ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-38..!

ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-38..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-38

38) ರಾಸ್ನಾ: (Alpinia calacarata)

★ ರಾಸ್ನಾಂ ಗುಡೂಚಿ ಏರಂಡಂ—- ಮಹೌಷಧಮ್ ಪಿಬೇತ್ “ಸರ್ವಾಂಗೇ” “ವಾತೇ-ಸಾಮೇ” “ಸಂಧಿ-ಅಸ್ಥಿ-ಮಜ್ಜಗೇ”
“ಸರ್ವಾಂಗಜಂ” ಆಡ್ಯ ಶೇಷಂ “ಅಸೃಕ್-ವಾತ” ಭವಂ ವಿಕಾರಂ ||
ವೃದ್ಧ ಮಾಧವ ಸಂಹಿತೆ

ಮೇಲಿನ ಶ್ಲೋಕದಲ್ಲಿ ಹೇಳಿರುವ ರಾಸ್ನಾದ ಗುಣವಿಶೇಷವೇ ಈ ದ್ರವ್ಯವನ್ನು ಕಷಾಯ ಚೂರ್ಣದಲ್ಲಿ ಸೇರಿಸಲು ಪ್ರೇರಣೆಯಾಯಿತು.

ಶ್ಲೋಕದಲ್ಲಿ ಹೇಳಿರುವ ಕೆಲವು ಮುಖ್ಯ ಶಬ್ಧಗಳನ್ನು ನೋಡಿದರೆ ಕೊರೋನಾ ಸೋಂಕಿನಲ್ಲಿ ಉಂಟಾಗುತ್ತಿರುವ ಸರ್ವಾಂಗ ಶೂಲವನ್ನು, ಸಂಧಿಶೂಲವನ್ನು, ರಕ್ತನಾಳಗಳಲ್ಲಿ ಕಟ್ಟಿಕೊಳ್ಳುತ್ತಿರುವ ಗಟ್ಟಿ ಪದಾರ್ಥವಾದ ಆಮವನ್ನು ಹೊಡೆದೋಡಿಸುವಲ್ಲಿ ಅತ್ಯಂತ ಸಹಾಯಕವಾಗಿದೆ.

ಪರೀಕ್ಷಿಸಿ ನೋಡಲಾಗಿ ಅತ್ಯುತ್ತಮ ಫಲಿತಾಂಶವನ್ನೂ ಕೊಟ್ಟಿದೆ.

ಕೊರೋನಾ ಸೊಂಕಿನಲ್ಲಿ ನಮ್ಮ ರೋಗನಿರೋಧಕ ಶಕ್ತಿಯ ಪ್ರತಿಕ್ರಿಯೆ ಹೇಗಿದೆ ಎಂದರೆ, ಸೋಂಕಿಗೆ ವಿರುದ್ಧವಾಗಿ ಮತ್ತು ಜೀವಕೋಶಗಳ ಹಾನಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಲು ರಕ್ತವು ಗಡುಸಾಗುತ್ತಾ ಸಾಗುತ್ತದೆ. ಇದನ್ನು ESR, CRP, D-dimer, LDH, Ferritin ಗಳ ಮುಖಾಂತರ ಆಧುನಿಕ ವಿಜ್ಞಾನ ಪತ್ತೆಹಚ್ಚುತ್ತಿದೆ. ದುರಾದೃಷ್ಟಕ್ಕೆ ಅದನ್ನು ಸಮರ್ಥವಾಗಿ ಚಿಕಿತ್ಸಿಸುವ ರಾಸ್ನಾ-ಏರಂಡಗಳಂತಹ ದ್ರವ್ಯಗಳನ್ನು ಪರಿಗಣಿಸುತ್ತಲೇ ಇಲ್ಲ❗

🔽”ರಾಸ್ನಾ” ದ್ರವ್ಯದ ಕಾರ್ಮುಖತ:

🔻ಇದು ಮಜ್ಜೆಯಿಂದ ಉಂಟಾಗುವ ಊತವನ್ನು ನಿವಾರಿಸುತ್ತದೆ, ಅಂದರೆ, Ferritin ಹೆಚ್ಚಾಗುತ್ತಿರುವುದನ್ನು ತಡೆಯುತ್ತದೆ.

