ಕಾಂತಿಯುತ ತ್ವಚೆ-ಕೇಶದ ರಹಸ್ಯ 🔐❓

ಕಾಂತಿಯುತ ತ್ವಚೆ-ಕೇಶದ ರಹಸ್ಯ 🔐❓

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಕಾಂತಿಯುತ ತ್ವಚೆ-ಕೇಶದ ರಹಸ್ಯ 🔐 ❓

ಕಾಂತಿಯುತ ಶರೀರ ಯಾರಿಗೆ ಬೇಡ‼️❔

ಅದಕ್ಕಾಗಿ ದೊಡ್ಡ ದೊಡ್ಡ ಕಂಪನಿಗಳನ್ನು ನಡೆಸುವಷ್ಟು ಹಣವನ್ನು ವಿನಿಯೋಗಿಸುತ್ತಿದ್ದೇವೆ. ನಿಜವಾದ ಮತ್ತು ಶಾಶ್ವತವಾದ ತ್ವಚೆಯ ಕಾಂತಿಗೆ ಮೂಲ ಕಾರಣ ಎಲ್ಲಿದೆ ನೋಡೋಣ.

ಏಳು ಪದರಗಳ ನಮ್ಮ ಚರ್ಮವು ಕಾಂತಿಯನ್ನು ಹೊರಸೂಸಲು ಕಾರಣವಾಗುವ ಚರ್ಮದ ಪದರಕ್ಕೆ “ರೋಹಿಣಿ ತ್ವಚೆ” ಎಂದು ಹೆಸರು. ಇದರ ಬಗ್ಗೆ 2020 ರ ಜನವರಿಯಲ್ಲಿ ಸ್ವಲ್ಪ ಮಾಹಿತಿಯನ್ನು ನೋಡಿದ್ದೀರಿ, ಇಂದು ರೋಹಿಣಿ ತ್ವಚೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಬೇಕಾಗುವ ಆಹಾರ ವಿಹಾರ ಉಪಚಾರಗಳನ್ನು ನೋಡೋಣ.

🔹ರೋಹಿಣಿ ತ್ವಚೆಯ ಆರೋಗ್ಯದ ಮೇಲೆ ನಮ್ಮ ಚರ್ಮದ ಬಣ್ಣ , ಕಾಂತಿ , ಬಲ ಮತ್ತು ಕೂದಲುಗಳ ಆರೋಗ್ಯ ಅವಲಂಬಿತವಾಗಿರುತ್ತದೆ.
ಹಾಗಾಗಿ, ಈ ತ್ವಚಾ ಪದರದ ಆರೋಗ್ಯಕ್ಕೆ ಬೇಕಾದ ಉಪಾಯಗಳನ್ನು ನೋಡೋಣ:

🔹 ನಮ್ಮ ರಕ್ತ ಮತ್ತು ರೋಹಿಣಿ ತ್ವಚಾದಲ್ಲಿರುವ ರಕ್ತನಾಳಗಳೇ ಸಪ್ತ ತ್ವಚೆಗಳ ಪೋಷಣೆ ಮತ್ತು ಆರೋಗ್ಯವನ್ನು ನೋಡಿಕೊಳ್ಳುತ್ತವೆ.
ಜಗತ್ತಿನ ಎಲ್ಲಾ ವಸ್ತುಗಳ ಬಣ್ಣಕ್ಕೆ ಕಾರಣವಾಗುವ ಸೂರ್ಯನ ತೇಜಸ್ಸು ನಮ್ಮ ಶರೀರದಲ್ಲಿ ರಕ್ತದ ರೂಪದಲ್ಲಿ ಇದೆ. ರಕ್ತವೇ ಈ ಶರೀರದ ಸೂರ್ಯ. ರಕ್ತ ಬಲವಾಗಿದ್ದರೆ ವ್ಯಕ್ತಿಯು ಕಾಂತಿಯುತವಾಗಿಯೂ, ಅದು ದುರ್ಬಲವಾಗಿದ್ದರೆ ಕಾಂತಿಹೀನವಾಗಿ ಕಾಣುತ್ತಾನೆ.

🔹ರಕ್ತವು ಪಿತ್ತದ ಆರೋಗ್ಯದ ಮೇಲೆ ಅವಲಂಬಿತವಾಗಿದೆ, ಅಂದರೆ, ಶುದ್ಧ ಪಿತ್ತ ಉತ್ಪತ್ತಿಯಾದರೆ ಕಾಂತಿಯೂ ಮತ್ತು ಅಶುದ್ಧ ಪಿತ್ತ ಉತ್ಪತ್ತಿಯಾದರೆ ತೇಜೋ ಹೀನತೆಯು ಕಂಡುಬರುತ್ತದೆ. ಹಾಗಾಗಿ,
ಪಿತ್ತ ದೋಷವನ್ನು ಬಲಪಡಿಸುವ ಮತ್ತು ಅದರ ವಿಕೃತಿಯನ್ನು ನಿಯಂತ್ರಿಸುವ ಆಹಾರಗಳನ್ನು ಸೇವಿಸಿ.

