ಕೊರೋನಾ ಸೋಂಕಿನ ಎಚ್ಚರಿಕೆಯ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ..!

ಕೊರೋನಾ ಸೋಂಕಿನ ಎಚ್ಚರಿಕೆಯ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

ಕೊರೋನಾ ಸೋಂಕಿನ ಎಚ್ಚರಿಕೆಯ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ
••••••••••••••••••••••••••••••••••••••••••

ಸೋಂಕಿನ ಬಗ್ಗೆ ಯಾರೂ ಧೈರ್ಯಗೆಡುವುದು ಬೇಡ ಹಾಗೆಯೇ ನಿರ್ಲಕ್ಷ್ಯ ಮಾಡುವುದೂ ಅಪಾಯಕರ.

1️⃣ಮೊದಲನೇ ಹಂತ:
ಸೋಂಕು ನಮ್ಮ ದೇಹವನ್ನು ಪ್ರವೇಶ ಮಾಡಿರುವುದರ ಲಕ್ಷಣಗಳು:

ಇಂದು ಸೋಂಕಿತರ ಸಂಪರ್ಕದಿಂದ ವೈರಾಣುಗಳು ನಮ್ಮ ದೇಹವನ್ನು ಪ್ರವೇಶಿಸಿದ್ದಲ್ಲಿ 24-48 ಗಂಟೆಗಳಲ್ಲಿ ಕೆಳಗಿನ ಎರಡು ಲಕ್ಷಣಗಳು ಕಾಣಿಸುತ್ತವೆ.

★ಜ್ವರ ಬಂದಂತೆ ಅನುಭವವಾಗುವುದು, ಸ್ವಲ್ಪ ಮಟ್ಟಿಗೆ ಅಂದರೆ 99 ಡಿಗ್ರಿ F ಜ್ವರ ಕಾಣಿಸಿಕೊಳ್ಳಲೂಬಹುದು, 2-3 ತಾಸುಗಳವರೆಗೆ ಈ ಲಕ್ಷಣ ಇದ್ದು ತಂತಾನೇ ಗುಣವಾಗುತ್ತದೆ.

★ವಿಪರೀತ ಮೈ ಕೈ ನೋವು ಅರ್ಧದಿನದವರೆಗೆ, ಕೆಲವರಿಗೆ ದಿನವಿಡೀ ಇದ್ದು ಮಾಯವಾಗುತ್ತದೆ.
ಈ ಹಂತದಲ್ಲಿ ನಮ್ಮಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ತುಂಬಾ ಕಡಿಮೆ.ಆದರೆ, ತಕ್ಷಣವೇ ಕೆಲ ಔಷಧಿಗಳನ್ನು ಸೇವಿಸುವುದು ಅನಿವಾರ್ಯ. ಅವುಗಳೆಂದರೆ,
ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯಗಳು.
ಸರ್ವಜ್ವರ ನಿವಾರಕವಾದ ಅಮೃತಬಳ್ಳಿಯ ಕಾಂಡದಿಂದ ತಯಾರಿಸಿದ ರಸ.
ಗೋಧಿ, ಉದ್ದು, ಮೈದಾ, ಎಣ್ಣೆ, ಸಿಹಿ ಹೊರತುಪಡಿಸಿದ ಪಚನಕ್ಕೆ ಹಗುರವಾದ ಆಹಾರಪಾನೀಯಗಳು.
ಈ ಹಂತದಲ್ಲಿ ಯಾವುದೇ ಅಂಟಿಬಯೋಟಿಕ್ ಗಳ ಅವಶ್ಯಕತೆ ಇರುವುದಿಲ್ಲ, ಏಕೆಂದರೆ, ಅಂಟಿಬಯೋಟಿಕ್ ಔಷಧಿಗಳಿಂದ ರೋಗನಿರೋಧಕಶಕ್ತಿ ಕುಗ್ಗುತ್ತದೆ.
“ನಮ್ಮ ಶಕ್ತಿಯಿಂದಲೇ ಈ ವೈರಸ್ ಅನ್ನು ಗೆಲ್ಲಬಹುದೇ ಹೊರತು ಜೀವಾಣುನಾಶಕ ಔಷಧಗಳಿಂದ ಅಲ್ಲ”.