🔻 ಇದು ರಕ್ತಗಡುಸಾಗುವಿಕೆಯನ್ನು ನಿವಾರಿಸುತ್ತದೆ. ಅಂದರೆ, ESR, D-Dimer ಗಳ ಹೆಚ್ಚುವಿಕೆಯನ್ನು ತಡೆಯುತ್ತದೆ.

🔻 ರಾಸ್ನಾವು ಶ್ರೇಷ್ಠ ರಕ್ತಜ ಊತ ನಿವಾರಕವಾಗಿದೆ. ಅಂದರೆ, ಪ್ಲಾಸ್ಮಾದಲ್ಲಿ ಉಂಟಾಗುವ ಸಾಂದ್ರತೆಯನ್ನು ಮತ್ತು ಶರೀರದ ಇತರ ಅವಯವಗಳಲ್ಲಿ ಉಂಟಾಗುವ ಊತವನ್ನು ನಿವಾರಿಸುತ್ತದೆ. ಹಾಗಾಗಿ, CRP ನಿಯಂತ್ರಣಕ್ಕೆ ಬರುತ್ತದೆ.

🔻 ರಾಸ್ನಾವು ಸಾಮದೋಷಗಳನ್ನು (ಒಂದಕ್ಕೊಂದು ಪ್ರತ್ಯೇಕಗೊಳ್ಳದ, ಅಂಟಿಕೊಂಡ ನಿಸ್ತೇಜ ಅಥವಾ ಜಡತ್ವವನ್ನು ತೋರಿಸುವ ರಕ್ತದ ಅಂಶ) ಸಮರ್ಥವಾಗಿ ಒಡೆದು ನಿರಾಮ ಸ್ಥಿತಿಗೆ ತರುತ್ತದೆ. ಹಾಗಾಗಿ, LDH ನಿಯಂತ್ರಣಕ್ಕೆ ಬರುತ್ತದೆ.

🔻 ಸರ್ವಾಂಗ ಸ್ಥಿತ ಮಾಂಸಖಂಡಗಳಲ್ಲಿನ ಊತ ಮತ್ತು ವಾಯುವನ್ನು ನಿವಾರಿಸುವುದರಿಂದ ಈ ಸೋಂಕಿನಲ್ಲಿ ಬರುವ ಅತೀವ ಮೈ ಕೈ ನೋವನ್ನು ತಡೆಯುತ್ತದೆ.

🔻 ಅಸ್ಥಿ ಸಂಧಿಗಳಲ್ಲಿನ ಆಮದೋಷವನ್ನು, ರಕ್ತದೋಷವನ್ನು ನಿಭಾಯಿಸುವ ಕಾರಣ ರಾಸ್ನಾವು ಸಂಧು ಕೀಲುಗಳ ಊತ ನೋವುಗಳನ್ನು ನಿವಾರಿಸುತ್ತದೆ.

ಈ ಮೂಲಕ ಮುಂದೆ ಒಂದೆರೆಡು ವರ್ಷಗಳ ಕಾಲ ನಮ್ಮನ್ನು ಕಾಡಬಹುದಾದ ಸಂಧು-ಕೀಲು ನೋವುಗಳಿಂದ ಪಾರುಮಾಡುತ್ತದೆ.

ಇಂತಹ ಶ್ರೇಷ್ಠ ದ್ರವ್ಯವನ್ನು ಮರೆತಿರುವುದು ನಮ್ಮ ದುರಾದೃಷ್ಟವಲ್ಲವೇ❓❓

🔽”ರಾಸ್ನಾ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.google.com/url?sa=t&source=web&rct=j&url=https://www.researchgate.net/publication/317542750_PROBABLE_PHARMACOLOGY_OF_RASNA_SAPTAK_KWATH_IN_AMAVATA_RHEUMATOID_ARTHRITIS_A_REVIEW&ved=2ahUKEwjHhoXRrJjsAhVy7XMBHRlRCEsQFjAAegQIDBAC&usg=AOvVaw3dzcGvGbjos_V5rpt7DkF_

ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!