಿ ಕೇವಲ ರುಚಿಗಷ್ಟೇ ಅಲ್ಲ ಆಹಾರ ಜೀರ್ಣವಾಗಲು ಅತ್ಯಗತ್ಯವಾಗಿ ಬೇಕು.
ಆದರೆ, ಅದರ ಪ್ರಮಾಣ ಒಟ್ಟು ಆಹಾರದ ಶೇಕಡ 0.5 ಅನ್ನು ಮೀರಬಾರದು. ಹಾಗಾಗಿ, ಆಹಾರ ತಯಾರಿಕೆಯಲ್ಲಿ ಬಳಸುವ ಮೆಣಸಿನಕಾಯಿ ಆರೋಗ್ಯಕರವಾದರೂ ಕೇವಲ ಅದೊಂದನ್ನೇ ಪ್ರಧಾನ ವಸ್ತುವನ್ನಾಗಿ ಬಳಸುವ ಹಸಿರು ಅಥವಾ ಕೆಂಪು ಮೆಣಸಿನಕಾಯಿಯ ಚಟ್ನಿಗಳು ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ನಿತ್ಯವೂ ಈ ರೀತಿಯ ಚಟ್ನಿ ಸೇವಿಸುವುದಂತೂ ಮಾರಕವೇ ಹೌದು.

ನಾವು ಕಂಡಂತೆ ಒಂದು ಕುಟುಂಬದ ಆರೋಗ್ಯದ ಇತಿಹಾಸವನ್ನು ಉದಾಹರಣೆಗೆ ಇಟ್ಟುಕೊಂಡು ಈ ಸಂಚಿಕೆಯನ್ನು ಮುಂದುವರೆಸುತ್ತೇವೆ.
➡️ಒಂದು ಆಟೋಇಮ್ಯುನ್ ಅವಸ್ಥೆ , ಅದು ದೀರ್ಘಕಾಲದ ಚರ್ಮದ ಅಲರ್ಜಿ ಮತ್ತು ನೊರೆಯುಳ್ಳ ಮೂತ್ರದ ವಿಕಾರವನ್ನು ಹೊಂದಿದ್ದು ಇದು ಒಂದು ಕುಟುಂಬದ ಹೆಚ್ಚಿನ ಸದಸ್ಯರಿಗೆ ಕಾಣಿಸಿಕೊಂಡಿದ್ದು ಅದರಲ್ಲೊಬ್ಬರು ಆಯುರ್ವೇದ ಚಿಕಿತ್ಸೆಯನ್ನು ಆರಂಭಿಸಿದರು ಅವರೀಗ ಪೂರ್ಣ ಗುಣಮುಖರಾಗಿ ಸ್ಟಿರೊಯ್ಡ್ ಬಳಕೆಯನ್ನು ನಿಲ್ಲಿಸಿದ್ದಾರೆ. ಇನ್ನೊಬ್ಬರು ಕಡಿಮೆಯಾದ ಚರ್ಮದ ಅಲರ್ಜಿಗಾಗಿ ಕೆಲವು ತಿಂಗಳುಗಳ ಕಾಲ ನಿತ್ಯವೂ ಸ್ಟಿರೊಯ್ಡ್ ಮಾತ್ರೆ ಬಳಸುತ್ತಾ ಬಂದರು. ಅವರೀಗ ಇನ್ಸುಲಿನ್ ಅವಲಂಭಿತ ಮಧುಮೇಹವನ್ನು ಹೊಂದಿದ್ದಾರೆ.

ಇತಿಹಾಸವನ್ನು ನೋಡಲಾಗಿ ಅವರ ತಾಯಿ ತನ ಬಾಲ್ಯದಿಂದಲೂ ಮೆಣಸಿನಕಾಯಿಯ ಚಟ್ನಿಯನ್ನು ಧಾರಾಳವಾಗಿ ಬಳಸಿದ್ದುದು ಮತ್ತು ಈಗಲೂ ಬಳಸುತ್ತಿರುವುದು ಕಂಡುಬಂದಿತು. ಅವರಿಗೂ ಸಹ ಸ್ಟಿರೊಯ್ಡ್ ಬಳಸಬೇಕಾದ ತೊಂದರೆಗಳಿದ್ದವು. ಇಷ್ಟು ವಿವರ ಸಾಕು.

👇ಮುಂದೆ ಮೆಣಸಿನಕಾಯಿ ಚಟ್ನಿಯಿಂದ ವಾಸ್ತವದಲ್ಲಿ ಆಗುವ ಆಂತರಿಕ ಬದಲಾವಣೆಯನ್ನು ನೋಡೋಣ.

