ಅಡುಗೆ ಮನೆಯೇ ಆಸ್ಪತ್ರೆ, ಆಹಾರವೇ ಔಷಧ…!

ಅಡುಗೆ ಮನೆಯೇ ಆಸ್ಪತ್ರೆ, ಆಹಾರವೇ ಔಷಧ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಅಡುಗೆ ಮನೆಯೇ ಆಸ್ಪತ್ರೆ, ಆಹಾರವೇ ಔಷಧ.

ಉತ್ತಮ ಗುಣಮಟ್ಟದ ವಸ್ತುವನ್ನು ಖರೀದಿಸಿದರೆ ಅದು ತನ್ನ ಕೆಲಸವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ.

ವಸ್ತುವಿನ ಗುಣಮಟ್ಟವು ಯಾವಾಗಲೂ ಅದರ ತಯಾರಿಕೆಯಲ್ಲಿ ಬಳಸಿರುವ ಕಚ್ಚಾ ವಸ್ತುವಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಅದರ ಕಾರ್ಯಸಾಮರ್ಥ್ಯವು ಅದನ್ನು ತಯಾರಿಸುವ ವಿಧಾನದ ಮೇಲೆ ಅವಲಂಬಿತವಾಗಿದೆ.

ಒಟ್ಟಾರೆ, ಒಂದು ವಸ್ತುವಿನ ಕಾರ್ಯ ಸಾಮರ್ಥ್ಯ ಮತ್ತು ದೀರ್ಘಬಾಳಿಕೆಯು ಅದರ ಕಚ್ಚಾ ವಸ್ತು ಮತ್ತು ತಯಾರಿಕೆಯ ವಿಧಾನದ ಮೇಲೆ ನಿರ್ಧಾರವಾಗುತ್ತದೆ ಎಂಬುದು ಈ ಸೃಷ್ಠಿಯಲ್ಲಿ ನಿರ್ವಿವಾದಿತವಾಗಿ ಸಿದ್ಧವಾಗಿದೆ.

ನಮ್ಮ ಶರೀರವು ಹುಟ್ಟಿದಾಗ 2 ಅಥವಾ 3 ಕೆ.ಜಿ ಯಷ್ಟು ಮಾತ್ರ ತೂಕವನ್ನು ಹೊಂದಿದ್ದು ಈಗ ಸರಿಸುಮಾರು 60 ಅಥವಾ 70 ಕೆ.ಜಿ ಆಗಿರುವುದು ಆಹಾರದಿಂದಲೇ ಹೊರತು ಇನ್ನಾವುದರಿಂದಲೂ ಅಲ್ಲ. ಹಾಗಾಗಿ, ಈ ಶರೀರದ ಕಚ್ಚಾ ವಸ್ತುವಾದ ಆಹಾರದ ಗುಣಮಟ್ಟವನ್ನೇ ಶರೀರವು ಹೋಲುತ್ತದೆ.

ನಾನು ಏನನ್ನಾದರೂ ತಿನ್ನುತ್ತೇನೆ ಆದರೆ ಶರೀರ ಮಾತ್ರ ಸದೃಢವಾಗಿರಬೇಕು, ಎಂದು ಬಯಸುವರು, ಕಳಪೆ ಮಟ್ಟದ ಪ್ಲಾಸ್ಟಿಕ್ ಬಳಸಿ ಅತ್ಯುತ್ತಮ ಗುಣಮಟ್ಟದ ಛೇರ್ ಒಂದನ್ನು ಬಯಸಿದಂತೆ ಹಾಸ್ಯಾಸ್ಪದವಾಗುತ್ತದೆ.

ಅಂದರೆ,
“ನಮ್ಮ ಆಹಾರವೇ ನಮಗೆ ಔಷಧವಾಗಿ ರೋಗಬಾರದಂತೆ ಸಂರಕ್ಷಿಸುತ್ತದೆ”.

ಹಾಗಾಗಿ, ಆಹಾರದ ಆಯ್ಕೆಯಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಅತ್ಯುತ್ತಮ ಗುಣಮಟ್ಟದ ಪ್ಲಾಸ್ಟಿಕ್ ಬಳಸಿಯೂ ಸಹ ಕಳಪೆ ಮಷಿನ್ ಗಳಿಂದ ತಯಾರಿಸಿದ ಛೇರ್ ಸದೃಢ ಮತ್ತು ದೀರ್ಘ ಬಾಳಿಕೆಯನ್ನು ಹೊಂದಿರಲಾರದು.

ಹಾಗೆಯೇ,
ಉತ್ತಮ ಆಹಾರ ಪದಾರ್ಥಗಳನ್ನು ಆಯ್ಕೆಮಾಡಿಕೊಂಡರೂ ಸಹ ಅದನ್ನು ಸಂಸ್ಕರಿಸಿ ತಯಾರಿಸುವ ವಿಧಾನದಲ್ಲಿ ತಪ್ಪು ಮಾಡುತ್ತಾ, ಶರೀರಕ್ಕೆ ಹೊಂದುಕೊಳ್ಳದ ರೀತಿಯಲ್ಲಿ ಸಿದ್ಧಪಡಿಸಿದರೆ ಅದನ್ನು ಸೇವಿಸಿದ ಶರೀರವು ದುರ್ಬಲವಾಗುವುದು ಮತ್ತು ದೀರ್ಘಕಾಲ ಬಾಳದು.
ಅಂದರೆ, ಸಣ್ಣ ಸಣ್ಣ ರೋಗಗಳಿಗೂ ಬೇಗ ಹಾನಿಗೊಳಗಾಗುವುದು.

▪️ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಎಂದರೇನು??
▪️ಶರೀರಕ್ಕೆ ಒಗ್ಗುವ ರೀತಿಯಲ್ಲಿ ಆಹಾರ ತಯಾರಿಸುವುದು ಎಂದರೇನು??
⤴️ಈ ಎರಡು ಪ್ರಶ್ನೆಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಉತ್ತರ ಕಂಡುಕೊಂಡ ದಿನ ವ್ಯಕ್ತಿ, ಕುಟುಂಬ, ಸಮಾಜ ಸದೃಢ ಆರೋಗ್ಯವನ್ನು ಹೊಂದುತ್ತದೆ.

🍃🍃ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🙏

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9606616165
9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!