🔹ಕ್ಷೀರವು ಪಿತ್ತ ದೋಷದ ವಿಕೃತಿಯನ್ನು ನಿವಾರಿಸುವ ಶ್ರೇಷ್ಠ ಆಹಾರ ಮತ್ತು ಔಷಧವೂ ಆಗಿದೆ.
ಔಷಧ ಮತ್ತು ಆಹಾರವಾಗಿ ಕೆಲಸ ನಿರ್ವಹಿಸುವ ಕ್ಷೀರವನ್ನು ಕುಡಿಯುವವರ ತ್ವಚೆಯು ಕಾಂತಿಯುತವಾಗಿರುವುದಲ್ಲಿ ಸಂದೇಹವೇ ಇಲ್ಲ.

🔹ಮಕ್ಕಳು ಹೆಚ್ಚು ಹೆಚ್ಚು ಹಾಲನ್ನು ಸೇವಿಸುವ ಕಾರಣದಿಂದಲೇ ಕಾಂತಿಯುತವಾಗಿ ಕಾಣುತ್ತವೆ.

🔹ಕ್ಷೀರವು ಮನೋಶಾಂತಿಯನ್ನು, ಸೌಮ್ಯತೆಯನ್ನು ದಯಪಾಲಿಸುತ್ತದೆ. ಇದೂ ಸಹ ಶರೀರದ ಕಾಂತಿಗೆ ಬಹು ದೊಡ್ಡ ಕಾರಣವಾಗಿದೆ.

🔹ಪಿತ್ತದ ವಿಕಾರಗಳಲ್ಲಿ ಆಯುರ್ವೇದವು ಔಷಧಿ ದ್ರವ್ಯಗಳನ್ನು ಹಾಲಿನಲ್ಲಿ ಕುದಿಸಿ ಸೇವಿಸುವ ಕ್ಷೀರಪಾಕ ಎಂಬ ವಿಧಾನವನ್ನು ಪ್ರಧಾನವಾಗಿ ಹೇಳುತ್ತದೆ.

🔹ಹಾಲಿನ ಸೋಪು, ಕ್ರೀಮ್, ಹಾಲಿನ ಲೇಪಗಳನ್ನು ಹಾಕುವುದರಿಂದ ಅತ್ಯಲ್ಪ ಲಾಭವನ್ನು ಪಡೆಯಬಹುದಷ್ಟೇ, ಅದೇ ಹಾಲನ್ನು ಸೇವಿಸಿದರೇ ಅತೀ ಹೆಚ್ಚು ಲಾಭವನ್ನು ಗಳಿಸಬಹುದು.

🔹ಯಾರ ಕೂದಲು ಕಾಂತಿಹೀನಾವಾಗಿದೆಯೋ, ಅಕಾಲದಲ್ಲಿ ಬೀಳುಪಾಗಿದೆಯೋ ಮತ್ತು ಯಾರ ಚರ್ಮವು ಅಕಾಲದಲ್ಲಿ ಸುಕ್ಕಾಗಿದೆಯೋ ಅವರುಗಳು ಸತತ ಇಪ್ಪತ್ತೊಂದು ದಿನಗಳ ಕಾಲ ಹಾಲು ಮತ್ತು ಅನ್ನವನ್ನು ವೈದ್ಯರ ಸಲಹೆಯ ಮೇರೆಗೆ ಬಳಸಿ. ಹೀಗೆ ಮಾಡಿ ಬಿಳಿಕೂದಲು ಕಪ್ಪಾದದ್ದನ್ನೂ, ಚರ್ಮದ ಸುಕ್ಕು ನಿವಾರಣೆಯಾದದ್ದನ್ನೂ ಕಂಡಿದ್ದೇವೆ.

⏭️ಹಾಗೆಯೇ, ಕ್ಷೀರವನ್ನು ಸೇವಿಸದ ಅನೇಕ ಯುವಕ-ಯುವತಿಯರ ತ್ವಚೆ, ನೇತ್ರ, ಕೇಶಗಳ ಕಾಂತಿ ಗಣನೀಯವಾಗಿ ಕುಂದಿರುವುದನ್ನು ಕಂಡಿದ್ದೇವೆ.
ಹಾಗಾಗಿ, ಆತ್ಮೀಯರೇ ದಯಮಾಡಿ ಬಾಲ್ಯದಿಂದ ಇಪ್ಪತ್ತೈದು ವರ್ಷಗಳ ವರೆಗೆ ತಪ್ಪದೇ ನಿತ್ಯವೂ ಕ್ಷೀರ ಬಳಕೆಯನ್ನು ಮಾಡಿ.

       🔐  ➖🥛🔄 🔑➖ 🔓

       "ಇದೇ ಕಾಂತಿಯ ರಹಸ್ಯ"

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!