2️⃣ಎರಡನೇ ಹಂತ:
ಸೋಂಕು ವ್ಯಕ್ತವಾಗುವ ಹಂತ.
ಮೊದಲ ಹಂತದ 5-7 ದಿನಗಳಲ್ಲಿ , ಕೆಲವರಿಗೆ 14 ದಿನಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಮಾತ್ರ ಈ ಲಕ್ಷಣಗಳು ಕಾಣುತ್ತವೆ. ಮೇಲಿನ ಔಷಧ-ಆಹಾರ- ವಿಹಾರ ಪಾಲಿಸದಿದ್ದಲ್ಲಿ, ಸಕ್ಕರೆ ರೋಗ ನಿಯಂತ್ರಣವಿರದ್ದಿದ್ದಲ್ಲಿ, ಜೀವಿತಾವಧಿಯಲ್ಲಿ ಆರೋಗ್ಯಕರ ನಿಯಮಗಳನ್ನು ಪಾಲಿಸದ್ದಿದ್ದಲ್ಲಿ ಮಾತ್ರ ಸೋಂಕು ಮುಂದಿನ ಈ ಹಂತಕ್ಕೆ ಬರುವ ಸಾಧ್ಯತೆಗಳು ಹೆಚ್ಚು.
★ಲಕ್ಷಣಗಳು:
-ಜ್ವರ
-ಮೈ ಕೈ ನೋವು
-ತಲೆ ಭಾರ
-ಸ್ವಲ್ಪ ಮಟ್ಟಿನ ನೆಗಡಿ ಕಾಣಿಸಿಕೊಳ್ಳುತ್ತದೆ.
ಈ ಹಂತದಲ್ಲೇ ಉಸಿರಾಟದ ತೊಂದರೆ, ಅಪಾಯದ ಹಂತ ಮುಂತಾದ ಕಲ್ಪನೆಗಳ ಬಗ್ಗೆ ಆತಂಕ ಪಡುವುದು ಬೇಡ.

🔴ಮುನ್ನೆಚ್ಚರಿಕೆಗಳು:
▪️ತಕ್ಷಣವೇ ರಕ್ತಪರೀಕ್ಷೆ ಮಾಡಿಸಿ.
▪️ಮೊದಲೇ ಹೇಳಿದ ಆಯುರ್ವೇದ ಕಷಾಯಗಳನ್ನು ಮುಂದುವರೆಸಿ.
▪️ಎರಡನೇ ಹಂತದ ಆಯುರ್ವೇದ ಔಷಧಿಗಳಿಂದ ಇನ್ನೂ ಹೆಚ್ಚಿನ ಬಲವನ್ನು ಗಳಿಸಬಹುದು ಮತ್ತು ಪುಪ್ಪುಸ, ಹೃದಯಗಳನ್ನು ಸಂರಕ್ಷಿಸಿಕೊಳ್ಳಬಹುದು.ಹಾಗಾಗಿ, ಸೂಕ್ತ ಆಯುರ್ವೇದ ವೈದ್ಯರನ್ನು ಭೇಟಿಯಾಗಿ.
▪️ರಕ್ತ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಪಾಸಿಟಿವ್ ಅಥವಾ ನೆಗೆಟಿವ್ ಬಂದರೂ ನಿರ್ಲಕ್ಷ್ಯ ಬೇಡ.
▪️ರಕ್ತ ಪರೀಕ್ಷೆಯ ಬೇರೆ, ಅಂದರೆ, WBC , Platelet, CRP, D-Dimer ಮುಂತಾದವುಗಳ ಆಧಾರದಲ್ಲಿ ಆರೋಗ್ಯದ ಹಂತವನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದು.
▪️ಸೂಕ್ತ ವೈದ್ಯರನ್ನು ಭೇಟಿ ಮಾಡಿ.
▪️ಅಂಟಿಬಯೋಟಿಕ್ಸ್ ಬೇಕಾಗಬಹುದು.
▪️ಕೇವಲ ಅಲೋಪತಿ ಚಿಕಿತ್ಸೆಯ ಮೇಲೆ ಮಾತ್ರ ಅವಲಂಭಿತರಾಗುವುದು ಬೇಡ. ಏಕೆಂದರೆ, ಒಟ್ಟಾರೆ ಮನುಷ್ಯ ಗುಣಮುಖರಾಗುವುದು ಮುಖ್ಯವಾಗಿರುತ್ತದೆ.
▪️ಅತ್ಯಂತ ಎಚ್ಚರಿಕೆವಹಿಸಬೇಕಾದ ಸಂಗತಿಯೆಂದರೆ, ಆಹಾರ, ವಿಹಾರ, ಪಾನೀಯ,ವಿಶ್ರಾಂತಿ ಮತ್ತು ನಿದ್ರೆ.
▪️ಮಲಬದ್ಧತೆಯಾಗದಂತೆ ಖಂಡಿತ ಎಚ್ಚರವಹಿಸಿ.

ಈ ಎಲ್ಲಾ ಉಪಚಾರಗಳಿಂದ 3 ರಿಂದ 7 ದಿನಗಳ ಒಳಗೆ ಗುಣಮುಖರಾಗಬಹುದು.

3️⃣ಮೂರನೇ ಹಂತ—-
ಇದನ್ನು ನಾಳಿನ ಸಂಚಿಕೆಯಲ್ಲಿ ನೋಡೋಣ.

•••••••••••••••••••••••••••••••••••••••••••••
ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!