ಶೂಲ ನಿವಾರಕ ಶಂಖಭಸ್ಮ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-35…!

ಶೂಲ ನಿವಾರಕ ಶಂಖಭಸ್ಮ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-35…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-35

ಶೂಲ ನಿವಾರಕ ಶಂಖಭಸ್ಮ

34)ಶಂಖ ಭಸ್ಮ

ಕರುಳಿನ ಪಿತ್ತವಿಕಾರ
ಮತ್ತು
ಪುಪ್ಪುಸಗಳ ವಿಕಾರ
ಇವುಗಳ ಚಿಕಿತ್ಸಾ ಸಂಬಂಧಿ ಯಾವುದೇ ಆಯುರ್ವೇದದ ಔಷಧೋತ್ಪನ್ನಗಳಲ್ಲಿ ಸಾಮಾನ್ಯವಾಗಿ “ಶಂಖಭಸ್ಮ”ವನ್ನು ಬಳಸುತ್ತಾರೆ.

ಪಿತ್ತದಿಂದ ಉಂಟಾದ ಉದರಶೂಲಗಳಲ್ಲಿ ಕೆಲವೇ ನಿಮಿಷಗಳಲ್ಲಿ ಶೂಲನಿವಾರಕವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು “ಶಂಖಭಸ್ಮ”ವು ಹೊಂದಿದೆ.
ಅಪೆಂಡಿಸೈಟಿಸ್, ಅಲ್ಸರ್, ಕರುಳು ಹಿಂಡುವಿಕೆ(spasm), ಮೂತ್ರಉರಿ, ನೋವಿನಿಂದ ಕೂಡಿದ ಮೂತ್ರ ಪ್ರವೃತ್ತಿ ಮುಂತಾದವುಗಳಲ್ಲಿ ಉಂಟಾಗುವ ತೀವ್ರತರ ವೇದನೆಗಳನ್ನು ಕೆಲವು ಕ್ಷಣಗಳಲ್ಲಿ “ಶಂಖಭಸ್ಮ”ವು ಪರಿಹರಿಸುತ್ತದೆ.

ಪುಪ್ಪುಸಗಳ ಗಂಭೀರ ವಿಕಾರಗಳಲ್ಲಿ(interstitial lung dieases) ಹಾಗೂ ರೋಗಿಗಳು ಆಕ್ಸಿಜನ್ ಕೊರತೆಯಿಂದ ವೆಂಟಿಲೇಟರ್ ಗಳಲ್ಲಿ ಆಶ್ರಯ ಪಡೆದಿರುವ ಅವಸ್ಥೆಗಳಲ್ಲಿಯೂ ಸಹ “ಶಂಖಭಸ್ಮ”ವು ಶೀಘ್ರವಾಗಿ ಪರಿಣಾಮವನ್ನು ಬೀರುತ್ತದೆ. ಇಂತಹ ಅವಸ್ಥೆಗಳಲ್ಲಿ “ಅಬ್ರಕಭಸ್ಮ” , “ಸ್ವರ್ಣಭಸ್ಮ”ಗಳೊಂದಿಗೆ “ಶಂಖಭಸ್ಮ”ದ ಪ್ರಯೋಗವು ಗಣನೀಯ ಪರಿಣಾಮವನ್ನು ಬೀರಿರುವುದನ್ನು ಕಣ್ಣಾರೆ ಕಂಡಿದ್ದೇವೆ.

ಹಾಗಾಗಿ,
ರೋಗಿಯು ಅತ್ಯಾಯಿಕ ಅವಸ್ಥೆಯನ್ನು (respiratory emergency) ತಲುಪದಂತೆ ತಡೆಯಲು ಕಷಾಯ ಚೂರ್ಣದಲ್ಲಿ “ಶಂಖಭಸ್ಮ”ವನ್ನು ಬಳಸಲಾಗಿದೆ.

“ಶಂಖಭಸ್ಮ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://apps.who.int/iris/bitstream/handle/10665/206025/B0104.pdf;jsessionid=1D3817A7660088B5D7CDE3BB64B8F3FF?sequence=1

ಆಸಕ್ತರು “ಶಂಖಭಸ್ಮ” ದ ಮೇಲೆ ನಡೆದ ಇನ್ನೂ ಅನೇಕ ಸಂಶೋಧನೆಗಳನ್ನು ಅಂತರ್ಜಾಲದಲ್ಲಿ ಹುಡುಕಿ ನೋಡಬಹುದು.

“ಶಂಖಭಸ್ಮ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!