ಅನಂತ ಗುಣಕಾರಿ ಅಭ್ರಕ ಭಸ್ಮ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-34

ಅನಂತ ಗುಣಕಾರಿ ಅಭ್ರಕ ಭಸ್ಮ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-34

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-34

ಅನಂತ ಗುಣಕಾರಿ ಅಭ್ರಕ ಭಸ್ಮ”

33) ಅಭ್ರಕ ಭಸ್ಮ

ಪುಪ್ಪುಸದ ಜೀವಕೋಶಗಳನ್ನು ಪೋಷಣೆ ಮಾಡಬೇಕೆಂದು ಮತ್ತು ಅದರ ರೋಗನಿರೋಧಕಶಕ್ತಿಯನ್ನು ವರ್ಧಿಸಬೇಕೆಂದು ಪ್ರಯೋಗಿಸುವ ಯಾವುದೇ ವೈದ್ಯ ಪದ್ಧತಿಗಳ ಔಷಧಿಗಳು ಕಫವನ್ನು ಹೆಚ್ಚಿಸುವುದು (mucolytic action, expectorant) ಅನಿವಾರ್ಯ ಎಂಬಂತೆ ಕಂಡುಬರುತ್ತದೆ.

ಆದರೆ,
“ಅಭ್ರಕ ಭಸ್ಮ”ವು ಇದರ ತದ್ವಿರುದ್ಧವಾಗಿ ಕಫವನ್ನು ವರ್ಧಿಸುವ ಬದಲು ಕಡಿಮೆಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೇ, ಉಸಿರ್ನಾಳದ ಹಸಿತನವನ್ನು ಹಾಗೆಯೇ ಉಳಿಸಿಕೊಂಡು ಲೇಪಿತ ಕಫವನ್ನು ಕರಗಿಸುತ್ತದೆ.

“ಅಭ್ರಕ ಭಸ್ಮ”ವು ಇಂತದೇ ಪರಿಣಾಮವನ್ನು ಯಕೃತ್, ಕರುಳು, ರಕ್ತನಾಳಗಳಲ್ಲಿಯೂ ಮಾಡುವುದರಿಂದ ಪುಪ್ಪುಸದ ಒಳಗೂ ಮತ್ತು ಅಲ್ಲಿ ಹರಿಯುವ ಸೂಕ್ಷ್ಮ ರಕ್ತನಾಳಗಳಲ್ಲಿ ಶ್ರೇಷ್ಠ ಪೋಷಕವಾಗಿಯೂ, ಕಫನಿವಾರಕವಾಗಿಯೂ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತದೆ.

ಇಂತಹ “ಅಭ್ರಕ ಭಸ್ಮ” ದ ಗುಣವನ್ನು ವರ್ಧಿಸಲು ಶತ(ನೂರು), ಸಹಸ್ರ(ಸಾವಿರ) ಬಾರಿ ಅಗ್ನಿ ಪುಟಕ್ಕಿಟ್ಟು ಸಂಸ್ಕರಿಸುತ್ತಾರೆ. ಅವುಗಳನ್ನು ಕ್ರಮವಾಗಿ ‘ಶತಪುಟಿ ಅಭ್ರಕ ಭಸ್ಮ’ ‘ಸಹಸ್ರ ಪುಟಿ ಅಭ್ರಕ ಭಸ್ಮ’ ಎಂದು ಕರೆಯುತ್ತಾರೆ.
ಈ ಸಹಸ್ರಪುಟ “ಅಬ್ರಕಭಸ್ಮ”ವು ಪುಪ್ಪುಸಗಳ ಬಹು ಆಳದ ದೋಷಗಳನ್ನು ಅಥವಾ ವ್ಯಾಧಿಗಳನ್ನು ನಿವಾರಿಸುತ್ತದೆ.
ಉದಾಹರಣೆಗೆ: ಕ್ಷಯ ರೋಗ

ಇಂದು ನಮ್ಮನ್ನು ಕಾಡುತ್ತಿರುವ ಸೋಂಕು ಪುಪ್ಪುಸ ಮತ್ತು ಅಲ್ಲಿನ ರಕ್ತನಾಳಗಳನ್ನು ಅವಲಂಭಿಸಿ ಬೆಳೆಯುತ್ತಿದ್ದು “ಅಭ್ರಕ ಭಸ್ಮ” ಯೋಜನೆಯು ಚಿಕಿತ್ಸೆಯಲ್ಲಿ ರೋಗನಿವಾರಕವಾಗಿಯೂ, ವ್ಯಾಧಿಕ್ಷಮತ್ವ ವರ್ಧಕವಾಗಿಯೂ ಮತ್ತು ಬಲಕಾರಕವಾಗಿಯೂ ಕೆಲಸ ಮಾಡುತ್ತದೆ.

“ಅಭ್ರಕ ಭಸ್ಮ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.rjpbcs.com/pdf/2016_7(6)/%5b325%5d.pdf

ಆಸಕ್ತರು “ಅಭ್ರಕ ಭಸ್ಮ” ದ ಮೇಲೆ ನಡೆದ ಇನ್ನೂ ಅನೇಕ ಸಂಶೋಧನೆಗಳನ್ನು ಅಂತರ್ಜಾಲದಲ್ಲಿ ಹುಡುಕಿ ನೋಡಬಹುದು.

“ಅಭ್ರಕ ಭಸ್ಮ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!