“ಕಟುರಸ” ಪ್ರಧಾನವಾದ ಮೆಣಸಿನಕಾಯಿ ಉಪ್ಪಿನಂತೆಯೇ ಆಹಾರವನ್ನು ತುಂಡರಿಸುತ್ತದೆ ಮತ್ತು ಶರೀರದಲ್ಲಿ ಅಗ್ನಿಯನ್ನು ವೃದ್ಧಿಮಾಡುತ್ತದೆ. ಆದರೆ ಸ್ವತಃ ತಾನು ಶಕ್ತಿಯನ್ನು ಕೊಡುವುದಿಲ್ಲ. ಬದಲಾಗಿ ಜೀವಕೋಶಗಳೊಳಗಿನ ಶಕ್ತಿಯನ್ನು ನಿರಂತರ ಬಿಡುಗಡೆ ಮಾಡುತ್ತದೆ. ಹಾಗಾಗಿ ಉಪ್ಪು ಮತ್ತು ಖಾರವನ್ನು ಪ್ರಧಾನವಾಗಿ ಸೇವಿಸುವ ಜನರು ಹೆಚ್ಚಿನ ಚಟುವಟಿಕೆಯಿಂದ ಕೂಡಿರುತ್ತಾರೆ. ಆದರೆ ಇಂತವರಿಗೆ ದೀರ್ಘಕಾಲದವರೆಗೆ ಚಟುವಟಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಆಗುವುದಿಲ್ಲ. ಏಕೆಂದರೆ, ಜೀವಕೋಶಗಳ ಶಕ್ತಿಯು ವ್ಯಯಿಸುತ್ತ ಮತ್ತು ಸಂಗ್ರಹಣೆ ಕಡಿಮೆಯಾಗುತ್ತಾ ಬರುತ್ತದೆ.

40-45 ವರ್ಷಗಳಲ್ಲೇ 60-70 ವರ್ಷಗಳನ್ನು ದಾಟಿದವವರಂತೆ ಬಹಳಷ್ಟು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅಥವಾ, ಮರಳಿ ಸರಿಪಡಿಸಲಾಗದ ಕಾಯಿಲೆಗಳಿಗೆ ತುತ್ತಾಗುತ್ತಾರೆ.
ಆಂತರಿಕವಾಗಿ ಸರ್ವಶರೀರವನ್ನು ಪೋಷಣೆಮಾಡುವ ಆದ್ಯ ಧಾತುವಾದ “ರಸ”ವು ಪೋಷಣೆಯ ಭಾವವನ್ನು ಅತ್ಯಂತ ಕ್ಷೀಣಗೊಳಿಸಿಕೊಳ್ಳುತ್ತದೆ. ಏಕೆಂದರೆ, ಆಹಾರದಲ್ಲಿನ ಕಟು(ಖಾರ) ಮತ್ತು ಲವಣ ರಸಗಳು ರಸಧಾತುವನ್ನು ಇನ್ನಿಲ್ಲದಂತೆ ಒಣಗಿಸುತ್ತಾ ಸಾಗುತ್ತವೆ.

ಈ ರಸಧಾತುವು ಮನಸ್ಸನ್ನೂ ಸಹ ಪ್ರಸನ್ನತೆಯಿಂದ ಇಡುವ ಕೆಲಸದಿಂದಲೂ ದೂರಸರಿಯುತ್ತದೆ. ಹಾಗಾಗಿ ವ್ಯಕ್ತಿಯು ಮಾನಸಿಕವಾಗಿಯೂ ಬಳಲುವ ಅಥವಾ ಕ್ರುದ್ಧರಾಗುವುದು ಸಾಮಾನ್ಯವಾಗಿ ಕಾಣುತ್ತೇವೆ. ಇವರನ್ನು ಸರ್ವರೀತಿಯಿಂದಲೂ ಅಶಾಂತತೆ ಕಾಡುತ್ತದೆ.

👇ಏನು ಮಾಡಬಹುದು?
◆ಖಾರ , ಉಪ್ಪನ್ನು ತಿನ್ನುವ ಅಭ್ಯಾಸ ಇರುವವರು ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳಲೇ ಬೇಕು. ಅದಕ್ಕೆ ಪರಿಹಾರವಿಲ್ಲ.
◆ಮೆಣಸಿನಕಾಯಿ ಚಟ್ನಿ ತಿನ್ನುವ ಅಭ್ಯಾಸವುಳ್ಳವರು ಅದನ್ನು ಬಿಟ್ಟು ಆಡುಗೆಯಲ್ಲೇ ಸ್ವಲ್ಪ ಹೆಚ್ಚಿನ ಖಾರವನ್ನು ಬಳಸಬಹುದಾದರೂ ಅದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಬಳಸಬೇಕು. ಇದರಿಂದ, ರೂಕ್ಷತೆ ನಿವಾರಣೆಯಾಗಿ ಜೀವಕೋಶಗಳಿಗೆ ಬಲ ಸಿಗುತ್ತದೆ.

ಶಾರೀರಿಕ ಚಟುವಟಿಕೆಗೆ ಖಾರ ಬೇಕೇಬೇಕು. ಆದರೆ, ಅದಕ್ಕೆ ಶಕ್ತಿಕೊಡಲು
ಸಿಹಿಯ ಅಂಶ( ಅಕ್ಕಿ, ರಾಗಿ, ಜೋಳ, ಆಗಾಗ ಬೆಲ್ಲ ),
ಸ್ನಿಗ್ಧಅಂಶ ( ಹಾಲು, ತುಪ್ಪ, ರೀಫೈನ್ಡ್ ಮಾಡದ ಶುದ್ಧ ಎಣ್ಣೆಗಳು),
ಮನಸ್ಸಿನ ನೆಮ್ಮದಿ
ಮತ್ತು
ರಾತ್ರಿಯ ನಿದ್ದೆ ಅನಿವಾರ್ಯ ಅಗತ್ಯ.

🌺ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌺
                   ಹಾಗೆಯೇ 
   🌺ಸ್ವಾಸ್ಥ್ಯ ಸರ್ವರದ್ದೂ ಆಗಲಿ🌺

••••••••••••••••••••••••••••••••••••••••••
ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!